ಕದಂಬ ವೃಕ್ಷ
ಕದಂಬ ವೃಕ್ಷ
ಹಿಂದಿ ಮೂಲ: ಸುಭದ್ರಾ ಕುಮಾರಿ ಚೌಹಾನ್
ಮೂಲ ಹಿಂದಿ ಕವಿತೆ: ಸುಭದ್ರಾ ಕುಮಾರಿ ಚೌಹಾನ್
ಕನ್ನಡಕ್ಕೆ: ಸಿ.ಪಿ. ರವಿಕುಮಾರ್
ಈ ಕದಂಬ ವೃಕ್ಷವು, ಏನಮ್ಮಾ, ಇರುತಿರೆ ಯಮುನಾ ತೀರದಲಿ!
ನಾನೂ ಏಕಾಗೆನು ಶ್ರೀಕೃಷ್ಣ, ವೃಕ್ಷದ ರೆಂಬೆಗಳಲ್ಲಿ?
ಎರಡೇ ಕಾಸಿನ ಕೊಳಲಮ್ಮಾ! ಕೊಂಡು ಕೊಟ್ಟು ನೀ ನೋಡು!
ಮಾಯೆಯಲ್ಲಿ ಮರ ಕರೆವುದೆನ್ನನು ಕೆಳಗಿಳಿಸುತ ತನ್ನಯ ತೋಳು!

ನಿನ್ನ ಕಣ್ಣು ತಪ್ಪಿಸಿ ನಾನಾಗ ಹೋಗುವೆನಮ್ಮಾ ಅಲ್ಲಿ!
ಕೆಳಗಿನ ರೆಂಬೆಯ ಮೇಲ್ಗಡೆ ಕುಳಿತು ಸೇರುವೆ ನಾ ತುತ್ತತುದಿ!
ಅಲ್ಲೇ ಎಲೆಗಳ ಮರೆಯಲ್ಲಾಗ ಮೆಲ್ಲನೆ ಉದುವೆ ಕೊಳಲು
ಅಮ್ಮಾ! ಅಮ್ಮಾ! ಸ್ವರವನ್ನೂದುತ ನಿನ್ನನು ಮೋಹದಿ ಕರೆದು!

ನನ್ನಯ ಮುರಳೀಗಾನವ ಕೇಳಿ ನೀ ತಡೆಯದೆ ಆನಂದ
ಓಡೋಡುತ್ತಾ ಬರುವೆ, ಲೆಕ್ಕಿಸದೆ ಕೆಲಸ-ಕಾರ್ಯಗಳ ಬಂಧ!

ನೀ ಬರುವುದು ಕಾಣುತಲೇ ಅಮ್ಮಾ! ಅಡಗುವೆ ಎಲೆಮರೆಯಲ್ಲಿ!
ಅಲ್ಲಿಂದಲೆ ಮೆಲುನಾದವ ಮಾಡುತ ನಗುವೆನು ನಾ ಮನದಲ್ಲಿ!

ಎಷ್ಟೇ ಕರೆದರೂ ಬಾರೆನು! ಆನಂದಿಸುವೆನು ನಿನ್ನ ಪ್ರತೀಕ್ಷೆ!
ನಿನ್ನಯ ಸಹನೆಗೆ ನಿನ್ನಯ ಪ್ರೀತಿಗೆ ಕೊಡುವೆನು ನಾನು ಪರೀಕ್ಷೆ!
ಬಾರೋ ಕಂದ! ಬಾ ಎಲ್ಲಿರುವೆ! ಎನ್ನುತ ನನ್ನನು ಕರೆವೆ!
ಚಕ್ಕುಲಿ ತರುವೆನು! ಉಂಡೆಯ ಕೊಡುವೆನು! ಎನ್ನುತ ನೀ ಗೋಗರೆವೆ!
ನಿನ್ನನು ಇನ್ನೂ ಆಡಿಸುವಾಸೆಗೆ ಏರುವೆ ಇನ್ನೂ ಮೇಲೆ!
ಅಯ್ಯೋ ನನಗೇನಾಗುವುದೋ ಎಂದು ಹೆದರುವೆ ನೀ ಮರಿಹುಲ್ಲೆ!

ವ್ಯಾಕುಲಗೊಳ್ಳುತ ಅಲ್ಲೇ ಮರದಡಿ ಕುಳಿತು ಬಿಡುವೆ ಸೆರಗೊಡ್ಡಿ
ನೀ ಕಣ್ಮುಚ್ಚುವೆ, ಹರಕೆಯ ಹೊರುವೆ, ಸೆರಗಲಿ ಕಾಸನು ಕಟ್ಟಿ

ನಿನ್ನನು ಧ್ಯಾನದೊಳಿರುವುದ ಕಂಡು ಮೆಲ್ಲನೆ ನಾ ಕೆಳಗಿಳಿದು
ನಿನ್ನಯ ಹಿಂದೆಯೆ ಅಡಗುವೆನಮ್ಮಾ ಮೇಲಕೆ ಸೆರಗನ್ನೆಳೆದು!

ಬೆದರುತ ನೀನು ತೆರೆಯುವ ಕಣ್ಣು ಸಂತಸದಲ್ಲರಳುವುದು!
ನಿನ್ನಯ ಮಮತೆ ನಿನ್ನಯ ಕಂದನ ಮಡಿಲಲ್ಲೇ ಪಡೆಯುವುದು!
ಆಟವನಾಡುತ ದಿನವಿಡಿ ನಾವು ಕಾಲವ ಕಳೆಯುವ ಹೀಗೇ!
ಇರುತಿದ್ದರೆ ಈ ಕದಂಬ ವೃಕ್ಷವು ಯಮುನೆಯ ತೀರದ ಮೇಲೆ!
ನಿನ್ನಯ ಮಮತೆ ನಿನ್ನಯ ಕಂದನ ಮಡಿಲಲ್ಲೇ ಪಡೆಯುವುದು!
ಆಟವನಾಡುತ ದಿನವಿಡಿ ನಾವು ಕಾಲವ ಕಳೆಯುವ ಹೀಗೇ!
ಇರುತಿದ್ದರೆ ಈ ಕದಂಬ ವೃಕ್ಷವು ಯಮುನೆಯ ತೀರದ ಮೇಲೆ!
ಹಿಂದಿ ಮೂಲ: ಸುಭದ್ರಾ ಕುಮಾರಿ ಚೌಹಾನ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ