ಅಪ್ಪಿಕೋ ಆಟ



ನಾನು ಆಡುವುದಿಲ್ಲ ಹಗ್ಗ ಎಳೆಯುವ ಆಟ
ಅಪ್ಪಿಕೊಳ್ಳುವ ಆಟವೇ ನನಗೆ ಇಷ್ಟ
ಎಳೆದಾಡುವುದಿಲ್ಲ ಈ ಆಟದಲ್ಲಿ ಯಾರೂ
ಅಪ್ಪಿಕೊಳ್ಳುವರು ಎಲ್ಲರೂ ಒಬ್ಬರನ್ನೊಬ್ಬರು 
ಹೊರಳಾಡಿ ಚಾಪೆಯ ಮೇಲೆ
ಎಬ್ಬಿಸುತ್ತಾ ನಗೆಯ ಅಲೆ 
ಹಲ್ಲು ಬಿಡುವರು ಹಿಹಿಹಿ!
ಬಹುಮಾನ ಅಪ್ಪುಗೆಯ ಸಿಹಿ!
ಎಲ್ಲರೂ ಗೆಲ್ಲುವುದು ಈ ಆಟದ ಹೂಟ!

ಮೂಲ: ಶೆಲ್ಬಿ ಸಿಲ್ವರ್ಸ್ಟೀನ್ 
ಕನ್ನಡಕ್ಕೆ: ಸಿ. ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)