ಮನೆಯ ಹಾಡು

ಮೂಲ ಕವಿತೆ: ಹೆನ್ರಿ ವ್ಯಾನ್ ಡೈಕ್ 
ಕನ್ನಡ ಅನುವಾದ: ಸಿ. ಪಿ. ರವಿಕುಮಾರ್



ಕವಿತೆಗಳ ಒಂದು ಪುಸ್ತಕದ ಪುಟದಲ್ಲಿ
ವಾಕ್ಯವೊಂದನು ಕಂಡು ಚಕಿತನಾದೆ:
"ಪಂಜರವಾಗದು ಎಂದೂ ಕಬ್ಬಿಣದ ಸರಳು 
ಸೆರೆಮನೆಯಾಗದು ಎಂದೂ ಕಲ್ಲು ಗೋಡೆ."

ಹೌದೆನ್ನಿಸಿತು ಯೋಚಿಸಿದಾಗ; ಜೊತೆಗೆ ನೆನಪಾಯ್ತು
ಅಲ್ಲಿಲ್ಲಿ ಅಡ್ಡಾಡುತ್ತಾ ನನಗೆ ಹೊಳೆದ ಮಾತೊಂದು:
ನೆಲ ಅಮೃತಶಿಲೆಯಾಗಿ ಗೋಡೆಗೆ ಚಿನ್ನವೇ ಹೊದಿಸಿರಲಿ 
ಕರೆಯಲಾಗುವುದೇ ಕಟ್ಟಡವನ್ನು ಮನೆ ಎಂದು?

ಗುಡಿಸಲೇ ಆಗಿರಲಿ, ಅಲ್ಲಿ ಪ್ರೀತಿ ನೆಲಸಿದ್ದರೆ 
ಗೆಳೆತನಕ್ಕೆ ದೊರಕಿದರೆ ಅನಿರ್ಬಂಧ ಸ್ವಾಗತ
ಅದನ್ನೇ ಮನೆ ಎನ್ನುವುದು! ಮನೆಯು ಹರ್ಷದ ಸೆಲೆ!
ಏಕೆಂದರೆ ಅಲ್ಲಿ ಹೃದಯವಾಗುವುದು ಶಾಂತ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)