ಬೂದುಹಕ್ಕಿ
ಮೂಲ: ಕುಟ್ಟಿ ರೇವತಿ (ತಮಿಳುನಾಡು)
ಕನ್ನಡಕ್ಕೆ: ಸಿ. ಪಿ. ರವಿಕುಮಾರ್
ಕನ್ನಡಕ್ಕೆ: ಸಿ. ಪಿ. ರವಿಕುಮಾರ್
ಮರದ ನೆರಳು
ಮೌನವಾಗಿ ಕುಳಿತಿದೆ ಎಲೆಗಳ ಛಾವಣಿಯ ಕೆಳಗೆ
ಬೂದುಹಕ್ಕಿಯ ಹಾಗೆ
ಬೀದಿಯುದ್ದಕ್ಕೂ ಚಾಚಿಕೊಂಡಿರುವ
ಬಿಮ್ಮನೆಯ ಮೌನವನ್ನೂ
ಕಸಿದುಕೊಂಡು ಹಾರಿಹೋಗುವುದೋ ಎಂಬಂತೆ.
ಒಬ್ಬಳು ಹುಡುಗಿ ಗುಡಿಸುತ್ತಾ ಬಂದಳು.
ಇಲ್ಲೇ ಅವನು ನನಗೆ ಕಾಯಲು ಹೇಳಿದ್ದು.
ಇಲ್ಲೇ ನನ್ನ ಪ್ರೇಮವನ್ನು ಬೇಡಿದ್ದು.
ತಿರುಗಿ ತಿರುಗಿ ನೋಡುತ್ತಾ ನನ್ನ ಕಡೆ
ಮೌನವನ್ನು ಗುಡಿಸಿಕೊಂಡು
ಕಸದ ಹುಡುಗಿ ತೆರಳಿ ಎಷ್ಟೋ ಹೊತ್ತಾಯಿತು.
ಕಸದ ಹುಡುಗಿ ತೆರಳಿ ಎಷ್ಟೋ ಹೊತ್ತಾಯಿತು.
ಕತ್ತಲು ಕೆಳಗೆ ಸುರಿಯುತ್ತಿದೆ ಈಗ
ಕಣ್ಣೀರಿನ ಧಾರೆಯಂತೆ.
ಕೊನೆಗೂ ತನ್ನ ಋತುಮಾನ ಪರ್ವಕ್ಕೆ
ತಾನೇ ಬರಲು ಸಿದ್ಧವಾದ ದೇಹದಂತೆ
ಮೋಡಿಗೊಳಗಾಗಿ, ಭೀತಿಯುಕ್ತಳಾಗಿ
ನಾನು ಕಾಯುತ್ತೇನೆ.
ಇಗೋ ... ಅವನು ದೂರದಲ್ಲಿ ನಡೆದು ಬರುತ್ತಿದ್ದಾನೆ.
ಮಳೆಯನ್ನು ಕಾರಿ
ಹಗುರಾಗಲು ಸಿದ್ಧವಾದ ಮೋಡದಂತೆ.
ಹಗುರಾಗಲು ಸಿದ್ಧವಾದ ಮೋಡದಂತೆ.
ಸಂತೋಷ ತಾಳಲಾರದೇ
ನನ್ನ ಮೈಯಲ್ಲಿ ಕೆಂಪು ತಾರೆಗಳು
ಬಿರಿಯುತ್ತಿವೆ.
ಮರವು ಮಾತ್ರ ಸ್ತಬ್ಧವಾಗಿದೆ,
ಕಿಂಚಿತ್ತೂ ಅಲುಗಾಡದೆ,
ಬೂದುಹಕ್ಕಿಯ ಹಾಗೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ