ನನಗೆ ನೀನು ಬೇಕು

 ಮೂಲ: ರಯಾನ್ ಮೆಕೆನ್ಜಿ 

ಕನ್ನಡಕ್ಕೆ: ಸಿ. ಪಿ. ರವಿಕುಮಾರ್



ನನಗೆ ನೀನು ಬೇಕು.

ಆದರೆ
ಆಟಿಕೆ ಬೇಕೆನ್ನಿಸಿದಂತಲ್ಲ ಮಗುವಿಗೆ,
ಮೂಳೆ ಬೇಕೆನ್ನಿಸಿದಂತಲ್ಲ ನಾಯಿಗೆ,
ಫೋನ್ ಬೇಕೆನ್ನಿಸಿದಂತಲ್ಲ ಜನರಿಗೆ.

ನನಗೆ ನೀನು ಬೇಕಾಗಿರುವುದು
ಸಮುದ್ರಕ್ಕೆ ಉಪ್ಪು ಬೇಕಾದಂತೆ,
ಹೂವಿಗೆ ಬೇಕಾದಂತೆ ನೀರು,
ಹೃದಯಕ್ಕೆ ಬೇಕಾದಂತೆ ನೆತ್ತರು.

ನನಗೆ ನೀನು ಬೇಕಾದದ್ದು ನನ್ನ ಉಳಿವಿಗೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)