ಸಂತೆಯಲ್ಲಿ ಎಲ್ಲರದೂ ಒಂದೊಂದು ಮಾತು

ಸಂತೆಯಲ್ಲಿ ಎಲ್ಲರದೂ ಒಂದೊಂದು ಮಾತು
ಅಂತೆಕಂತೆಗಳದ್ದೇ ಮಾರುದ್ದ ಮಾತು
ಇಂಥವರು ಹೀಗೆ ಅಂಥವರು ಹಾಗೆ
ಸಂತರು ತಾವೊಬ್ಬರೇ ಎಂಬಂತೆ ಮಾತು
ಮಂಥನ ಮಾಡುವವರೇ ಎಲ್ಲರೂ ಕಡಲನ್ನು
ಗ್ರಂಥ ಓದದೇ ವಿಮರ್ಶೆಯ ಮಾತು
ಸ್ವಂತ ಮಗನಂತೆ ಪ್ರೀತಿಸಿದಳು ಕೈಕೇಯಿ
ಮಂಥರೆಗೇನು, ಕಡ್ಡಿ ಮುರಿದಂತೆ ಮಾತು
ತಂತಿಯ ಮೃದುಸ್ವರಗಳೆಲ್ಲ ಲುಪ್ತವಾಗುವ ಹಾಗೆ
ಗಂಟೆ ಹೊಡೆದಂತೆ ಘಂಟಾಘೋಷದ ಮಾತು
ಸಿ. ಪಿ, ರವಿಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ