ಸೋಪ್ ಆಪರಾ
ಸೋಪ್ ಆಪರಾ ಎನ್ನುವ ಪದ ಯಾಕೆ ನೆನಪಿಗೆ ಬಂತು ಅಂದರೆ ಸ್ನೇಹಿತರು ಒಬ್ಬರು ಫೇಸ್ಬುಕ್ ಮೇಲೆ ಹಂಚಿಕೊಂಡ ಚಿತ್ರ ನೋಡಿ. ಮಳೆ ಪ್ರವಾಹ ಮನೆಗೆ ನುಗ್ಗಿ ರೂಮಿನಲ್ಲಿ ಮೊಳಕಾಲುಮಟ್ಟ ಸೇರಿದೆ. ಇಷ್ಟಾದರೂ ಮನೆಯವರು ಕುರ್ಚಿಗಳಲ್ಲಿ ಆಸೀನರಾಗಿ ಸೀರಿಯಲ್ ನೋಡುತ್ತಿದ್ದಾರೆ. ಈ ಸೀರಿಯಲ್ ಆಕರ್ಷಣೆ ಬರೀ ಭಾರತೀಯರಿಗೆ ಮಾತ್ರ ಎಂದು ಖಂಡಿತಾ ತಿಳಿಯಬೇಡಿ. ಅಮೆರಿಕನ್ ಮಹಿಳೆಯರೂ ಈ ಧಾರಾವಾಹಿಗಳಿಂದ ಅಷ್ಟೇ ಆಕರ್ಷಿತರು. ಅಮೆರಿಕನ್ ಮನೆಗಳಲ್ಲಿ ನಿತ್ಯಚರಿ ಬೆಳಗ್ಗೆ ಬಹಳ ಬೇಗ ಪ್ರಾರಂಭವಾಗುತ್ತದೆ. ಶಾಲೆಗೆ ಹೋಗುವ ಮಕ್ಕಳು ಮತ್ತು ಕೆಲಸಕ್ಕೆ ಹೋಗುವ ಗಂಡ ಎಲ್ಲರಿಗೂ ಬೆಳಗಿನ ಉಪಾಹಾರ ತಯಾರಿಸಿ ಡಬ್ಬಿಗಳಲ್ಲಿ ಊಟ ತುಂಬಿಸಿ ಗಂಡನನ್ನು ಚುಂಬಿಸಿ ಐ ಲವ್ ಯು ಎಂದು ಬೈಬೈ ಹೇಳಿ (ಇದು ಅಲ್ಲಿಯ ನಿಯಮ) ಉಸ್ ಎಂದು ಸೋಫಾ ಮೇಲೆ ಕುಸಿದ ಗೃಹಿಣಿ ಮುಂದೆ ಹೊತ್ತು ಕಳೆಯುವುದು ಹೇಗೆ? ಕೆಲಸವನ್ನು ಔಟ್ ಸೋರ್ಸ್ ಮಾಡುವ ಪದ್ಧತಿ ಇಲ್ಲಿ ಬಹಳ ಹಿಂದಿನಿಂದಲೇ ಬಂದಿದೆ. . ಬಟ್ಟೆಗಳನ್ನು ವಾಷಿಂಗ್ ಮಶೀನಿಗೆ ಹಾಕಿದರೆ ಮೂವತ್ತು ನಿಮಿಷಗಳಲ್ಲಿ ಒಗೆದು ಪೂರೈಸುತ್ತದೆ. ಹಿಂಡಿದ ಬಟ್ಟೆಗಳನ್ನು ಡ್ರೈಯರ್ ಯಂತ್ರಕ್ಕೆ ಸಾಗಿಸಿದರೆ ನಲವತ್ತು ನಿಮಿಷಗಳಲ್ಲಿ ಬಟ್ಟೆಗಳು ಮಡಿಸಲು ಸಿದ್ಧ. ಐರನ್ ಬೇಡದ ಬಟ್ಟೆಗಳನ್ನು ಮಡಿಸಿಟ್ಟರೆ ಸಾಕು. ಉಳಿದ ಬಟ್ಟೆಗಳನ್ನು ಇಸ್ತ್ರಿ ಮಾಡಲೇಬೇಕೆಂದರೆ ನಾನಾ ಬಗೆಯ ತಂತ್ರಜ್ಞಾನಗಳಿವೆ. ಗಂಡನು ಬಟ್...