ದಿಲ್ಲಿಗಳು

ದಿಲ್ಲಿಗಳು 

ಮೂಲ ಹಿಂದಿ ರಚನೆ: ಶಲಭ್ ಶ್ರೀರಾಮ ಸಿಂಹ 
ಕನ್ನಡಕ್ಕೆ: ಸಿ.ಪಿ. ರವಿಕುಮಾರ್



ಆನೆಯ ನಗ್ನ  ಬೆನ್ನಿನ ಮೇಲೆ
ದಾರಾ ಶಿಕೋನನ್ನು 
ಬೀದಿ ಬೀದಿ ಅಲೆಸಿದಾಗ 
ದಿಲ್ಲಿ ಸುಮ್ಮನಿತ್ತು. 

ರಕ್ತದ  ಮಡುವಿನಲ್ಲಿ ನಿಂತು
ಮುಗುಳ್ನಗುತ್ತಿದ್ದಾಗ ನಾದಿರ್ ಶಾಹ್
ದಿಲ್ಲಿ ಸುಮ್ಮನಿತ್ತು.
ಕೆಂಪು ಕೋಟೆಯ ಮುಂದುಗಡೆ
ಬಂದಾ ಬೈರಾಗಿಯ ಬಾಯಲ್ಲಿ
ತುರುಕಿದಾಗ ಸ್ವಂತ ಮಗನ
ರಕ್ತಸಿಕ್ತ ಕರುಳಿನ ಚೂರು
ದಿಲ್ಲಿ ಸುಮ್ಮನಿತ್ತು.

ಬಹಾದುರ್ ಶಾಹ್ ಜಫರನನ್ನು
ಬಂಧಿಸಿದಾಗ
ದಿಲ್ಲಿ ಸುಮ್ಮನಿತ್ತು.
ಮೀರ್ ಗಾಲಿಬ್
ತೊರೆದು ಹೊರಟಾಗ
ದಿಲ್ಲಿ ಸುಮ್ಮನಿತ್ತು.

ದಿಲ್ಲಿಗಳಿರುವುದೇ
ಸುಮ್ಮನಿರುವುದಕ್ಕೆಸದಾ.
ಅವುಗಳ ಏಕಾಂತದಲ್ಲಿ
ಎಂದೂ ಯಾರೂ ಏನೂ
ಇರುವುದಿಲ್ಲವೇನೋ ಬಹುಶಃ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)