ಕಬೀರನ ಹತ್ತು ದ್ವಿಪದಿಗಳು (೩೧ - ೪೦)

ಮೂಲ: ಮಹಾತ್ಮಾ ಕಬೀರ್ 
ಕನ್ನಡ ಭಾವಾನುವಾದ: ಸಿ.ಪಿ. ರವಿಕುಮಾರ್ 

ಕಬೀರ! ಮಾಡಿದರೇನೂ ಆಗದು! ಆಗುವುದು ಮಾಡದೇ ಹೋದರೂ 
ಮಾಡಿದ್ದರಿಂದ ಆಯಿತೆನ್ನುವೆಯಾ ? ಮಾಡಿದ್ದು ಯಾರೋ ಬೇರೆಯವರು ॥೩೧ ॥ 

ಕಣ್ಣಿನ ಪಾಪೆಯು ಹೇಗೋ ಹಾಗೆ ದೇವರು ನಮ್ಮೊಳಗಿಹನು 
ಅರಿಯದ ಮೂರ್ಖರು ಹೊರಗಡೆ ಹುಡುಕಿ ನಿರಾಶರಾಗುತ್ತಿಹರು ॥೩೨

ಮೊದಲು ವಿರಹದ ಬೆಂಕಿ ಸುಡುವುದು; ಪ್ರೇಮ ತಂಪೆರೆಯುವುದು  ನಂತರ
ಇದನ್ನು ಅನುಭವಿಸಿದವನಿಗೇ ಗೊತ್ತು ಮಿಲನದಾಸೆಯ ಸಂಕಟ ॥೩೩॥ 

 ಸಾಗರಕ್ಕೆ ಬೆಂಕಿ ಇಟ್ಟರೆ ಪ್ರಕಟವಾಗದು ಹೊಗೆ
ಸುಟ್ಟವನಿಗೇ ಗೊತ್ತು! ಪ್ರೇಮ ಅಂತಹ ಧಗೆ ॥ ೩೪ ॥ 

ಅಂಥ ಧನ ಸಂಗ್ರಹಿಸು ಕಬೀರ! ಮುಂದಕ್ಕೂ ಆಗಿ ಬರಬೇಕು
ಹಣದ ಗಂಟು ತಲೆ ಮೇಲಕ್ಕೆ ಹೊತ್ತು ಹೋದವರಾದರೂ ಯಾರು?॥ ೩೫ ॥ 

ಆಸೆಗೆ ಸಾವಿಲ್ಲ ಜಗತ್ತು ಮುಳುಗಿದರೂ; ಜನರೋ ಸತ್ತು ಸಾಯುತ್ತಿಹರು 
ಮೇಲೆ ಹೋಗಿ ತಿನ್ನುವರೋ ಎಂಬಂತೆ ಧನವನ್ನು ಬಾಚುತ್ತಿಹರು ॥೩೬॥ 

ಒಂದು ಮಾತಾಡಿದರೆ ಬೆಲೆಯಿಲ್ಲ; ಎರಡು ಮಾತಾಡಿದರೆ ಬೈಗುಳವೇ!
ಯೋಚಿಸಿ ಹೇಳುತ್ತಾನೆ ಕಬೀರ - ಎಲ್ಲವೂ ಹೇಗಿದೆಯೋ ಸರಿಯಾಗಿದೆ ಹಾಗೇ ॥ ೩೭ ॥ 

ಕಬೀರ ಇದು ಪ್ರೇಮದ ಮನೆ - ಸೋದರತ್ತೆಯ ಮನೆಯಲ್ಲ
ತಲೆ ಬಾಗಿಸಿ ಬಂದವನು ಮಾತ್ರ ಬಾಗಿಲೊಳಗೆ ಬರಬಲ್ಲ ॥೩೮॥ 

ಕೈಯೊಳು ಮಾಲೆ ಸುತ್ತುತ್ತಿಹುದು; ಬಾಯೊಳು ನಾಲಗೆ ಸುತ್ತುತ್ತಿಹುದು
ಮನಸ್ಸು ಹತ್ತೆಡೆ ಸುತ್ತುತ್ತಿಹುದು; ಸ್ಮರಣೆ ಇದೆಂಥದೋ ಬಂಧು? ॥೩೯॥ 

ಕಾಷ್ಟದ ಮಣಿಸರ ಹೇಳುತ್ತಿದೆ ಮತ್ತೆ ಮತ್ತೆ ತಿಳುವಳಿಕೆ
ಮನವನು ತಿರುಗಿಸಲಾರೆ ಕಬೀರ! ನನ್ನ ತಿರುಗಿಸುವೆ ಹೇಗೆ? ॥೪೦॥ 

Kannada translation by C.P. Ravikumar of of ten couplets by the celebrated saint-poet Kabir.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)