ಮೈಲುಗಳ ತನಕ!


ಮೂಲ ಹಿಂದಿ ಕವಿತೆ: ಕುಂವರ್ ಬೇಚೈನ್ 
ಕನ್ನಡಕ್ಕೆ: ಸಿ.ಪಿ. ರವಿಕುಮಾರ್ 

ಹೀಗೇ ಉರಿಯಿತು ಬದುಕು, ಹೀಗೇ ಮೈಲುಗಳ ತನಕ! 
ಬೆಳದಿಂಗಳು ನಾಲ್ಕು ದಿನ, ಬಿಸಿಲು ಮೈಲುಗಳ ತನಕ! 

ಪ್ರೇಮವೆಂಬುವ ಗ್ರಾಮ ಎಂಥ ವಿಚಿತ್ರವೋ ಗೆಳೆಯ!
ಇಲ್ಲಿ ದುಃಖದ ಹಾದಿ ಸವೆಯದು ಮೈಲುಗಳ ತನಕ!

ಹೊರಟರೆ ಮನೆಬಿಟ್ಟು ಜೊತೆಯಾಯ್ತು ಮಗಳ ನಗೆಮುಗುಳು! 
ಪರಿಮಳ ನೀಡುತಿತ್ತು ನಗೆಯ ಮೊಗ್ಗು ಮೈಲುಗಳ ತನಕ! 

ತಾಯ ಸೆರಗಲ್ಲಿ ಮುಖವನಿಟ್ಟೆ, ಒಡನೆ ಸುರಿಯಿತು ಧೋ 
ನನ್ನ ಕಣ್ಣೊಳಗಿದ್ದ ನೋವು ಮೈಲುಗಳ ತನಕ 

ಸುಮ್ಮನಾದರೆ ನಾನು ಅಲ್ಲಿನ್ನಾರೋ ನುಡಿದರು ಆಗ 
ನೀನು ನಿಂತರೂ ನಿನ್ನ ಮಾತು ಮೈಲುಗಳ ತನಕ 

ನಿನ್ನವಳು ನಾನೆಂಬ ಅವಳ ಮಾತು ಮನದಲ್ಲಿ 
ಕಲ್ಲು ಸಕ್ಕರೆಯಂತೆ ಕರಗುತ್ತಿತ್ತು ಮೈಲುಗಳ ತನಕ! 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)