ಏಳು ಹನಿಗವಿತೆಗಳು

(1)

ಐಟೀ ಜಗತ್ತಿನಲ್ಲಿ 
ನೆನ್ನೆಮೊನ್ನೆಯವರೆಗೂ
ಬಿಟ್ ಸೊನ್ನೆಯಾದರೆ ಸುಳ್ಳು
ಬಿಟ್ ಒಂದಾದರೆ ನಿಜ
ಕ್ವಾಂಟಂ ದಿನಗಳಲ್ಲಿ
ಅರ್ಧಸತ್ಯವು
ನಿಜವೂ ಆಗಿರಬಹುದು
ಫೇಕ್ ಆಗಿರಬಹುದು.


(2)
ಸೆಲ್ ಎಂದರೆ ವಿದ್ಯುತ್ ನೀಡುವ ಸಾಧನ
ಹಲವು ಸೆಲ್ ಸೇರಿದರೆ ಬ್ಯಾಟರಿ
ಶೆಲ್ ಹೊರಗಿನ ಚಿಪ್ಪು ಮಾರಾಯರೆ
ಸೆಲ್ ಅನ್ನಲು ಛೇ ಶೆಲ್ ಎನಬ್ಯಾಡರೀ


(3) 

"ಸ್ವಚ್ಛತೆ ಅಂದರೇನು? ಅ-ಮಲಿನ ಸಮಾಜ"
ಎಂದು ವಾದಿಸುತ್ತಿದ್ದ ಸಾಹಿತಿ ಮನೋಜ
ಫ್ರೀ ವ್ಹಿಸ್ಕಿ ಸಿಕ್ಕಾಗ ಮಾಡುತ್ತ ಮೋಜ
ಸೃಷ್ಟಿಸಿದ ಕುಳಿತಲ್ಲೇ ಅಮಲಿನ ಸಮಾಜ


(4)

ಇಂಗ್ಲಿಷ್ನಲ್ಲಿ ಮಾತಾಡಿಸುತ್ತಾರೆ ಅವನನ್ನು "Hi"
ಕನ್ನಡದಲ್ಲಿ ಮಾತಾಡಿಸುತ್ತಾರೆ "ಲೋ"
ಇದಕ್ಕೇ ಇರಬಹುದು ಕನ್ನಡ ಕಲಿಯೋದಕ್ಕೆ 
ಅವನಿಗೆ ಉತ್ಸಾಹವೇ "Low"


(5)

ನಿರುದ್ಯೋಗ ಏರಿದೆಯಂತಲ್ರೀ, ಕೇಳಿದಳು ಪತ್ನಿ
ಹೌದಾ ಎಂದನು ಪತಿರಾಯ ರುಬ್ಬುತ್ತ ಚಟ್ನಿ
ಫೇಸ್ ಬುಕ್ ಓದುತ್ತ ಕುಳಿತಳು ನಿರುದ್ಯೋಗಿ
ದೋಸೆ ಹೊಯ್ಯುತ್ತಿರುವನು ಕರ್ಮಯೋಗಿ

(6) 

ಫೇಸ್ ಬುಕ್ ಖಾತೆ ತೆರೆದಾಗ ವಿಶ್ವಮಿತ್ರ 
ವಿಶ್ವವೇ ಅವನಿಗೆ ಫ್ರೆಂಡ್ ಆಯ್ತು ಗೊತ್ರಾ
ವಿಶ್ ಮಾಡಿದರೆ ಅವನು ಮಾಡಲೇ ಇಲ್ಲ ಪ್ರತಿವಿಶ್
ಈಗ ನೋಡಿರಿ ಪಾಪ ಸ್ಟೇಟಸ್ "ವಿಶ್ವಾಮಿತ್ರ"


(7)

ಬೇಡದಾ ಕಡೆ ದೀರ್ಘ ಬೇಕದಕಡೆಗಿಲ್ಲ ಅಯ್ಯೋ
ಪಾಡೇನು ಹೀಗಾದರೆ ಕನ್ನಡದ್ದೆಂದು ಪಂಡಿತರು
ತೀಡುತ್ತಿರಲು ಉತ್ತರಪತ್ರಿಕೆ 'ವಿಶ್ವಾಮಿತ್ರ' 'ಕಮಲಾ'
ನೋಡಿ ಮೌನ ತಳೆದದ್ದೇಕೆ ಮಂಕುತಮ್ಮ


-- ಸಿ. ಪಿ, ರವಿಕುಮಾರ್ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)