ಪೋಸ್ಟ್‌ಗಳು

ಡಿಸೆಂಬರ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಪ್ಪಿಕೋ ಆಟ

ಇಮೇಜ್
ನಾನು ಆಡುವುದಿಲ್ಲ ಹಗ್ಗ ಎಳೆಯುವ ಆಟ ಅಪ್ಪಿಕೊಳ್ಳುವ ಆಟವೇ ನನಗೆ ಇಷ್ಟ ಎಳೆದಾಡುವುದಿಲ್ಲ ಈ ಆಟದಲ್ಲಿ ಯಾರೂ ಅಪ್ಪಿಕೊಳ್ಳುವರು ಎಲ್ಲರೂ ಒಬ್ಬರನ್ನೊಬ್ಬರು  ಹೊರಳಾಡಿ ಚಾಪೆಯ ಮೇಲೆ ಎಬ್ಬಿಸುತ್ತಾ ನಗೆಯ ಅಲೆ  ಹಲ್ಲು ಬಿಡುವರು ಹಿಹಿಹಿ! ಬಹುಮಾನ ಅಪ್ಪುಗೆಯ ಸಿಹಿ! ಎಲ್ಲರೂ ಗೆಲ್ಲುವುದು ಈ ಆಟದ ಹೂಟ! ಮೂಲ: ಶೆಲ್ಬಿ ಸಿಲ್ವರ್ಸ್ಟೀನ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್

ಕನ್ನಡ ಕಾರ್ಟೂನ್ ಲೋಕ

ಇಮೇಜ್
 

ಮನೆಯ ಹಾಡು

ಇಮೇಜ್
ಮೂಲ ಕವಿತೆ: ಹೆನ್ರಿ ವ್ಯಾನ್ ಡೈಕ್  ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ಕವಿತೆಗಳ ಒಂದು ಪುಸ್ತಕದ ಪುಟದಲ್ಲಿ ವಾಕ್ಯವೊಂದನು ಕಂಡು ಚಕಿತನಾದೆ: "ಪಂಜರವಾಗದು ಎಂದೂ ಕಬ್ಬಿಣದ ಸರಳು  ಸೆರೆಮನೆಯಾಗದು ಎಂದೂ ಕಲ್ಲು ಗೋಡೆ." ಹೌದೆನ್ನಿಸಿತು ಯೋಚಿಸಿದಾಗ; ಜೊತೆಗೆ ನೆನಪಾಯ್ತು ಅಲ್ಲಿಲ್ಲಿ ಅಡ್ಡಾಡುತ್ತಾ ನನಗೆ ಹೊಳೆದ ಮಾತೊಂದು: ನೆಲ ಅಮೃತಶಿಲೆಯಾಗಿ ಗೋಡೆಗೆ ಚಿನ್ನವೇ ಹೊದಿಸಿರಲಿ  ಕರೆಯಲಾಗುವುದೇ ಕಟ್ಟಡವನ್ನು ಮನೆ ಎಂದು? ಗುಡಿಸಲೇ ಆಗಿರಲಿ, ಅಲ್ಲಿ ಪ್ರೀತಿ ನೆಲಸಿದ್ದರೆ  ಗೆಳೆತನಕ್ಕೆ ದೊರಕಿದರೆ ಅನಿರ್ಬಂಧ ಸ್ವಾಗತ ಅದನ್ನೇ ಮನೆ ಎನ್ನುವುದು! ಮನೆಯು ಹರ್ಷದ ಸೆಲೆ! ಏಕೆಂದರೆ ಅಲ್ಲಿ ಹೃದಯವಾಗುವುದು ಶಾಂತ.

ಟೆಲಿಫೋನ್ ಬೂತ್ ಸ್ವಗತ

ಇಮೇಜ್
  ಹಿಂದೊಮ್ಮೆ  ಹೊರಗೆ ಕಾಯುತ್ತಿದ್ದರು ಜನ ತಮ್ಮ ಸರದಿಗೆ ನೂರೆಂಟು ಕಾರಣಗಳಿದ್ದವು ಒಳಗೆ ಬಂದವರಿಗೆ. ಅವಸರವಿಲ್ಲದೆ ಪ್ರೇಮಾಲಾಪದಲ್ಲಿ ತೊಡಗಿದ ಯುವಕ ಹೊರಗೆ ನಿಂತವರ ಹಣೆಯಲ್ಲಿ ಕಾಣುತ್ತಿದೆ ತವಕ. ತಡವಾಗಿ ಬರುತ್ತೇನೆ ಕಚೇರಿಯಲ್ಲಿ ಕೆಲಸ ಹೆಚ್ಚಿದೆ ಎಂದು ಗೆಳತಿಯ ಜೊತೆ ಹೊರಟವನದು ಕೆಚ್ಚೆದೆ. ನಿಮ್ಮ ಹೆಂಡತಿಯನ್ನು ಅಪಹರಿಸಿದ್ದೇನೆ, ಬ್ರಿಜ್ ಬಳಿಗೆ ತಂದರೆ ಐದು ಸಾವಿರ ಪೌಂಡ್ ಬಿಡುಗಡೆ ನಿಮ್ಮವಳಿಗೆ ಚೌಕಾಸಿ ಇಲ್ಲ! ತಡವಾದರೆ ಮಧ್ಯರಾತ್ರಿಗೆ ಒಂದೇ ಘಳಿಗೆ ಗುಂಡು ಉಗುಳುವುದು ನನ್ನ ಬಂದೂಕಿನ ನಳಿಗೆ! ನಾನೇ ಇಟ್ಟುಕೊಳ್ಳಬೇಕೇ?!  ಏನಾಗಿದೆ ನಿಮ್ಮ ತಲೆಗೆ! (ದೊಡ್ಡ ಮೀನು ಬಿತ್ತೆಂದುಕೊಂಡಿದ್ದೆ ಬಲೆಗೆ! ಇದೊಳ್ಳೆ ಸಿಕ್ಕಿಕೊಂಡೆ ಶಾರ್ಕ್ ಹಲ್ಗೆ) ಐನೂರು ಪೌಂಡ್ ಆದೀತೆ? ಹೋಗಲಿ ಐವತ್ತು? ಏನೆಂದಿರಿ ನಾನೇ ಕೊಡಬೇಕೆ ಮತ್ತೂ! ಅಮ್ಮಾ ನಾನಿರಲಾರೆ ಇವನ ಜೊತೆ ಇನ್ನು. ತಪ್ಪು ಮಾಡಿದೆ ಮೀರಿ ನಿನ್ನ ಮಾತನ್ನು. ಪ್ರತಿದಿನವೂ ಕುಡಿದು ಬರುತ್ತಾನೆ ಮನೆಗೆ ಕೇಳಿದರೆ ಕೋಪ, ವಾಗ್ವಾದ, ಕೊನೆಗೆ ನಾಚಿಕೆಗೆಟ್ಟವನು ಕೆನ್ನೆಗೆ ಹೊಡೆದ ನನಗೆ. ನಾನು ನಗುತ್ತಿದ್ದೆ ಅಳುತ್ತಿದ್ದೆ ಇದನ್ನೆಲ್ಲ ಕೇಳುತ್ತಾ. ಅದೆಷ್ಟು ರಹಸ್ಯಗಳು ನನ್ನಲ್ಲಿ ಅಡಗಿವೆ ಗೊತ್ತಾ! ಎಷ್ಟು ಜನ ಮರೆತು ಹೋಗುತ್ತಿದ್ದರು ತಮ್ಮ ಕೊಡೆ! ಈಗ ಯಾರೂ ಸುಳಿಯುವುದಿಲ್ಲ ನನ್ನ ಕಡೆ. ಎಲ್ಲರ ಕೈಯಲ್ಲೂ ಈಗ ಸಂಚಾರಿ ಫೋನು ನಿರರ್ಥಕವಾಗಿ ನಿಂತಿದ್ದೇನೆ ನಾನು. ಯಾರಿಗೋ ಹೊಳೆಯಿತು ...

ಮೋನಾಲೀಸಾ ಸ್ವಗತ

ಇಮೇಜ್
  ಇದು ಪ್ರತಿದಿನದ ಹಾಡು ಇವರು ಬಂದು ನನ್ನನ್ನೇ ನೋಡುತ್ತಾ ನಿಲ್ಲುವುದು. ಏನಿದೆ ನನ್ನ ಮುಗುಳುನಗೆಯ ಹಿಂದೆ ಎಂದು ಚರ್ಚಿಸುವುದೇ ಒಂದು ಧಂಧೆ. ಲಿಯೋನಾರ್ಡೋ ಏನು ಅಡಗಿಸಿರಬಹುದು ಇವಳ ನಗೆಯಲ್ಲಿ ರಹಸ್ಯ ಸಂಕೇತ? ಎಂದು ಕೇಳುತ್ತಾನೆ  ದ ಡಾ ವಿಂಚಿ ಕೋಡ್ ಓದಿ  ಜಾಣನಾಗಿದ್ದಾನೆ ವಿಪರೀತ. ನನಗೆ ಸಾಕಾಗಿದೆ ಈ ನೂಕುನುಗ್ಗಲು ಮತ್ತು ಕಲಾವಿಮರ್ಶೆಯ ಮುಗ್ಗಲು. ಚಿತ್ರ ತೆಗೆಯುತ್ತದೆ ನನ್ನ ಕಣ್ಣಿನ ಹಿಂದೆ  ಅಡಗಿಸಿಟ್ಟ ಮೈಕ್ರೋಕ್ಯಾಮೆರಾ. ಎಲ್ಲ ಗಮನಿಸುತ್ತಾ ನಕ್ಕರೂ ನಗದಂತೆ  ನಗುವ ನನ್ನ ನಗೆ ಅಜರಾಮರ. ಚಿತ್ರ: ಜೆರಾರ್ಡ್ ಗ್ಲಕ್  ಚಿತಕವಿತೆ: ಸಿ. ಪಿ. ರವಿಕುಮಾರ್