ಮುತ್ತಾದ ಹನಿ

ಹಿಂದಿ ಮೂಲ: ಅಯೋಧ್ಯಾ ಸಿಂಗ್ ಹರಿಔಧ್ 
ಕನ್ನಡಕ್ಕೆ: ಸಿ.ಪಿ. ರವಿಕುಮಾರ್ 

ಮೋಡಗಳ ಮೆತ್ತಗಿನ ತೋಳು ಹಾಸುಗೆಯನ್ನು 
ತೊರೆದು ಮುನ್ನಡೆಯಿತು ಪುಟ್ಟ ಹನಿ 
ಏಕೆ ಬಂದೆನೋ ಮನೆಯನ್ನು ತೊರೆದು 
ಎಂಬ ಶಂಕೆಯ ಒಳದನಿ 

ಬ್ರಹ್ಮ ಭಾಗ್ಯವನೇನು ಬರೆದನೋ 

ಉಳಿವೆನೋ ಧೂಳಿನಲಳಿವೆನೋ 
ಬಿದ್ದು ಕೆಂಡದ ಮೇಲೆ ಉರಿವೆನೋ 
ಕಮಲನಾಭಿಯ ಸೇರಿಕೊಳುವೆನೋ 

ಹೀಗೆ ಯೋಚಿಸುತಿರಲು ಬೀಸಿತು
ಕಡಲ ಗಾಳಿ ಎಲ್ಲಿಂದಲೋ
ಬಾಯ್ತೆರೆದು ಕುಳಿತಿದ್ದ ಚಿಪ್ಪಿಗೆ
ಬಿದ್ದು ಹನಿ ಮುತ್ತಾಯಿತು 

ಹೀಗೆ ಮನೆಯನು ಬಿಟ್ಟು ಹೊರಡಲು 
ಶಂಕಿಸಿ ಜನ ಹಿಂಜರಿವರು 
ಬಿಡದೆ ಪರಿವರ್ತನೆ ಅದೆಂತು?
ಮುತ್ತು ಪ್ರಶ್ನಿಸಿ ನಗುವುದು 



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)