ನಿನ್ನನ್ನು ಕಂಡಾಗ

ಮೂಲ ಹಿಂದಿ ಕವಿತೆ (ಗಜಲ್): ಜಾವೇದ್ ಅಖ್ತರ್ 
ಕನ್ನಡಕ್ಕೆ: ಸಿ.ಪಿ. ರವಿಕುಮಾರ್ 



ನಿನ್ನನ್ನು ಕಂಡಾಗ ಮನದಲ್ಲಿ ಹೊಳೆದದ್ದು
ಬಾಳು ಕಡುಬಿಸಿಲು, ನೀನು ದಟ್ಟ ನೆರಳು

ಇಂದು ಮತ್ತೊಮ್ಮೆ ಬಯಕೆ ಹುಟ್ಟಿ ಎದೆಯೊಳಗೆ 
ಹೃದಯಕ್ಕೆ ಮತ್ತೆ ಹೇಳಬೇಕಾಯ್ತು ತಿಳುವಳಿಕೆ 

ನೀನು ತೆರಳಿದ ಬಳಿಕ ಯೋಚಿಸುವೆ ನಾನು 
ಪಡೆದುದೇನನ್ನೋ ನಾನು ಕಳೆದುದೇನನ್ನು?

ಗುನುಗಲಾರೆನೋ ನಾನಾವ ಗೀತೆಯನ್ನು
ಕಾಲ ಹಾಡಿತೇಕೋ ಅಂಥ ರಾಗವನ್ನು 


(ಈ ಕವಿತೆಯನ್ನು ಒಬ್ಬ ಪ್ರಸಿದ್ಧ ಗಜಲ್ ಗಾಯಕ ಹಾಡಿದ್ದಾರೆ ... ಯಾವ ಗಾಯಕ? ಯಾವ ಗೀತೆ?)

Kannada translation by C.P. Ravikumar of a gazal by Javed Akhtar.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)