ಸೂರ್ಯಾಸ್ತ

  

ಮೂಲ: ಎಲ್ಲಿಸ್ ನೈಟಿಂಗೇಲ್ 

ಕನ್ನಡಕ್ಕೆ : ಸಿ ಪಿ ರವಿಕುಮಾರ್


ಕುಳಿತಿರುವೆ ಒಂದು ಹಳೆಯ ಕಲ್ಲುಗೋಡೆಯ ಮೇಲೆ
ನೀವು ಅಂದುಕೊಂಡಷ್ಟೇನೂ ಕೊರೆಯುತ್ತಿಲ್ಲ ತಣ್ಣಗೆ
ಇಲ್ಲಿಂದ ಕಾಣುತ್ತಿದೆ ಗುಲಾಬಿ ಬಣ್ಣದ ಗಗನ ಮತ್ತು
ಅಲ್ಲಿ ಸೂರ್ಯನು ಮುಳುಗುತ್ತಿರುವುದು ಮೆಲ್ಲಗೆ.

ಶಾಂತ ಸಾಗರದಂತೆ ಗಾಳಿ ತೊನೆಯುತ್ತಿದೆ ಮೆಲ್ಲಗೆ
ತುಂಬಿಕೊಂಡು ತನ್ನಲ್ಲಿ ಮೃದುವಾದ ಕಲಕಲ
ನನಗಂತೂ ಹೊಳೆಯುತ್ತಿಲ್ಲ ಇದಕ್ಕಿಂತ ಉತ್ತಮ ಮಾರ್ಗ
ವ್ಯರ್ಥಗೊಳಿಸಲು ನನಗೆ ಸಿಕ್ಕ ಕಾಲ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಕತ್ತಲೆ ಬೆಳಕು - ಶ್ರೀರಂಗರ ನಾಟಕ