ಆತ್ಮೋನ್ನತಿ

ಮೂಲ ಇಂಗ್ಲಿಷ್ ಸಾನೆಟ್: ಜಾನ್ ಕೀಟ್ಸ್
ಕನ್ನಡ ಅನುವಾದ: ಸಿ. ಪಿ. ರವಿಕುಮಾರ್



ಆವರಿಸುವ ಕತ್ತಲಿನಿಂದ ಬೆಳ್ಳಕ್ಕಿಯೊಂದು ಹೇಗೆ
ಮೇಲೆದ್ದು ಸಾಗುವುದೋ ಪೂರ್ವದ ಬೆಳಕಿನ ಕಡೆಗೆ
ನಿಷ್ಕಲ್ಮಶ ಆನಂದದ ವಿನಾ ಬೇರೇನನ್ನೂ ನೂಕವೋ ರೆಕ್ಕೆ
ಹಾಗೇ ನಿನ್ನ ಆತ್ಮವೂ ಹಾರುವುದು ಮೇಲಣ ರಾಜಾಧಿಪತ್ಯಕ್ಕೆ
ಎಲ್ಲಿ ಶಾಂತಿಯು ಶಾಶ್ವತವೋ ಮತ್ತು ನಿರಂತರವೋ ಪ್ರೀತಿ
ಎಲ್ಲಿ ಸುಖಾತ್ಮಗಳು ಧರಿಸಿ ಪ್ರಭಾವಳಿಯ ಮುಕುಟ 
ಅನುಪಮ ವೇಷಭೂಷಣ ತೊಟ್ಟು ಅಮೃತ ಹೀರುತ್ತಾ,
ಪುಣ್ಯಾತ್ಮಗಳಿಗೆ ಮಾತ್ರ ಸಿಕ್ಕುವುದು ಈ ರೀತಿ,
ಅಲ್ಲಿ ನಿನ್ನಾತ್ಮವು ಪಡೆವುದು ಅಮರತ್ವದ ಉನ್ನತಿ.
ಹಿನ್ನೆಲೆಯಲ್ಲಿ ದೈವೀಕ ಸಂಗೀತ ಮೊಳಗೆ
ತುಂಬಿಕೊಳ್ಳುವುದು ಮಹದಾನಂದ ಆತ್ಮದೊಳಗೆ.
ಅಥವಾ ಆಸೆಯೊಂದು ನಿನ್ನಾತ್ಮದಲ್ಲಿ ಆಗ ಪಡೆದೀತು ಅಂಕುರ
ಸರ್ವಶಕ್ತ ಪಿತನ ಕೆಲಸಗಳನ್ನು ಮಾಡಬೇಕೆಂಬ ಕಾತುರ.
ಕಂಡುಕೊಳ್ಳಬೇಕು  ಯಾವುದು ತರವೆಂಬ ಪ್ರಶ್ನೆಗೆ ಉತ್ತರ 
ಮತ್ತು ಏಕೆ ಹೆದರಬೇಕು ದುಃಖಗಳು ಬಂದಾಗ ಹತ್ತಿರ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)