ನಗರದಲ್ಲಿ ಸಂಕ್ರಾಂತಿ



ಸಿ. ಪಿ. ರವಿಕುಮಾರ್


ನನ್ನ ಮೊಬೈಲ್ ತೆರೆ ಮೇಲೆ
ಸಗಣಿ ಸಾರಿಸಿಟ್ಟ ರಂಗೋಲೆ
ಬೆಳಗಿನ ವೇಳೆ
ಯಾರೋ ಕಳಿಸಿದ
ಸಂಕ್ರಾಂತಿಯ ಶುಭ ಓಲೆ

ಅಲ್ಲೊಂದು ಮಣ್ಣಿನ ಗಡಿಗೆ
ಸೌದೆ ಬೆಂಕಿ ಉರಿ ಕೆಳಗೆ
ಬೇಯುತ್ತಿದೆ ಒಳಗೆ
ಹೊಸ ಅಕ್ಕಿ, ಬೆಲ್ಲ, ಹಾಲು
ಏಳುತ್ತಿದೆ ಹೊಗೆ ಮೇಲ್ಗಡೆಗೆ

ಜೋಡಿಸಿಟ್ಟ ಕಬ್ಬು ಜಲ್ಲೆ
ಲಂಗ ತೊಟ್ಟು ಕುಂಟೆಬಿಲ್ಲೆ
ತಟ್ಟೆಯಲ್ಲಿ ಬೆಲ್ಲಕಡಲೆ
ಗಾಳಿಪಟವು ಮೀರಿ ಎಲ್ಲೆ
ಹಾರುತ್ತಿದೆ ಗಗನದಲ್ಲೇ

ಹಚ್ಚಿ ಹುಡುಕಿದರೂ ದೀಪ
ಎಲ್ಲೂ ಸಮೀಪ
ಕಾಣದ ಅಪರೂಪ
ಹಂಚಿದ್ದಾನೆ ಯಾರೋ ಭೂಪ
ಲೈಕ್ ಒತ್ತು,  ಪಾಪ



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)