ನಾನಿನ್ನೂ ಜೀವಂತವಾಗಿರುವೆ
ಮೂಲ ಉರ್ದೂ ... ಸುದರ್ಶನ್ ಫಾಕಿರ್
ಕನ್ನಡಕ್ಕೆ ... ಸಿ.ಪಿ. ರವಿಕುಮಾರ್
ನೀಡಿರಿ ಕಷ್ಟಗಳಿಗೆ ಆಹ್ವಾನ ನಾನಿನ್ನೂ ಜೀವಂತವಾಗಿರುವೆ
ಮಾಡಿಕೊಡಿ ನನಗೆ ಮನದಟ್ಟು, ನಾನಿನ್ನೂ ಜೀವಂತವಾಗಿರುವೆ
ನಿಲ್ಲುವುದು ನನ್ನ ಪ್ರಾಣವೂ ನಾನು ನಿಲ್ಲುವೆನೋ ಯಾವಾಗ
ತಳ್ಳಿಬಿಡಿ ಗುರಿಯನ್ನು ದೂರ, ನಾನಿನ್ನೂ ಜೀವಂತವಾಗಿರುವೆ
ರೂಢಿಯಾಗಿದೆ ನನಗೆ ಈಗ ನಂಜು ಹೀರುವುದು ಜನರೇ
ನೀಡಿ ಬೇರಾವುದೋ ಮದ್ದು, ನಾನು ಜೀವಂತವಾಗಿರುವೆ
ನಡೆವ ದಾರಿಯ ಮೇಲೆ ನನಗೆ ಉಂಟಾಗುತ್ತಿದೆ ಒಲವು
ಚದುರಿಸಿ ಜನಜಂಗುಳಿಯನ್ನು, ನಾನಿನ್ನೂ ಜೀವಂತವಾಗಿರುವೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ