೨೧ ಲಿಮರಿಕ್ಸ್
ಸಿ. ಪಿ. ರವಿಕುಮಾರ್ (೧) ದೇವರಲ್ಲಿ ಬೇಡಿದ್ದು ಇದನ್ನು ಹೇಳಿದ್ದು ಈಮೋ ಫಿಲಿಪ್ಸ್, ಅಮೆರಿಕನ್ ನಗೆಗಾರ ಕೇಳಿಕೊಂಡನಂತೆ ದೇವರಲ್ಲಿ "ಒಂದು ಬೈಕ್ ಕಳಿಸು ಹೇಗಾರಾ" ದೇವರು ಹಾಗೆಲ್ಲಾ ಕಳಿಸುತ್ತಾನೆಯೇ, ಪೆದ್ದು! ಎಂದು ಪಾರ್ಕ್ ಮಾಡಿದ್ದ ಹೊಸ ಬೈಕ್ ಕದ್ದು ದೇವರೇ ಕ್ಷಮಿಸಿಬಿಡು ಎಂದು ಪ್ರಾರ್ಥಿಸಿದನಂತೆ ರವಿವಾರ (೨) ಕಲಹಪ್ರಿಯ ನಾರದನೆಂಬ ಸೇಜು ಕಳಿಸಿದ ಮೊದಲ ಮೆಸೇಜು ಎಡಬಲಗಳಿಗೂ ಚುಚ್ಚಿ 280 ಬೈಟ್‌ನಲ್ಲಿ ಕಚ್ಚಿ ನೋಡುತ್ತಿದ್ದ ಕಾಮೆಂಟ್ ಕಲಹಗಳ ಮೋಜು (೩) ಪಾಲಿಟಿಕ್ಸ್ "ಲ್ಯಾಟಿನ್ ಭಾಷೆಯಲ್ಲಿ 'ಪಾಲಿ' ಬಹುವಚನ ಸೂಚಿ" -- ನಟ ರಾಬಿನ್ ವಿಲಿಯಮ್ಸ್ ಹೀಗೆ ಚುಚ್ಚಿದನು ಸೂಜಿ: "ಇನ್ನು ಟಿಕ್ಸ್ ಎಂದರೆ ನಿಮಗೆಲ್ಲ ಗೊತ್ತು ರಕ್ತವನ್ನೆಲ್ಲಾ ಹೀರಿಬಿಡುವ ಜಂತು ಪಾಲಿಟಿಕ್ಸ್ ಎಂದರೆ ಗೊತ್ತಾಯಿತೇ ಎಂಥದದು ಬೂಚಿ?" (೪) ಒಂದೇ ಏಟಿಗೆ ಎರಡು ಹಣ್ಣು ಹೀಗೆ ಹೇಳಿದನಂತೆ ಜಾನತನ ಸ್ವಿಫ್ಟ (ಸಿದ್ಧವಾಗುತ್ತದೆ ಅವನ ಜಾಣತನ ಸ್ಪಷ್ಟ) "ಏರುತ್ತಿರುವ ಜನಸಂಖ್ಯೆ ಹಾಗೂ ಜಗತ್ತಿನ ಹಸಿವಿನ ಸಮಸ್ಯೆ ಎರಡಕ್ಕೂ ನರಮಾಂಸ ಭಕ್ಷಣೆಯೇ ಉತ್ರ" (೫) ಒಗಟು ಅದು ಮೇಲೆ ಹೋಗುತ್ತೆ ಕೆಳಗೂ ಬರುತ್ತೆ ಆದರೂ ಕದಲೋದಿಲ್ಲ ಒಂಚೂರೂ ಥಟ್ಟಂತ ಹೇಳು ಏನಿರಬಹುದು ಗೊತ್ತಾಗಲಿಲ್ವಾ? ಬೆಟ್ಟದ್ ರಸ್ತೆ! (೬) ಫಿಲಾಸಫಿ ನಿಟ್ಟುಸಿರಿಟ್ಟು ಅವನೆಂದ: ...