ನಸುಕು ಹರಿಯುವ ಸಮಯ
ಮೂಲ ಅಮೆರಿಕನ್ ಕವಿತೆ - ಗಾಲ್ವೇ ಕಿನೆಲ್
ಕನ್ನಡಕ್ಕೆ - ಸಿ. ಪಿ. ರವಿಕುಮಾರ್
ಪ್ರಸ್ತುತ ಕವಿತೆಯಲ್ಲಿ ಕವಿ ತನಗೆ ಉಂಟಾದ ಒಂದು ಪುಟ್ಟ ಅನುಭವದಲ್ಲಿ ಗೂಢವಾದದ್ದನ್ನು ಅರಸುವ ಪ್ರಯತ್ನ ಮಾಡುತ್ತಿದ್ದಾನೆ. ಒಂದು ಸಂಜೆ ಕವಿ ಒಂದು ಜಲಧಿಯ ತೀರದಲ್ಲಿ ಕುಳಿತಿದ್ದಾನೆ. ಮಳೆಯ ನಂತರ ಬಗ್ಗಡವಾದ ನೀರಿನಲ್ಲಿ ತೇಲುವ ಅಸಂಖ್ಯ ನಕ್ಷತ್ರಮೀನುಗಳು ಅವನ ಕಣ್ಣಿಗೆ ಬೀಳುತ್ತವೆ. ಅವುಗಳನ್ನು ನೋಡಿ ಅವನಿಗೆ ಆಕಾಶದಲ್ಲಿ ಹೀಗೇ ನಿಧಾನವಾಗಿ ಸಾಗುವ ನಕ್ಷತ್ರಗಳ ಯೋಚನೆ ಬರುತ್ತದೆ. ಬಹುಶಃ ಅವುಗಳನ್ನು ನೋಡುತ್ತಾ ಕವಿ ಇಡೀ ರಾತ್ರಿ ಕಳೆದನೇನೋ! ನಸುಕು ಹರಿದಾಗ "ನಕ್ಷತ್ರಗಳು" ಒಮ್ಮೆಲೇ "ಕೆಳಗೆ ಉದುರಿಹೋದವು." ಅಲ್ಲಿಯವರೆಗೂ ಕವಿ ಅವುಗಳನ್ನು ನಿಟ್ಟಿಸುತ್ತಾ ತನ್ನ ಕಲ್ಪನಾಜಗತ್ತಿನಲ್ಲಿ ವಿಹರಿಸುತ್ತಿದ್ದ. ನಕ್ಷತ್ರಮೀನುಗಳಲ್ಲಿ ನಿಜವಾದ ತಾರೆಗಳನ್ನು ಕಾಣುವುದು ಕಲ್ಪನೆ. ರಾತ್ರಿಯ ಸಮಯದಲ್ಲಿ ಈ ಭ್ರಮಾಲೋಕ ನಿಜವೆಂದೇ ಭಾಸವಾಗುತ್ತದೆ. ಆದರೆ ನಸುಕಾದಾಗ ಒಮ್ಮೆಲೇ - ಕನಸುಗಳಂತೆ - ಈ ಭ್ರಮಾಲೋಕ ಮಾಯವಾಗುತ್ತದೆ!
ಮಳೆಯ ಬಗ್ಗಡ ನೀರಲ್ಲಿ, ಮುಸ್ಸಂಜೆಗೆ ಮುಂಚೆ,
ನೂರಾರು ನಕ್ಷತ್ರಮೀನುಗಳು
ತೆವಳುತ್ತಿವೆ, ಮಣ್ಣೇ ಆಕಾಶವೋ ಎಂಬಂತೆ,
ಅದರ ಉದ್ದಕ್ಕೂ ನಿಧಾನವಾಗಿ ಚಲಿಸುತ್ತಿವೆ ಈ
ಅಗಾಧ ಅಪರಿಪೂರ್ಣ ನಕ್ಷತ್ರಗಳು
ಎಷ್ಟು ನಿಧಾನವಾಗಿ ಚಲಿಸುತ್ತವೋ
ಮೇಲೆ ಸ್ವರ್ಗದಲ್ಲಿ ನಿಜವಾದ ತಾರೆಗಳು.
ಅನಂತರ ಅವು ಹಠಾತ್ತನೇ ನಿಂತವು,
ಒಮ್ಮೆಲೇ ಗುರುತ್ವಾಕರ್ಷಣವನ್ನು
ಅನುಭವಿಸಿದವೋ ಎಂಬಂತೆ
ಮುಳುಗಿ ಮಣ್ಣಿನಲ್ಲಿ ಮರೆಯಾಗಿ ನಿಶ್ಚಲವಾದವು.
ಸೂರ್ಯಾಸ್ತದ ಕೆನ್ನೀಲಿ ಹರಡಿದಾಗ
ಅವು ನಿಜವಾದ ತಾರೆಗಳಷ್ಟೇ ಅಗೋಚರವಾಗಿದ್ದವು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ