ಭಾರತ ರಾಷ್ಟ್ರಪುರುಷ
ಮೂಲ ಕವಿತೆ: ಅಟಲ್ ಬಿಹಾರಿ ವಾಜಪೇಯಿ
ಕನ್ನಡ ಅನುವಾದ: ಸಿ. ಪಿ. ರವಿಕುಮಾರ್
ಭೂಮಿಯ ಒಂದು ಖಂಡವಲ್ಲ ಭಾರತ,
ಜೀವಂತ ರಾಷ್ಟ್ರಪುರುಷ
ಹಿಮಾಲಯವು ಮಸ್ತಕ, ಕಾಶ್ಮೀರವು ಮುಕುಟ,
ಪಂಜಾಬ್ ಮತ್ತು ಬಂಗಾಳ ವಿಶಾಲ ಭುಜದ್ವಯಗಳು
ಪೂರ್ವ ಪಶ್ಚಿಮದ ಘಟ್ಟಗಳು ವಿಶಾಲ ತೊಡೆಗಳು
ಕನ್ಯಾಕುಮಾರಿ ಈ ಪುರುಷನ ಪಾದಗಳು
ಸಾಗರವೇ ಮುಂದಾಗುತ್ತದೆ ತೊಳೆಯಲು ಕಾಲು.
ಇಂದು ಚಂದನದ ಭೂಮಿ,
ಅಭಿನಂದನದ ಭೂಮಿ.
ಇದು ತರ್ಪಣದ ಭೂಮಿ,
ಇದು ಅರ್ಪಣದ ಭೂಮಿ.
ಇಲ್ಲಿಯ ಒಂದೊಂದು ಕಲ್ಲೂ ಶಂಕರ,
ಒಂದೊಂದು ಜಲಬಿಂದುವೂ ಗಂಗಾಜಲ.
ನಾವು ಬದುಕಿದರೂ ಇದಕ್ಕಾಗಿ
ಸತ್ತರೂ ಇದಕ್ಕಾಗಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ