ಮೋನಾಲೀಸಾ ಸ್ವಗತ
ಇದು ಪ್ರತಿದಿನದ ಹಾಡು
ಇವರು ಬಂದು ನನ್ನನ್ನೇ ನೋಡುತ್ತಾ ನಿಲ್ಲುವುದು.
ಏನಿದೆ ನನ್ನ ಮುಗುಳುನಗೆಯ ಹಿಂದೆ
ಎಂದು ಚರ್ಚಿಸುವುದೇ ಒಂದು ಧಂಧೆ.
ಲಿಯೋನಾರ್ಡೋ ಏನು ಅಡಗಿಸಿರಬಹುದು
ಇವಳ ನಗೆಯಲ್ಲಿ ರಹಸ್ಯ ಸಂಕೇತ?
ಎಂದು ಕೇಳುತ್ತಾನೆ
ದ ಡಾ ವಿಂಚಿ ಕೋಡ್ ಓದಿ
ಜಾಣನಾಗಿದ್ದಾನೆ ವಿಪರೀತ.
ನನಗೆ ಸಾಕಾಗಿದೆ ಈ ನೂಕುನುಗ್ಗಲು
ಮತ್ತು ಕಲಾವಿಮರ್ಶೆಯ ಮುಗ್ಗಲು.
ಚಿತ್ರ ತೆಗೆಯುತ್ತದೆ
ನನ್ನ ಕಣ್ಣಿನ ಹಿಂದೆ
ಅಡಗಿಸಿಟ್ಟ ಮೈಕ್ರೋಕ್ಯಾಮೆರಾ.
ಎಲ್ಲ ಗಮನಿಸುತ್ತಾ
ನಕ್ಕರೂ ನಗದಂತೆ
ನಗುವ ನನ್ನ ನಗೆ ಅಜರಾಮರ.
ಚಿತ್ರ: ಜೆರಾರ್ಡ್ ಗ್ಲಕ್
ಚಿತಕವಿತೆ: ಸಿ. ಪಿ. ರವಿಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ