ಎಲೆ ಮದರಂಗಿ ನಿನ್ನ ಕಡುಗೆಂಪು ರಕ್ತ
ಮೂಲ ಗಜಲ್... ಸುದರ್ಶನ್ ಫಾಕಿರ್
ಕನ್ನಡಕ್ಕೆ ... ಸಿ.ಪಿ. ರವಿಕುಮಾರ್

ಪ್ರತ್ಯಕ್ಷ ಜನರಲ್ಲಿ ಹುಡುಕುತ್ತ ದೋಷ
ಅದೃಶ್ಯ ದೇವರಿಗೆ ನಿತ್ಯ ಹುಡುಕಾಟ
ಉಡುಗೊರೆ ಎನ್ನುವರು ಬದುಕನ್ನು ಕೆಲವರು
ಕಠಿಣ ಸಜೆಯಂತೆ ಎಂಬುದಿನ್ನೊಂದು ನೋಟ
ಉದ್ದಗೊಳಿಸುತ್ತದೆ ಬದುಕನ್ನು ಅಷ್ಟೇ
ಮದ್ದೆಂಬ ಹೆಸರೊಂದು ತಪ್ಪು ಸಂಕೇತ
ಚೆಲುವೆ ಅಂಗೈ ಮೇಲೆ ಬಿಡಿಸುತ್ತಿದೆ ಚಿತ್ರ
ಎಲೆ ಮದರಂಗಿ ನಿನ್ನ ಕಡುಗೆಂಪು ರಕ್ತ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ