ಮೃದುವಾಗಿಡು ಹೆಜ್ಜೆ

ಮೂಲ: ಡಬ್ಲ್ಯೂ ಬಿ ಯೇಟ್ಸ್
ಕನ್ನಡ ಅನುವಾದ : ಸಿ.ಪಿ. ರವಿಕುಮಾರ್

ಇದ್ದಿದ್ದರೆ ನನ್ನ ಬಳಿ ಸ್ವರ್ಗಲೋಕದ ಕಸೂತಿಯ ಬಟ್ಟೆಬರೆ,
ಅದ್ದಿತೆಗೆದವು ಹೊಂಬಣ್ಣ ಮತ್ತು ಬೆಳ್ಳಿಬಣ್ಣಗಳಲ್ಲಿ,
ಶುದ್ಧ ನೀಲಿಯಾದರೂ ಸರಿ, ತಿಳಿಯೋ ಗಾಢವೋ,
ಮಧ್ಯರಾತ್ರಿಯ ಕಪ್ಪು ರೇಷ್ಮೆಯೋ ದಿವಸದ ಧವಲವರ್ಣವೋ,
ಉದ್ದಕ್ಕೂ ಹಾಸುತ್ತಿದ್ದೆ ನೀನು ನಡೆದುಬರುವ ಹಾದಿಯಲ್ಲಿ!
ನಿರ್ಧನ ನಾನು! ಏನಿದೆ ನನ್ನಲ್ಲಿ ಕನಸುಗಳ ವಿನಾ?
ಹೊದ್ದ ಕನಸುಗಳನ್ನೇ ಹಾಸಿದ್ದೇನೆ ನಿನ್ನ ಕಾಲುಗಳ ಅಡಿಯಲ್ಲಿ
ಮೃದುವಾಗಿಡು ಹೆಜ್ಜೆ, ನನ್ನ ಕನಸುಗಳ ಮೇಲ್ನಡೆವೆ, ನೆನಪಿರಲಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)