ಹನುಮಾನ ಚಾಲೀಸಾ
(ಪೀಠಿಕೆ - ತುಲಸೀದಾಸರು ರಚಿಸಿದ ಹನುಮಾನ್ ಚಾಲೀಸಾ ಬಗ್ಗೆ ಗೊತ್ತಿಲ್ಲದವರು ಯಾರು? ಎಂ.ಎಸ್. ಸುಬ್ಬುಲಕ್ಷ್ಮಿ ಮೊದಲಾಗಿ ಅನೇಕ ಗಾಯಕರು ಹಾಡಿದ ಹನುಮಾನ್ ಚಾಲೀಸಾ ಪ್ರತಿನಿತ್ಯ ರೇಡಿಯೋ/ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಲೇ ಇರುತ್ತದೆ. ಭಾರತದ ಮಂದಿರಗಳಲ್ಲಿ ಹನುಮಾನ್ ಚಾಲೀಸಾ ಪಠಣ ನಡೆಯುತ್ತಲೇ ಇರುತ್ತದೆ. ಹನುಮಂತನನ್ನು ಸ್ಮರಿಸಿ ತುಲಸೀದಾಸರು ರಚಿಸಿದ ನಲವತ್ತು ಸಾಲುಗಳ ರಚನೆಯೇ ಹನುಮಾನ್ ಚಾಲೀಸಾ. ಪ್ರಾರಂಭದಲ್ಲಿ ಕವಿ ಹನುಮಂತನನ್ನು ತನಗೆ ಬಲ-ಬುದ್ಧಿ-ವಿದ್ಯೆ ನೀಡಲೆಂದು ಪ್ರಾರ್ಥಿಸುತ್ತಾರೆ. ಇದಾದ ನಂತರ ಹನುಮಂತನನ್ನು ಕುರಿತು ಸ್ತುತಿ ಮತ್ತು ಹನುಮಂತನ ಸ್ಮರಣೆಯಿಂದ ಸಿಗುವ ಲಾಭವನ್ನು ತುಲಸೀದಾಸರು ಹೇಳುತ್ತಾರೆ. ಕೊನೆಯಲ್ಲಿ ಹನುಮಂತನನ್ನು ತನ್ನ ಹೃದಯದಲ್ಲಿ ರಾಮ-ಲಕ್ಷ್ಮಣ-ಸೀತೆಯರೊಂದಿಗೆ ಬಂದು ನೆಲೆಸು ಎಂದು ಪ್ರಾರ್ಥಿಸುತ್ತಾರೆ.) ಶ್ರೀಗುರು ಪದ್ಮಪಾದಗಳ ಧೂಳು ತೊಳೆಯಲೆನ್ನ ಮನದ ಕನ್ನಡಿಯ ನಿಜಮುಖ ವರ್ಣಿಸುವೆ ರಘುವರನ ವಿಮಲಯಶ, ಯಾವುದು ನೀಡುವುದೋ ನಾಲ್ಕು ಫಲಗಳ ಸುಖ ಬುದ್ಧಿಹೀನ ನಾನೆಂದು ಬಗೆದು ಸ್ಮರಿಸುವೆನಿದೋ ರಕ್ಷಿಸಲಿ ಪವನಕುಮಾರ ಬಲಬುದ್ಧಿವಿದ್ಯೆಗಳ ವರ ನೀಡಿ ಮಾಡಲೆನ್ನ ಸಕಲ ಕ್ಲೇಶವಿಕಾರಗಳ ದೂರ ಜೈ ಹನುಮಂತ, ಜ್ಞಾನಗುಣಸಾಗರ, ಜೈ ಕಪೀಶ, ಮೂರು ಲೋಕೋದ್ಧಾರ ರಾಮದೂತ, ಅತುಲಿತ ಬಲಧಾಮ, ಅಂಜನಿಪುತ್ರ, ಪವನಸುತ ನ...