ಅಮೀರ್ ಖುಸ್ರೋ ಅವರ ಒಗಟುಗಳು - 2

ಮೂಲ - ಅಮೀರ್ ಖುಸ್ರೋ 
ಕನ್ನಡಕ್ಕೆ - ಸಿ. ಪಿ. ರವಿಕುಮಾರ್ 
Train Railway on Forest

ಕಪ್ಪು ಮೈಬಣ್ಣ, ಹಲ್ಲುಗಳು ಹಲವು, ಬಳುಕುವಳು ತೆಳ್ಳನೆಯ ನಾರಿ |
ಎರಡೂ ಕೈಗಳಿಂದ ಎಳೆಯುತ್ತ ಖುಸ್ರೋ ಬಾ ಎಂದು ಕರೆವ ವೈಯ್ಯಾರಿ  ||

(ಒಗಟು)

ಒಬ್ಬಳು ನಾರಿಗೆ ಇಬ್ಬರು ಮಕ್ಕಳು, ಒಬ್ಬನು ಇನ್ನೊಬ್ಬನ ತದ್ರೂಪು |
ಚಲಿಸುವನೊಬ್ಬ, ನಿಂತವನೊಬ್ಬ, ಜೊತೆಗಿರುವರು ಆದರೂ ಇಬ್ಬರೂ ||

(ಒಗಟು)

ನಿಂತಿರುವಳು ಮೂಲೆಯಲ್ಲಿ ಒಂಟಿಕಾಲಿನ ಸುಂದರಿ! ಯಾರು ಏನೆಂದರೆ ನಿಂತಿದ್ದಾಳೆ ಮುದುರಿ!
ಒಮ್ಮೆಲೇ ಬದಲಾಯಿತು ಏಕವಳ ಭಾವ? ಎಂಟು ಕೈ ಎತ್ತಿ ಮೇಲೆ ನಗುವಳಲ್ಲ, ಭಾವ!
ಯಾರಿವಳು ಹೇಳು ಯಾರಿವಳು ಚೆಲುವೆ? ಎಲ್ಲರಿಗೂ ಬೇಕಾದ ಅರಳು ಮಲ್ಲಿಗೆ ಹೂವೆ!


(ಒಗಟು)

ಬಾಲಕನಾಗಿದ್ದಾಗ ಎಲ್ಲರ ಕಣ್ಣ ಬೆಳಕಾಗಿದ್ದ , ದೊಡ್ಡವನಾದಾಗ ಯಾವುದಕ್ಕೂ ನಾಲಾಯಕ್ಕು
ಬಿಡಿಸು ಖುಸ್ರೋ ಕೇಳುವ ಈ ಒಗಟು ಇಲ್ಲದಿದ್ದರೆ ಎದ್ದು ಊರು ಬಿಡು ಹೊರಟು


(ಒಗಟು)

ಹೀಗೊಬ್ಬ ಮಾಂತ್ರಿಕನು ಮಾಡಿದನು ಜಾದೂ, ಗಿಳಿಯೊಂದು ಹಾಕಿದನು ಪಂಜರದ ಬಾಯ್ ತೆಗೆದು
ಹಸಿರಾಗಿ ಹೋದದ್ದು ಕೆಂಪಾಗಿ ಬಂತು, ರಹಸ್ಯವೇನಿದು ತರಬಲ್ಲೆಯಾ ಅಗೆದು?

(ಒಗಟು)

ಇಪ್ಪತ್ತು ಜನರ ತಲೆ ಕಡಿದು ಹಾಕಿದರೂ
ಕೊಲೆಯೊಂದೂ ಆಗಲಿಲ್ಲ, ಬೀಳಲಿಲ್ಲ ನೆತ್ತರು

(ಒಗಟು)



ನಲ್ಲನೊಂದಿಗೆ ನಾನು ಹೂಡುವೆನು ಪಂಥ, ಪ್ರೆಮದಾಟವದು ಅಲ್ಲ ಅಂತಿಂಥ |

ಗೆದ್ದರೆ ಅವರು ನನ್ನವರು ಮತ್ತು ಸೋತರೆ ನಾನು ಅವರ ಸ್ವತ್ತು ||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)