ನಮ್ಮ ದೇಶ

ಮೂಲ ಹಿಂದಿ ಕವಿತೆ: ಅಜ್ಞೇಯ 
ಕನ್ನಡಕ್ಕೆ ಸಿ.ಪಿ. ರವಿಕುಮಾರ್ 

Aerial Photography of City during Daytime

ಹಳ್ಳಿಗಳಲ್ಲಿ 
ಹುಲ್ಲುಗರಿ ಹೊದ್ದಿಸಿದ ಈ ಹರಕು ಮುರುಕು ಜೋಪಡಿಗಳಲ್ಲಿ 
ವಾಸವಾಗಿದೆ ನಮ್ಮ ದೇಶ. 

ತಮಟೆಗಳಲ್ಲಿ 
ಬಿದುರಿನ ಕೊಳಲುಗಳಲ್ಲಿ 
ಹೊರಟ ಸ್ವರಗಳಲ್ಲಿದೆ 
ನಮ್ಮ ಸಾಧನೆಯ ಸಾರ ವಿಶೇಷ. 

ಇದರ ಅಂತರಾಳವನ್ನು 
ಗೊತ್ತಾಗದಂತೆ ಬಂದು ಕಚ್ಚುತ್ತದೆ 
ನಗರಗಳ ವಾಸನಾಮಯ 
ಮುಖಹೀನ ವಿಷಪೂರ್ಣ ನಾಗಶೇಷ. 

ಇವರಲ್ಲೇ ಹಾಸುಹೊಕ್ಕಾದ 

ತನ್ನ ಅಮಾಯಕ ಸಂಸ್ಕೃತಿಯ 
ದುರ್ದೆಶೆಯನ್ನು ಕಂಡು 
ಸಭ್ಯತೆಯ ಭೂತದ ಅಟ್ಟಹಾಸ. 

Kannada Translation by C.P. Ravikumar of a Hindi Poem by the famed poet Ajneya

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)