ರೊಟ್ಟಿ ಮತ್ತು ತೊವ್ವೆ

 ರೊಟ್ಟಿ ಮತ್ತು ತೊವ್ವೆ



ಮೂಲ: ಡೇವಿಡ್ ವೈಟ್

ಕನ್ನಡಕ್ಕೆ: ಸಿ ಪಿ ರವಿಕುಮಾರ್ 


ಯಾರೆಂದರು ಇದು ಮಾಹಿತಿ ಯುಗವೆಂದು

ಇದು ಮಾಹಿತಿ ಯುಗವಲ್ಲ.

ಬಿಡಿ ಸುದ್ದಿವಾಹಿನಿ ಪತ್ರಿಕೆ 

ಮತ್ತು ಸ್ಕ್ರೀನ್ ತುಂಬ 

ಕೆಂಪು ಬಣ್ಣದ ಬ್ರೇಕಿಂಗ್ ನ್ಯೂಸ್.

ಇದು ರೊಟ್ಟಿ ಮತ್ತು ತೊವ್ವೆಯ ಯುಗ.

ಜನ ಹಸಿದಿದ್ದಾರೆ 

ಮತ್ತು ಒಂದು ಒಳ್ಳೆಯ ಮಾತು

ತಣಿಸಬಲ್ಲದು ಸಾವಿರ ಮಂದಿಯ ಹಸಿವು.

ಕಾಮೆಂಟ್‌ಗಳು