ಸಿ ಪಿ ರವಿಕುಮಾರ್ ಮಾ ಡುವವರು ಆಡರು, ಆಡುವವರು ಮಾಡರು ಎನ್ನುವುದು ಹಳೆಯ ಕಾಲದ ಮಾತಾಯಿತು. ಇಂದು ಯಾವುದೇ ವಸ್ತುವನ್ನು (ತಯಾರು) ಮಾಡಿದವರು ಆsಡ್ ಮಾಡದಿದ್ದರೆ ಅವರನ್ನು ಯಾರು ಕೇಳುತ್ತಾರೆ ಹೇಳಿ? ಉದಾಹರಣೆಗೆ ಒಂದು ಉಪಾಹಾರಗ್ರಹವನ್ನೇ ತೆಗೆದುಕೊಳ್ಳಿ. ದೋಸೆಯ ಘಮಘಮ ಪರಿಮಳವನ್ನು ಆಸ್ವಾದಿಸಿ ಅಥವಾ ದೋಸೆಗೂ ಹಂಚಿಗೂ ನಡೆಯುವ ಚೊಂಯ್ ಎಂಬ ಪ್ರೇಮಸಲ್ಲಾಪದಿಂದ ಆಕರ್ಷಿತರಾಗಿ ಜನ ಉಪಾಹಾರಗ್ರಹಗಳಿಗೆ ಮುತ್ತುತ್ತಿದ್ದ ಕಾಲ ಒಂದಿತ್ತು. ದೋಸೆ ಎಂದರೆ ಬರೀ ದೋಸೆ ಮಾತ್ರ ಆಗಿದ್ದ ಕಾಲವದು. ಇದು ಹೇಳಿ ಕೇಳಿ ಇನೊವೇಶನ್ ಯುಗ! ಒಂದು ತೊಂಬತ್ತೊಂಬತ್ತು ವಿಧದ ದೋಸೆಗಳಾದರೂ ಇಂದು ಇವೆ. "ಚಿನ್ನದ ಬಣ್ಣ ಬರುವವರೆಗೂ ಕಾವಲಿಯ ಮೇಲೆ ಬೇಯಿಸಿ" ಎಂಬ ಸೂಚನೆಯನ್ನು ಹಿಂದೆ ಅಡುಗೆ ಸಾಹಿತ್ಯದಲ್ಲಿ ಕಾಣಬಹುದಿತ್ತು. ಇಂದು ಈ ಸೂಚನೆಗೆ ವಿಭಿನ್ನ ಅರ್ಥವಿದೆ! ಏಕೆಂದರೆ ಚಿನ್ನದ ಹಾಳೆಯನ್ನೇ ಆಲೂಗಡ್ಡೆ ಪಲ್ಯದ ಮೇಲೆ ಏರಿಸಿ ಗೋಲ್ಡನ್ ದೋಸಾ ತಯಾರಿಸಿದ್ದಾರೆ! ಕ್ಷಮಿಸಿ, ಮಾತು ಎಲ್ಲಿಗೋ ಹೋಯಿತು. ಉಪಾಹಾರಗ್ರಹದಲ್ಲಿ ಇಂಥ ಹೊಸಹೊಸ ಬಗೆಯ ದೋಸೆಗಳನ್ನು ಮಾಡಿದವನು ಅವುಗಳ ಬಗ್ಗೆ ಗಟ್ಟಿಯಾಗಿ ಆಡದಿದ್ದರೆ ಯಾರಿಗೆ ಗೊತ್ತಾಗುತ್ತದೆ? ತನಗೆ ಸಾಟಿಯೇ ಇಲ್ಲವೆಂದು ಜಂಬ ಪಡುತ್ತಿದ್ದ ಮಸಾಲೆದೋಸೆಗೆ ಜಬರ್ದಸ್ತ್ ಪೈಪೋಟಿಯಾಗಿ ಪೀಟ್ಜಾ, ಬರ್ಗರ್ ಬಂದಿವೆ! ಹೀಗಾಗಿ ...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ