ಲಾಕ್ ಡೌನ್ ಉದಯ

Grayscale Photo of Person Sleeping

ಬೆಳ್ಳಂಬೆಳಗ್ಗೆ ಮಳೆ ಬಲು ಜೋರು
ಏಳಲು ಯಾತಕ್ಕೋ ಬೇಜಾರು

ಮಲಗುವೆನಮ್ಮಾ ಬೆಚ್ಚಗೆ ಹೊದ್ದು
ಮಾಡಲಾದರೂ ಏನಿದೆ ಎದ್ದು
ಲಾಕ್ ಡೌನ್ ಅಂತ ಮುಚ್ಚಿದೆ ಸ್ಕೂಲು
ಈಗ ಯಾವ ಎಕ್ಸಾಮ್ ಇದೆ ಹೇಳು
ದೇವರು ವರ ಕೊಟ್ಟರೂ ಪೂಜಾರಿ
ಕೊಡದ ಹಾಗೆ ನೀನೇತಕೆ, ವೈರಿ,
ಏಳೋ ಏಳೋ ಏಳೋ ಬೇಗ
ರಿಕಾರ್ಡು ಹಚ್ಚುವೆ ಒಂದೇ ರಾಗ!
ಏನು ಮಾಡಲಿದೆ ನಾ ಮೇಲೆದ್ದು
ಹೊರಗಡೆ ಹೋದರೆ ಕೊಡುವರು ಗುದ್ದು
ಬೋರಾಗಿದೆ ಮನೆಯೊಳಗೇ ಇದ್ದು
ಕೋವಿಡ್ ಕರೋನಾ ಎರಡರದೇ ಸದ್ದು

ಸರಿಯೇ ಕಣೋ ಹೇಳುವುದೂ ನೀನು
ಬೆಚ್ಚಗೆ ಹೊದ್ದು ಮಲಗುವೆ ನಾನೂ
ಅಪ್ಪನೇ ಮಾಡಲಿ ಇಂದಿನ ತಿಂಡಿ
ಮಲಗಲು ಸೂಚಿಸುತಿದೆ ಈ ಥಂಡಿ

ಅಯ್ಯೋ ಬೇಡಮ್ಮಾ ಇದೋ ಎದ್ದೆ
ಅಪ್ಪನ ಉಪ್ಪಿಟ್ ಹಸಿಹಸಿ, ಮುದ್ದೆ
ನೀನೇ ಮಾಡು ಪೂರಿಸಾಗು
ರೆಡಿಯಾದಾಗ ನನ್ನನು ಕೂಗು
ಅಷ್ಟರವರೆಗೂ ಮಲಗುವೆ ನಾನು
ಸವಿಯುತ್ತಾ ನಿದ್ದೆಯ ಜಾಮೂನು


- ಸಿ ಪಿ ರವಿಕುಮಾರ್, ಏಪ್ರಿಲ್ ೨೪, ೨೦೨೦

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)