ಕಲಾವಿದನ ಮಗಳು



ಮಗಳು ಕೇಳುತ್ತಾಳೆ ಚಿತ್ರಕಾರನನ್ನು ಅಪ್ಪಾ
ರಂಗು ಮಾಡುವುದರಲ್ಲೇ ಹೋಯಿತು ಇಡೀ
ಹಗಲು! ಯಾವ ಸೌಖ್ಯಕ್ಕಾಗಿ ನಿನ್ನ ಕಲೆ!
ನಗದು ನಾಣ್ಯ ಎಂದೂ ಕಾಣೆ ನಿನ್ನ ಬಳಿ,
ಸಿಗದು ಎಂದೂ ಪುರುಸೊತ್ತು ನಮಗಾಗಿ,
ಬಿಗಿಹಿಡಿದ ಸೊಂಟದ ಪಟ್ಟಿ ಬಾಳ್ವೆ!
ಬಿಗುಮಾನ ಅಷ್ಟೇ ಕಲಾವಿದರೆಂಬ ಹಣೆಪಟ್ಟಿ!
ಸಿಗಲಿಲ್ಲ ಇದುವರೆಗೂ ಯಾವುದೇ ಸನ್ಮಾನ!
ಜಗತ್ತು ಎಷ್ಟು ಮುಂದುವರೆದಿದೆ ಅಪ್ಪಾ
ಈಗ ಸಿಕ್ಕುತ್ತದೆ ಚಿತ್ರ ಬರೆದುಕೊಡಲು ಆ್ಯಪ್
ಚಿಗರೆಯ ವೇಗದಲ್ಲಿ ಬಿಡಿಸಿಕೊಡುತ್ತದೆ  ಏಐ 
ಮುಗುಳ್ನಗುವ ಮೋನಾ ಮಲ್ಲಿಗೆ ಮುಡಿದ ಚಿತ್ರ!

ಈಗ ಕೂಡಲೇ ಬಿಡಿಸಿಕೊಡು ನೋಡೋಣ ಮಗಳೇ 
ಬಾಗಿ  ಓದಲು ಕೂತ ಚಿತ್ರ, ಸಾಕು ಏಐ ರಗಳೆ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)