ಐತಿಹಾಸಿಕ ನೋಟ

 ಮೂಲ ಕವಿತೆ: ಕ್ಯಾರಲ್ ಹ್ಯಾಮಿಲ್ಟನ್

ಕನ್ನಡ ಅನುವಾದ: ಸಿ. ಪಿ. ರವಿಕುಮಾರ್



ನೇರನಡೆಯನ್ನು  ನಾವೆಲ್ಲರೂ  ಮರೆತಿದ್ದೇವೆಂಬುದು ಸುಳ್ಳು

ಬಹುಶಃ ಅದರ ಹಿಂದೆ ಬಿದ್ದಿದ್ದೇವೆ ಲಗುಬಗೆಯಿಂದ ಹಿಂದೆಂದೂ ಇಲ್ಲದಷ್ಟು.

 

ಉದಾಹರಣೆಗೆ ಟಿವಿಯಲ್ಲಿ ವ್ಯಾಖ್ಯಾನ ಮಾಡಲು ಬರುವವರ ಮನೆಯಲ್ಲಿ

ಅವರ ಹಿಂದಿರುವ ಕಪಾಟುಗಳಲ್ಲಿ ಕಾಣುವ

ಪುಸ್ತಕಗಳನ್ನು ನೋಡಿ

ಎಲ್ಲದರ ಬೆನ್ನೆಲುಬು ನೇರ, ಅಂದವಾದ ಜೋಡಣೆ,

ಎಲ್ಲೂ ಕಾಣದು ಯಾವ ಗೊಂದಲ

ಎಲ್ಲೂ ಕಾಣದು ಮಾಸಿದ ರಕ್ಷಾಕವಚ.

ಇಷ್ಟಾದರೂ ನಾವು ಉತ್ಸಾಹದಿಂದ ಪ್ರತಿಪಾದಿಸಲು ಆಯ್ದುಕೊಳ್ಳುವ ಕಟ್ಟಾ ಸತ್ಯಗಳು

ವಿರುದ್ಧ ಧ್ರುವಗಳು.

ಇತಿಹಾಸದಲ್ಲಿ ಇದು ಮೊದಲ ಸಲವೇನಲ್ಲ ಬಿಡಿ.

 

ಬಿಗ್ ಬ್ಯಾಂಗ್ ನಂತರ ಕ್ವಾರ್ಕುಗಳು ಮಾಡಿದಹಾಗೆ

 ನಾವು ಎಷ್ಟೇ ಅಂಟಿಕೊಂಡರೂ ಘರ್ಷಿಸಿದರೂ

ನಮ್ಮ ಅಡ್ಡಾದಿಡ್ಡಿ ನಡೆಗಳು ಹೊತ್ತಿಸುವ ಮುನ್ನ ಬೆಳಕು

 ನಾವು ಏನು ಮರೆಯುತ್ತೇವೆ ಎಂದರೆ, 

ಮುನ್ನುಗ್ಗುವಾಗ ನಾವು ಎಷ್ಟೇ ಅಲಕ್ಷಿಸಿದರೂ,

ಸತ್ಯದ ಧಾರಕರಾದ ನಾವು

ಮರೆಯುತ್ತೇವೆ ಬಗ್ಗಲು, 

ಮರೆಯುತ್ತೇವೆ ಕುತೂಹಲಗೊಳ್ಳಲು,

ಮರೆಯುತ್ತೇವೆ ನಮ್ಮ ಅರ್ಧಮುಗಿದ ಕೆಲಸದ

ಅವಶೇಷಗಳನ್ನು ಒಂದು ತೆರೆದ ಕಿಟಕಿಯ

ಪಕ್ಕದಲ್ಲಿಡಲು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)