ಕೊರೋನಾ ಕೊರೋನಾ - ಭಾಗ ೨ (ಚುಟುಕಗಳು)
ಕನಕಾ
*********
ಪ್ರತಿ ರಾಮನವಮಿಗೆ ಪಾನಕ
ತಪ್ಪದೆ ಹಂಚುವಳು ಮಿಸ್ ಕನಕಾ
ಈ ಸಲ ಯುಗಾದಿಗೇ
ಏನು ಸ್ಫೂರ್ತಿ ಇವಳಿಗೆ
ಹಂಚುತಿಹಳು ನೆಟ್ ಮೇಲೆ ಕೊರೋನಾ ಪ್ಯಾನಿಕ
ಶಾರ್ವರಿ
*******
ಓ ಸಂವತ್ಸರ ಶಾರ್ವರಿ!
ಎಷ್ಟಂತಾ ಮಾಡೋದು ವರಿ?
ಕೊರೊನಾ ಕೋವಿಡ್ ಮೂರನೇ ಹಂತ
ಮುಗಿಯುವ ಮುನ್ನವೇ ಬಂತೇ ಹಂತಾ
ತಿಳಿಸವರಿಗೆ, ವೀ ಆರ್ ಇನ್ ನೋ ಹರಿ!
ಬೋರಸ್
**********ಬಂತು ಕರೋನಾ ವೈರಸ್
ಮನೇಲಿರಿ ಅಂತ ಕೋರಸ್
ಲಾಕ್ ಡೌನ್ ಅಂತೆ
ಕ್ಯಾನ್ಸಲ್ ಸಂತೆ
ನ್ಯೂಸ್ ಚಾನೆಲ್ಸ್ ಡೋಂಟ್ ಬೋರಸ್
ಇಳಿಮುಖ
***********
ಎಲ್ಲದರಲ್ಲೂ ಈಗ ಇಳಿಮುಖ
ಎಂದು ಬೇಸರಿಸಿದರು ಶ್ರೀಮತಿ ರೇಖಾ
ಹಾಕೋದು ಕೇಳಿದ್ದೆ ಲಾಕಪ್ನಲ್ಲಿ ಕೈದಿಗಳ್ನ
ಅದಕ್ಕೂ ಸಂಚಕಾರ ತಂತು ಕರೋನಾ
ಲಾಕಪ್ ಹೋಗಿ ಲಾಕ್ ಡೌನ್ ಬರಬೇಕಾ?
ಮಾರ್ಚ್ ೨೨ - ಸಂಜೆ
***********************
ಸಂಜೆ ಕೇಳಿದೆ ಇವಳನ್ನು "ಏನು, ತಿಂಡಿ ಮಾಡಿದ್ಯಾ?"
ಪಾತ್ರೆ ಕುಕ್ಕುವ ಸದ್ದು! "ಏನೂ ಆಗಲಿಲ್ಲ ತಾನೇ ಸದ್ಯ?"
ಮುಂದುವರೆಯಿತು ತಾಲಿ, ಜೊತೆಗೆ ಢಣಢಣಾ ಸದ್ದು
ಅಬ್ಬಾ ಏನೋ ವಿಶೇಷವೇ ಇರಬಹುದೆಂದು ಖುದ್ದು
ಹೋಗಿ ನೋಡಿದರೆ ಥಾಲೀ ಪೀಟ್ ಎಂಬ ರುಚಿಕರ ಖಾದ್ಯ!
ಸಂಕಷ್ಟಿ
*********
ಹೊರಗೆ ಹೋಗಲು ಸಂಕಷ್ಟ ಎದುರಾಗಿ
ಮನೆಯಲ್ಲೇ ಗಣಪತಿಯ ಫೋಟೋಗೆ ಎರಗಿ
ಅದೂ ಇಲ್ಲದಿದ್ದರೂ ಚಿಂತೆ ಇಲ್ಲ
ಎಲ್ಲದಕ್ಕೂ ವಾಟ್ಸಾಪ್ ಇದೆಯಲ್ಲ
ಭಜೇಹಂ ಶ್ರೀ ಗಣಪತಿಂ ವಾಟ್ಸಾಪಿ!
ಗಂಟೆ
*****
ಬೆಕ್ಕಿನ ಕುತ್ತಿಗೆಗೆ ಗಂಟೆ
ಕಟ್ಟುವುದು ಎಂದಾದರೂ ಉಂಟೇ
ಜಾಗತೇ ರಹೋ ಎಂದು ಜನ
ಜಾಗಟೆ ಬಾರಿಸಿದ್ದನ್ನ
ಕೇಳಿ ಕರೋನಾ ಎದೆಯಲ್ಲೂ ಹೊಡೆದಿರಬಹುದು ತಮಟೆ
ಜಾಗಟೆ ರಹೋ
*****************
ಎನ್ನಾರೈ ಒಬ್ಬ ಬೆಳಗ್ಗೆ ಮೂರಕ್ಕೆ ಎದ್ದು
ಮಾಡಿದನು ಢಣಢಣಾ ಗಂಟೆ ಸದ್ದು
ವಿದೇಶಿ ಜನರು ಹೆದರಿ ಕಂಗಾಲು
ಯಾರಿಗಾಗಿ ಬೆಲ್ ಮಾಡುತಿಹೆ ಹೇಳು
ಯಾರಿಗೂ ಇಲ್ಲ, ಮೋದಿ ಹೇಳಿದ್ದು
ಸ್ಟೆಪ್
******
ನೆನ್ನೆವರೆಗೂ ಏನು ಹೇಳಿದರೂ ತಪ್ಪು
ಯಾವುದಕ್ಕೂ ಹಾಕುತ್ತಿರಲಿಲ್ಲ ಸೊಪ್ಪು
ಈಗ ಏನಂದರೂ "ಸರಿ"
ಎನ್ನುತ್ತಿರುವ ಪರಿ
ಸಿಡುಕುತ್ತಾ "ಸರಿ ಸರಿ, ದೂರ ಸರಿ" ಎನ್ನುತ್ತ ಹಾರುವರು ಸ್ಟೆಪ್ಪು
ಕುರಾನಾ
**********
ಕೋಪಗೊಂಡಿದ್ದಾರೆ ಶ್ರೀಮತಿ ಕುರಾನಾ
ಬೇಕೆಂದೇ ಗೆಳತಿ ಕಳೆದಿರುವಳು ಮಾನ
ಅವಳ ಮಾತಿಗೆ ಪ್ರತಿಭಟಿಸಿ-
ದಾಗ ತಪ್ಪಾದಂತೆ ನಟಿಸಿ
ಕ್ಷಮೆ ಕೇಳಿದಳು ಸಾರಿ ಮಿಸೆಸ್ ಕರೋನಾ
ತಿರುಪತಿಯ ತಿಮ್ಮಪ್ಪನಿಗೆ
****************************
ತಿರುಪತಿಯ ತಿಮ್ಮಪ್ಪ ನಿನಗೀಗ ವಿಶ್ರಾಂತಿ
ಜನಜಂಗುಳಿಯಿಂದ ಸ್ವಲ್ಪ ದಿನ ಮುಕ್ತಿ
ನಿನ್ನ ವೇಕೇಶನ್ನಿನ ನಡುವೆ ನೋಡು ಈ ಮೇಲು
ಮೆತ್ತಗೆ ಕಾಲೊತ್ತುತ್ತಿರುವಾಗ ಅಲಮೇಲು
ನೀನೇನೂ ವರ್ಕ್ ಫ್ರಮ್ ಹೋಮ್ ಅಲ್ಲ, ಗೊತ್ತು
ಆದರೆ ಬಂದಂತೆ ಹಾರಾಡುತ್ತಿದ್ದಾರೆ ಮಹಾವಿಪತ್ತು
ಟೆನ್ಷನ್ ಮಾಡಿಕೊಂಡಿದ್ದಾರೆ ಜನರು ವಿಪರೀತ
ಕರೋನಾ ಕರೋನಾ ಅಂತ ಬಹಳ ಉತ್ಪಾತ
ನೋಡುತ್ತಾ ಟಿವಿ ಎಲ್ಲಿ ಎಷ್ಟು ಜನ ಸತ್ತರು
ಎಂದು ಕೇಳುತ್ತಾ ಒಳಗೊಳಗೇ ವಿಕೃತ ತೃಪ್ತರು!
ತಾವೂ ಹೆದರಿ ಬೆದರಿಸುತ್ತ ಪರರನ್ನೂ
ಎಲ್ಲೆಡೆಗೂ ಹರಡುತ್ತಿದ್ದಾರೆ ಹೆದರಿಕೆಯ ಹುಣ್ಣು!
ಗೋವಿಂದ ಗೋವಿಂದ ಎನ್ನುತ್ತಿದ್ದವರೆಲ್ಲಾ
ಕೋವಿದ ಕೋವಿದ ಎನ್ನುತ್ತಿಹರಲ್ಲ!
ನೆನ್ನೆ ಒಬ್ಬರು ಬಿಡದೆ ಜಪಿಸುತ್ತಿದ್ದರು "ಗೋಕರ್ಣ"
ನಂತರ ಗೊತ್ತಾಯಿತು ಅದು "ಗೋ ಕರೋನಾ!"
ಬ್ರಹ್ಮನನ್ನಂತೂ ಆಗಲೇ ಮರೆತುಬಿಟ್ಟರು ಜನ
ಹೀಗೇ ನಡೆದರೆ ಮರೆತುಹೋದಾರು ಶಿವನ, ನಿನ್ನನ್ನ!
ನೀನು ಮೂರೂ ಲೋಕಗಳ ಅರಸ
ನಿನಗೇನು ಮಹಾ ವಿಷಯ ಈ ವೈರಸ!
ಜನರಿಗೆ ಮನೆಯಲ್ಲೇ ಇರುವಷ್ಟು ಐಕ್ಯೂ
ತಮಗೆ ತಾವೇ ವಿಧಿಸಿಕೊಂಡು ಕರ್ಫ್ಯೂ
ಮನೆಯಲ್ಲೇ ಲಾಗಿನ್ನಾಗಿ ಮಾಡಿಕೊಂಡು ಕೆಲಸ
ಇರಲಿ ಟ್ರಾಫಿಕ್ನಿಂದ ಪಾರಾಗಿ ಕೆಲದಿವಸ!
ನಿನಗೆ ಸಮರ್ಪಿಸುವೆವು ದೊಡ್ಡ ಸೈಜ್ ಲಾಡು
ವೈರಸ್ ವಿಪತ್ತಿನಿಂದ ಪಾರುಮಾಡು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ