ಸತ್ಯಮೇವ ಜಯತೇ

(ಜಯದೇವ್ ಅವರ ಸಂಗೀತ ನಿರ್ದೇಶನದಲ್ಲಿ ಲತಾ ಮಂಗೇಶ್ಕರ್ ಅವರು ಅನನ್ಯವಾಗಿ ಹಾಡಿರುವ ದೇಶಭಕ್ತಿ ಗೀತೆಯ ಅನುವಾದ. ಹಾಡನ್ನು ನೀವು ಇಲ್ಲಿ ಕೇಳಬಹುದು.)


ಮೂಲ: ಕೆ. ಮಹಾವೀರ್
ಕನ್ನಡ ಅನುವಾದ: ಸಿ.ಪಿ. ರವಿಕುಮಾರ್

ಜಯತೇ ಜಯತೇ ಜಯತೇ ಸತ್ಯಮೇವ ಜಯತೇ

ಸತ್ಯವೆಂಬ ದೊಂದಿ ಇಂದು ದಾರಿಯನ್ನು ಬೆಳಗಿದೆ
ಸತ್ಯವೆಂಬ ಗುಡುಗು ಕೇಳಿ ವೈರಿ ಎದೆಯು ನಡುಗಿದೆ
ಮುನ್ನಡೆಯಿರಿ ವೀರರೇ, ವಿಜಯ ಕೂಗಿ ಕರೆದಿದೆ
ಸಾಗುತ್ತಿರಿ ಮುಂದೆ, ಸತ್ಯಮೇವ ಜಯತೆ!

ಕ್ಲೇಶಗಳನು ಅಳಿಸಿ ಮುಂದೆ ಸಾಗಿ, ಸತ್ಯ ಜೊತೆಗಿದೆ!
ದೇಶವನ್ನು ಕಾಪಾಡುವ ಹೊಣೆಯು ನಿಮ್ಮ ಮೇಲಿದೆ!
ದೇಶಕಾಗಿ ಎಲ್ಲರ ತ್ಯಾಗವು ಬೇಕಾಗಿದೆ
ಸಾಗುತ್ತಿರಿ ಮುಂದೆ, ಸತ್ಯಮೇವ ಜಯತೆ!

ಈ ದೇಶದ ಘನತೆ ನೀವು ಈ ದೇಶದ ಗೌರವ,
ಸಾಹಸಿಗಳೆ, ನೀವು ದೇಶಕುಸುಮದಲ್ಲಿ ಸೌರಭ!
ನೀವೆ ನಮ್ಮ ದೇಶದ ಗೆಲುವಿನ ಹೇಷಾರವ!
ಸಾಗುತ್ತಿರಿ ಮುಂದೆ, ಸತ್ಯಮೇವ ಜಯತೆ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)