ಸೋನಾ ಮೇಡಂ
ಮೂಲ: ಗೌರವ್ ಪಾಂಡೆ (ಹಿಂದಿ)
ಬಹಳ ಒಳ್ಳೆಯವರು
ಸೋನಾ ಮೇಡಂ!
ಸೋನಾ ಮೇಡಂ!
ಸದಾ ಮುಗುಳ್ನಗುತ್ತ
ಮುಗುಳ್ನಗೆಗೆ ಉಪಮೆ.
ವಿದ್ಯಾರ್ಥಿಗಳ ಅಚ್ಚುಮೆಚ್ಚು
ಅವರ ಸರಳತೆ
ಅವರ ಆತ್ಮೀಯತೆ
ಮತ್ತು ಸ್ನೇಹ ಸೂಸುವ ಮುಗುಳ್ನಗೆ.
ನಿಮ್ಮ ಮುಗುಳ್ನಗೆಯ ರಹಸ್ಯ
ಏನೆಂದು ಕೇಳುತ್ತಾರೆ
ಸಹ ಅಧ್ಯಾಪಕರು.
ಮುಗುಳ್ನಗೆಯ ಉತ್ತರ ನೀಡಿ
ಸುಮ್ಮನಾಗುತ್ತಾರೆ ಸೋನಾ ಮೇಡಂ!
ಮಕ್ಕಳಿಗೆ ಪ್ರೀತಿಯಿಂದ
ಕಲಿಸುತ್ರಾರೆ
ಸೋನಾ ಮೇಡಂ
ಎಂದೂ ಹೊಡೆದಿಲ್ಲ ಒಂದು ಏಟು.
ಮನೆಗೆ ಮರಳುವಾಗ
ಹೊಡೆತದ ವಿಷಯ
ಯೋಚಿಸಿಯೇ
ನಡುಗುತ್ತಾರೆ ಸೋನಾ ಮೇಡಂ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ