ಪೋಸ್ಟ್‌ಗಳು

ಜುಲೈ, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಮ್ಮ ನಂದಿನಿ ನಮ್ಮ ಎಮ್ಮೆ

ಇಮೇಜ್
  "ನಮ್ಮ ನಂದಿನಿ ನಮ್ಮ ಎಮ್ಮೆ" ಅಂತ ಒಬ್ಬರು ಬರೆದಿದ್ದಾರೆ. ನಂದಿನಿಯ ತುಪ್ಪವನ್ನು ತಿರುಪತಿ ಲಡ್ಡುಗಳಿಗೆ ಇನ್ನು ಮುಂದೆ ಬಳಸುವುದಿಲ್ಲ ಎಂದು ನಿರ್ಧರಿಸಲು ಇದೇ ಕಾರಣವಾಯಿತೇ ಎಂಬ ಅನುಮಾನ.ನನ್ನನ್ನು ಕಾಡುತ್ತಿದೆ. ಎಮ್ಮೆಗೆ ಆದ ಅಪಮಾನ ಅನ್ಯಾಯಗಳು ಒಂದೇ ಎರಡೇ! ಎಮ್ಮೆಗೆ ನಂದಿನಿ ಅಂತ ಹೆಸರು ಇಟ್ಟಿದ್ದು ಆಶ್ಚರ್ಯ ಮತ್ತು ಸಂತೋಷದ ವಿಷಯ. ನೋಡಿ, ಗಂಗೆ ಬಾರೇ ಗೌರಿ ಬಾರೇ ಎಂದೆಲ್ಲಾ ಕರೆಯುವುದು ಗೋವನ್ನು. ಕೃಷ್ಣನು ಮೇಯಿಸಲು ಕರೆದೊಯ್ದದ್ದು ಗೋವನ್ನು.  ನೀನಾರಿಗಾದೆಯೋ ಎಲೆ ಮಾನವ ಎಂದೆಲ್ಲಾ ಹಾಡಿದ್ದು ಗೋವು. ಎಮ್ಮೆಯ ಸುದ್ದಿಯೇ ಎಲ್ಲೂ ಬಾರದು. ಬಂದರೆ ಯಮನ ವಾಹನವಾಗಿ. ಅಥವಾ ಮಹಿಷಾಸುರನ ಅವತಾರವಾಗಿ. ಎಂದಾದರೂ ಎಮ್ಮೆಗೆ ನಂದಿನಿ, ಕುಮುದಿನಿ ಎಂದೆಲ್ಲಾ ಚಂದದ ಹೆಸರು ಇಟ್ಟಿದ್ದು ಕೇಳಿರುವಿರಾ? ಇಲ್ಲ, ಇಲ್ಲ! ಇದಕ್ಕೆ ಕಾರಣ ಏನೆಂದು ಊಹಿಸುವುದು ಅಂತಹ ಕಷ್ಟವೂ ಏನಲ್ಲ.  ಬಿಳಿ, ಕಂದು, ಮುಂತಾದ ವರ್ಣಗಳಲ್ಲಿ ಹೊಳೆಯುವ ಗೋವಿಗೆ ಮಾತ್ರ.ಈ ಹೆಸರುಗಳು! ಕಪ್ಪು ಎಂಬ ಕಾರಣಕ್ಕೆ ಎಮ್ಮೆಗೆ ಕಡೆನೋಟ. ಗೋವೇ ಎಂದು ಹಸುವನ್ನು ಮುದ್ದಾಡಿ ಎಮ್ಮೆ ಕಂಡಾಗ ಗೋ ಅವೇ ಎನ್ನುವ ತಾರತಮ್ಯ ಭಾವ! ಇಷ್ಟೆಲ್ಲಾ ಅನ್ಯಾಯವಾದರೂ ಎಂದಾದರೂ ಎಮ್ಮೆಯು ಪ್ರತಿಭಟಿಸಿದ್ದನ್ನು ನೋಡಿದ್ದೀರಾ? ಪಾಪ, ಎತ್ತಿಗೆ ಜ್ವರ ಬಂದಾಗಲೂ ಬರೆ ಹಾಕಿಸಿಕೊಂಡ ಬಡಪಾಯಿ!  ಇದೊಂದೇ ಕಾರಣಕ್ಕೆ ಎತ್ತಿನ ಮೇಲೆ ಎಮ್ಮೆಗೆ ಸ್ವಲ್ಪ ಅಸಮಾಧಾನ. ಎತ್ತು ತ ಏರಿಗೆ ಎಳೆದಾಗ ಎಮ್ಮೆ ನೀ

ನಮ್ಮ ಕನ್ನಡ ಮೇಷ್ಟ್ರು ಕೆ. ಎಸ್.

 ನ್ಯಾಷನಲ್ ಹೈಸ್ಕೂಲಿನಲ್ಲಿ ನಮಗೆ ಕನ್ನಡ ಪಾಠ ಮಾಡಿದ ಶ್ರೀ ಕೆ. ಶ್ರೀಕಂಠಯ್ಯ (ಮುಂದೆ ಅವರು ಪಿಎಚ್.ಡಿ. ಪಡೆದು ಡಾ. ಕೆ. ಶ್ರೀಕಂಠಯ್ಯ ಆದರು) ನಾನು ಸದಾ ನೆನೆಸುವ ಶಿಕ್ಷಕರಲ್ಲಿ ಒಬ್ಬರು. ದೆಹಲಿಗೆ ವರ್ಗವಾಗಿ ಹೋಗಿದ್ದ ನಮ್ಮ ತಂದೆ  ಬೆಂಗಳೂರಿಗೆ ಮರಳಿ ಬಂದಾಗ ಅವರು ನನ್ನನ್ನು ನ್ಯಾಷನಲ್ ಹೈಸ್ಕೂಲಿಗೆ ಸೇರಿಸಿದರು. ನಾನು ಸೇರಿದ್ದು ಒಂಬತ್ತನೇ ಕ್ಲಾಸಿಗೆ.  ಬಹಳ ಜನ ನನಗೆ ಸಂಸ್ಕೃತ ತೊಗೋ, ಎಂಟನೇ ಕ್ಲಾಸಿನಲ್ಲಿ ನೀನು ಸಂಸ್ಕೃತ ಕಲಿಯದೆ ಇದ್ದರೂ ಪರವಾಗಿಲ್ಲ, ಉತ್ತರವನ್ನು ಇಂಗ್ಲಿಷ್ ಅಥವಾ ಕನ್ನಡದಲ್ಲಿ ಬರೆಯಬೇಕು, ಅದು ಸ್ಕೋರಿಂಗ್ ಸಬ್ಜೆಕ್ಟ್ ಎಂದು ಸಲಹೆ ನೀಡಿದರೂ ನಾನು ಕನ್ನಡವನ್ನೇ ಆರಿಸಿಕೊಂಡೆ. ಇದಕ್ಕಾಗಿ ನಾನು ಇಂದಿಗೂ ಕೃತಜ್ಞನಾಗಿದ್ದೇನೆ.  ನಾನೇನಾದರೂ ಎಂಟನೇ ಕ್ಲಾಸಿನಲ್ಲಿದ್ದಾಗ ಬೆಂಗಳೂರಿಗೆ ವಾಪಸ್ ಬಂದಿದ್ದರೆ ಏನಾಗುತ್ತಿತ್ತೋ!  ನಮ್ಮ ಕನ್ನಡ ಮೇಷ್ಟ್ರು ಕೆ.ಎಸ್. ಬಹಳ ಮುಂಗೋಪಿ ಎಂದೇ ಅವರು ಪ್ರಸಿದ್ಧರಾಗಿದ್ದರು.  ಅವರು ಪಿಎಚ್.ಡಿ. ಪದವಿಗಾಗಿ ಪ್ರಯತ್ನ ಪಡುತ್ತಿದ್ದುದರಿಂದ ಲೈಬ್ರರಿಯಲ್ಲಿ ಸಾಕಷ್ಟು ಸಮಯ ಕಳೆಯುತ್ತಿದ್ದರು. ಯಾವಾಗಲೂ ಟ್ರಿಮ್ಮಾಗಿ ಡ್ರೆಸ್ ಮಾಡಿಕೊಂಡು ಬರುತ್ತಿದ್ದರು. ಅವರ ಪಾಠ ಮಾಡುವ ಶೈಲಿ ಸ್ವಲ್ಪ ವಿಭಿನ್ನ.  ಯಾರಾದರೂ ಒಬ್ಬ ವಿದ್ಯಾರ್ಥಿಯನ್ನು ಎದ್ದುನಿಂತು ಪಾಠ ಓದಲು ಹೇಳುತ್ತಿದ್ದರು. ಉಳಿದವರು ಆಗ ತಮ್ಮ ಪುಸ್ತಕದ ಮೇಲೆ ಗಮನ ಹರಿಸಬೇಕು. ಪುಸ್ತಕ ತರದಿದ್ದರೆ ಕ್ಲಾಸಿನಿಂದ ಹೊರಗೆ ಕಳಿಸುತ್

ಬೇಜಾನ್ ಹರಟೆ

ಇಮೇಜ್
  ಬೇಜಾನ್ ಅಂದರೆ ಸಮೃದ್ಧ ಎಂಬ ಅರ್ಥ ಬಂದಿದ್ದು ಹೇಗೋ ತಿಳಿಯದು. ಉದಾಹರಣೆಗೆ "ನಮ್ಮ ಮನೆಯಲ್ಲಿ ಗೋಕುಲಾಷ್ಟಮಿ ಹಬ್ಬಕ್ಕೆ ಬೇಜಾನ್ ತಿಂಡಿ ಮಾಡಿದ್ದಾರೆ" ಎಂದು ಶ್ರೀ ರಾಮಸ್ವಾಮಿ ಅಯ್ಯಂಗಾರ್ ಅವರು ಹೇಳಿದರೆ ಅವರ ಮನೆಯಲ್ಲಿ ಯಥೇಚ್ಛವಾಗಿ ಮಾಡಿದ ಚಕ್ಕುಲಿ, ಕೋಡುಬಳೆ, ತೇಂಗೊಳಲು, ಮುಚ್ಚ್ಚೋರೆ, ಕರಿಗಡುಬು, ಇದೆಲ್ಲವನ್ನೂ ನೀವು ಕಲ್ಪಿಸಿಕೊಳ್ಳಬಹುದು. ಬೇಜಾನ್ ಎಂಬುದು ಇಮಾಮ್ ಸಾಹೇಬರು ಕನ್ನಡಕ್ಕೆ ತಂದಿರಬಹುದಾದ ಪದವಾದ್ದರಿಂದ ಗೋಕುಲಾಷ್ಟಮಿಗೂ ಇಮಾಮ್ ಸಾಬಿಗೂ ನೇರವಾದ ಸಂಬಂಧ ಇಲ್ಲಿ ಸ್ಥಾಪಿತವಾಗಿದ್ದನ್ನೂ ನೀವು ಮನಗಾಣಬಹುದು.  ಜಾನ್ ಎಂದರೆ ಉರ್ದುವಿನಲ್ಲಿ ಪ್ರಾಣ. ಹಾಗೆಂದು ಜಾನೀ ಎಂದು ಒಬ್ಬ ಉರ್ದು ಭಾಷಿಗನು ನಿಮ್ಮನ್ನು ಕರೆದರೆ ಅವನು ನಿಮ್ಮನ್ನು ಪ್ರಾಣಿ ಎಂದು ಮೂದಲಿಸುತ್ತಿಲ್ಲ.  ನೀನು ನನಗೆ ಪ್ರಾಣದಷ್ಟೇ ಪ್ರಿಯ ಎಂದು ಆದರ ಪ್ರಕಟಿಸುತ್ತಿದ್ದಾನೆ.  ರಾಮನು ಸೀತೆಯನ್ನು ಜಾನ್ ಕೀ ಎಂದು ಕರೆಯುತ್ತಿದ್ದದ್ದು ಇದಕ್ಕೇನಾ ಎನ್ನಬೇಡಿ. ಜನಕನ ಮಗಳಾದ್ದರಿಂದ ಅವಳಿಗೆ ಬಂದ ಹೆಸರದು.  ಜಾನ್ವರ್ ಅಂದರೆ ಪ್ರಾಣ ಉಳ್ಳದ್ದು.  ಆದರೆ "ಜಾನ್ ಗಯಾ" ಎಂದರೆ ಪ್ರಾಣ ಹೋಯಿತು ಅನ್ನುವ ಅರ್ಥವಲ್ಲ. ಅವನಿಗೆ ತಿಳಿದು ಹೋಯಿತು ಎನ್ನುವಾಗ ವೋ ಜಾನ್ ಗಯಾ ಎನ್ನಬಹುದು.   ಬೇ ಎಂದರೆ ಉರ್ದುವಿನಲ್ಲಿ ರಹಿತ ಎಂಬ ಅರ್ಥ.  ಉದಾಹಣೆಗಾಗಿ ಬೇಜುಬಾನ್ (ನಾಲಗೆ ಇಲ್ಲದ), ಬೇಕಸೂರ್ (ತಪ್ಪು ಮಾಡಿಲ್ಲದ), ಬೇಶರಮ್ (ನಾಚಿಕೆ ಇಲ್ಲದ) ಇತ್ಯ

ನೆನಪು - ಮಿಸೆಸ್ ಮಂಗಳಂ

 ನನಗೆ ಕಲಿಸಿದ ಅನೇಕ ಗುರುಗಳಲ್ಲಿ ಒಬ್ಬರು ಮಿಸೆಸ್ ಮಂಗಳಂ. ಆರನೇ ಕ್ಲಾಸಿನಲ್ಲಿ ನಮಗೆ ಜಾಗ್ರಫಿ ಮತ್ತು ಏಳನೇ ಕ್ಲಾಸಿನಲ್ಲಿ ಇಂಗ್ಲಿಷ್ ಹೇಳಿಕೊಟ್ಟರು. ಜಾಗ್ರಫಿಯನ್ನು ಬಹಳ ಸ್ವಾರಸ್ಯಕರವಾಗಿ ಪಾಠ ಮಾಡುತ್ತಿದ್ದರು. ಇಂಗ್ಲಿಷ್ ಪಾಠ ಮಾಡುವಾಗ ಅವರು ಆಕ್ಟಿವ್ ಮತ್ತು ಪ್ಯಾಸಿವ್ ವಾಯ್ಸ್ ನಮಗೆ ಹೇಳಿಕೊಟ್ಟ ರೀತಿಯನ್ನು ಎಂದೂ ಮರೆಯಲು ಸಾಧ್ಯವಿಲ್ಲ.   ಬಹಳ ಸ್ಟ್ರಿಕ್ಟ್ ಟೀಚರ್ ಎಂದು ಹೆಸರು ತೆಗೆದುಕೊಂಡಿದ್ದರು.  ನಾನು ಟೆಸ್ಟ್ ಒಂದರಲ್ಲಿ ಬರೆದ ಎಸ್ಸೆ ಅವರಿಗೆ ಇಷ್ಟವಾಗಿಬಿಟ್ಟಿತು.  ಅದನ್ನು ಇತರ ಟೀಚರರ ಮುಂದೆಯೂ ಹೊಗಳಿ ನನ್ನಲ್ಲಿ ಆತ್ಮವಿಶ್ವಾಸ ತುಂಬಿದರು. ದೆಹಲಿಯ ಶಾಲೆಯಾದ್ದರಿಂದ ನಾವು ವಿದ್ಯಾರ್ಥಿಗಳು ಪರಸ್ಪರ ಹಿಂದಿಯಲ್ಲಿ ಮಾತಾಡುವುದು ರೂಢಿಯಾಗಿತ್ತು.  ನಮಗೆ ಇಂಗ್ಲಿಷ್ ಭಾಷೆಯಲ್ಲಿ ಮಾತಾಡಲು  ಮಿಸೆಸ್ ಮಂಗಳಂ ನಾನಾ ಬಗೆಯ ಪ್ರೇರಣೆ ಕೊಡುತ್ತಿದ್ದರು. "ತಪ್ಪು ಮಾತಾಡಿದರೂ ಪರವಾಗಿಲ್ಲ, ನಾನು ತಿದ್ದುತ್ತೇನೆ" ಎಂದು ತಿದ್ದುತ್ತಿದ್ದರು. ಇಂಗ್ಲಿಷ್ನಲ್ಲಿ ಮಾತಾಡಿದರೆ ಪಾಯಿಂಟ್ಸ್ ಕೊಡುತ್ತಿದ್ದರು. ಅವರ ಕ್ಲಾಸಿನಲ್ಲಿ ಹಿಂದಿಯಲ್ಲಿ ಮಾತಾಡಿದರೆ ನೆಗೆಟಿವ್ ಪಾಯಿಂಟ್ಸ್ ಕೊಡುತ್ತಿದ್ದರು. ನನಗೆ ಮತ್ತು ಉಷಾ ಎನ್ನುವ ಸಹ ವಿದ್ಯಾರ್ಥಿನಿಗೆ ಕಾಂಪಿಟಿಷನ್ ಇರುತ್ತಿತ್ತು! ಒಮ್ಮೆ ನನಗೆ ತಿಳಿಯದಂತೆ ನಾನು ಹಿಂದಿಯಲ್ಲಿ ಮಾತಾಡಿದ್ದಕ್ಕೆ ನೆಗೆಟಿವ್ ಪಾಯಿಂಟ್ಸ್ ಕೊಟ್ಟರು. ನಾನು ಪ್ರತಿಭಟಿಸಲು ಹೋಗಿ ಮತ್ತೆ ಹಿಂದಿಯಲ್ಲಿ ಮಾ

ನೆನಪು - ಮಿಸೆಸ್ ಶೆಣೈ

 ನನ್ನ ಸ್ಕೂಲ್ ಟೀಚರ್ ಮಿಸೆಸ್ ಶೆಣೈ ನನ್ನನ್ನು ಬಹಳ ಪ್ರೀತಿಯಿಂದ ಕಂಡವರು.  ದೆಹಲಿಯ ಕನ್ನಡ ಶಾಲೆಯಲ್ಲಿದ್ದ ಕೆಲವೇ ಕನ್ನಡ ಶಿಕ್ಷಕರಲ್ಲಿ ಮಿಸೆಸ್ ಮಾಯಾ ಶೆಣೈ ಕೂಡಾ  ಒಬ್ಬರು. ಅವರಿಗೆ ಆಗ ಐವತ್ತರ ವಯಸ್ಸೆಂದು ತೋರುತ್ತದೆ. ಕೂದಲು ಬೆಳ್ಳಗಾಗಿತ್ತು. ಅವರು ಧರಿಸುತ್ತಿದ್ದ ಕನ್ನಡಕದ ಹಿಂದೆ ಕಣ್ಣುಗಳು ಮಿಂಚುತ್ತಿದ್ದವು. ಅವರನ್ನು ಕಂಡರೆ ಎಲ್ಲರೂ ಸ್ವಲ್ಪ ಹೆದರುತ್ತಿದ್ದರು. ಶಿಕ್ಷಕರೂ ಅವರನ್ನು ಬಹಳ ಗೌರವದಿಂದ ಕಾಣುತ್ತಿದ್ದರು. ಧ್ವನಿ ಜೋರು. ಸ್ವಾಭಿಮಾನ ಅವರ ಧ್ವನಿಯಲ್ಲಿ ಇಣುಕುತ್ತಿತ್ತು. ನಾನು ಗುಂಡುಗುಂಡಾಗಿದ್ದೇನೆಂಬ ಕಾರಣ ನನ್ನ ಗಲ್ಲದ ಮೇಲೆ ಅವರಿಗೆ ಬಹಳ ಪ್ರೀತಿ. ಗಲ್ಲಗಳನ್ನು ಹಿಂಡಿಯೇ ನನ್ನನ್ನು ಮಾತಾಡಿಸುತ್ತಿದ್ದುದು. ನಮಗೆ ಕನ್ನಡ ಒಂದು ಸಬ್ಜೆಕ್ಟ್ ಇತ್ತು. ಅದನ್ನು ಮಿಸೆಸ್ ಶೆಣೈ ತೆಗೆದುಕೊಳ್ಳುತ್ತಿದ್ದರು. ಇದಲ್ಲದೆ ಆರನೇ ತರಗತಿಯಲ್ಲಿ ನಮಗೆ ಸೋಷಿಯಲ್ ಸ್ಟಡೀಸ್ ಪಾಠ ಮಾಡಿದರು ಎಂದು ನೆನಪು.  ಕನ್ನಡ ಕ್ಲಾಸಿನಲ್ಲಿ ನಾವು ಐದೋ ಆರೋ ಮಕ್ಕಳು ಇರುತ್ತಿದ್ದೆವು, ಅಷ್ಟೇ. ನಮ್ಮನ್ನು ಲೈಬ್ರರಿಯಲ್ಲಿ ಕೂಡಿಸಿಕೊಂಡು ಪಾಠ ಮಾಡುತ್ತಿದ್ದರು.  ಪಾಠದ ಬದಲು ಹರಟೆ, ಕಥೆ ಎಲ್ಲವೂ ನಡೆಯುತ್ತಿತ್ತು! ಲೈಬ್ರರಿಯ ಪುಸ್ತಕಗಳ ಮೇಲೆ ಕಣ್ಣಾಡಿಸಲೂ ನಮಗೆ ಅನುಮತಿ ಇತ್ತು. ನಮಗೆ ಅವರು ಸಾಕಷ್ಟು ಸಲಿಗೆ ಕೊಟ್ಟುಬಿಟ್ಟಿದ್ದರು! ಉಷಾ, ಸಂಧ್ಯಾ ಎನ್ನುವ ಹುಡುಗಿಯರು ಇದ್ದರು. ಅವರು ಮಿಸೆಸ್ ಶೆಣೈ ಅವರ ಸೀರೆ ಬಹಳ ಚೆನ್ನಾಗಿದೆ ಎಂದರೆ ಅವರ

ನಡೆ ಮುಂದೆ ನೀನೊಬ್ಬನೇ!

ಮೂಲ ಕವಿತೆ: ರಬೀಂದ್ರನಾಥ  ಟ್ಯಾಗೋರ್  ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ನೀನು ಕರೆದಾಗ ಯಾರೂ ಓ ಎನ್ನಲಿಲ್ಲವೇ? ಮೇಲೆದ್ದು ನಡೆ ಮುಂದೆ ನೀನೊಬ್ಬನೇ! ಒಂಟಿಯಾದರೇನಂತೆ, ನಡೆ ಮುಂದೆ ಒಬ್ಬನೇ, ಮೇಲೆದ್ದು ನಡೆ ಮುಂದೆ ನೀನೊಬ್ಬನೇ! ನಿನ್ನ ಮಾತಿಗೆ ಯಾರೂ ಉತ್ತರಿಸಲಿಲ್ಲವೇ? ಅವರು ತಳೆದರೆ ಮೌನ? ಬಾಯ್ಬಿಡಲು ಹೆದರಿದರೆ? ಮುಕ್ತಕಂಠದಿಂದ ನೀನು ಮಾತಾಡಲು ಬಾಯ್ತೆರೆ! ಮೌನದಲ್ಲಿ ನಿನಗೆ ನಿನ್ನ ದನಿಯೇ ಆಸರೆ! ಕಾಡುದಾರಿಯಲ್ಲಿ ಎಲ್ಲ ನಿನ್ನ ಬಿಟ್ಟು ಅಗಲಿದರೆ? ಕಗ್ಗತ್ತಲಿನಲ್ಲಿ ನಿನ್ನ ಒಂಟಿ ಬಿಟ್ಟು ನಡೆದರೆ? ಮುಳ್ಳುಹಾದಿಯಲ್ಲಿ ಪಾದರಕ್ಷೆ ಇಲ್ಲದಿದ್ದರೆ  ರಕ್ತಸಿಕ್ತ ಪಾದದಿಂದ ತುಳಿದು ಮುಳ್ಳು ನಡೆ! ಸುರಿವ ಮಳೆಯ ಕಾಳರಾತ್ರಿ, ದೀಪವಿಲ್ಲ, ಕತ್ತಲೆ! ಸುಸ್ವಾಗತ ಕೋರದಂತೆ ಬಾಗಿಲುಗಳು ಮುಚ್ಚಿವೆ! ನಿನ್ನ ನೋವು ಸಿಡಿಲಿನಂತೆ, ಅದರೊಳಗಡೆ ಕಿಚ್ಚಿದೆ! ಹಚ್ಚಿ ನಿನ್ನ ಹೃದಯ-ದೊಂದಿ ಬೆಳಕಿನಲ್ಲಿ ನಡೆ! ನೀನು ಕರೆದಾಗ ಯಾರೂ ಓ ಎನ್ನಲಿಲ್ಲವೇ? ಮೇಲೆದ್ದು ನಡೆ ಮುಂದೆ ನೀನೊಬ್ಬನೇ! ಒಂಟಿಯಾದರೇನಂತೆ, ನಡೆ ಮುಂದೆ ಒಬ್ಬನೇ, ಮೇಲೆದ್ದು ನಡೆ ಮುಂದೆ ನೀನೊಬ್ಬನೇ!

ಸೋನಾ ಮೇಡಂ

 ಮೂಲ: ಗೌರವ್ ಪಾಂಡೆ (ಹಿಂದಿ) ಬಹಳ ಒಳ್ಳೆಯವರು ಸೋನಾ ಮೇಡಂ! ಸದಾ ಮುಗುಳ್ನಗುತ್ತ ಮುಗುಳ್ನಗೆಗೆ ಉಪಮೆ. ವಿದ್ಯಾರ್ಥಿಗಳ ಅಚ್ಚುಮೆಚ್ಚು ಅವರ ಸರಳತೆ ಅವರ ಆತ್ಮೀಯತೆ ಮತ್ತು ಸ್ನೇಹ ಸೂಸುವ ಮುಗುಳ್ನಗೆ. ನಿಮ್ಮ ಮುಗುಳ್ನಗೆಯ ರಹಸ್ಯ ಏನೆಂದು ಕೇಳುತ್ತಾರೆ ಸಹ ಅಧ್ಯಾಪಕರು. ಮುಗುಳ್ನಗೆಯ ಉತ್ತರ ನೀಡಿ  ಸುಮ್ಮನಾಗುತ್ತಾರೆ ಸೋನಾ ಮೇಡಂ! ಮಕ್ಕಳಿಗೆ ಪ್ರೀತಿಯಿಂದ ಕಲಿಸುತ್ರಾರೆ  ಸೋನಾ ಮೇಡಂ  ಎಂದೂ ಹೊಡೆದಿಲ್ಲ ಒಂದು ಏಟು. ಮನೆಗೆ ಮರಳುವಾಗ ಹೊಡೆತದ ವಿಷಯ ಯೋಚಿಸಿಯೇ  ನಡುಗುತ್ತಾರೆ ಸೋನಾ ಮೇಡಂ.