ಯಾರಿಗೆ ಮಾಡ್ತೀ ಮೀಮ್? - ಒಂದು ಮೀಮಾಂಸೆ

ಸಿ.ಪಿ. ರವಿಕುಮಾರ್

 "ಯಾರಿಗೆ ಮಾಡ್ತೀ ಮ್ಯಾಮ್" ಎಂಬ ಕನ್ನಡ ನಾಟಕವಿದೆ. "Who are you trying to fool?" ಎಂಬುದು ಈ ವಾಕ್ಯಪ್ರಯೋಗದ ತಾತ್ಪರ್ಯ.

ಇಂದಿನ ಫೇಸ್-ಬುಕ್ ಪೀಳಿಗೆಯಲ್ಲಿ "ಯಾರಿಗೆ ಮಾಡ್ತೀ ಮೀಮ್" ಎಂಬುದು ಹೆಚ್ಚು ಪ್ರಸ್ತುತ. ಚಿತ್ರ ಮತ್ತು ಬರಹಗಳನ್ನು ಬಳಸಿ ಯಾವುದಾದರೊಂದು ವಿಷಯದ ಬಗ್ಗೆ ರೋಚಕವಾಗಿ ಮಂಡಿಸುವುದಕ್ಕೆ ಮೀಮ್ (Meme) ಎಂಬ ಹೆಸರಿದೆ.  ಯಾರೋ ಕನ್ನಡಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿವೆ ಎಂದು ಮೀಮ್ ಕಳಿಸಿದರು. ಅದನ್ನು ಕೆಳಗೆ ತೋರಿಸಿದ್ದೇನೆ.  ಮೀಮನ್ನು  ನೋಡಿದಾಗ ನನ್ನ ಮನಸ್ಸಿನಲ್ಲಿ ಮೂಡಿದ  ಎಂಟು ಪ್ರಶ್ನೆಗಳನ್ನು ಮಾತ್ರ ಇಲ್ಲಿ ಕಲೆ ಹಾಕಿದ್ದೇನೆ. ಎಂಟು ಪ್ರಶಸ್ತಿಗಳು; ಎಂಟು ಪ್ರಶ್ನೆಗಳು.  ಈ ಪ್ರಶ್ನೆಗಳನ್ನು ನಾನೇನೂ  ವ್ಯಂಗ್ಯಪೂರ್ವಕವಾಗಿ ಕೇಳುತ್ತಿಲ್ಲ.


  1.  ಈ ಎಂಟು ಜನ ಸಾಹಿತಿಗಳ ಒಂದಾದರೂ ಕೃತಿಯನ್ನು ಕನ್ನಡದಲ್ಲಿ ಓದಿದವರು ಎಷ್ಟು ಜನ ಇರಬಹುದು?  ಮುಂದೆ ಓದುತ್ತೇನೆ ಎಂಬ ಯೋಜನೆ ಇಟ್ಟುಕೊಂಡವರು ಎಷ್ಟು ಜನ ಇರಬಹುದು? 
  2. ನಿಮ್ಮಿಂದಲೇ ಪ್ರಾರಂಭಿಸಿ ನಿಮ್ಮ ಸ್ನೇಹಿತರು-ಬಾಂಧವರಲ್ಲಿ ಈ ಕೃತಿಗಳನ್ನು ಓದಿದವರು ಯಾರಾದರೂ ಇದ್ದಾರೆಯೇ?  ಮುಂದೆ ಓದುತ್ತೇನೆ ಎಂಬ ಯೋಜನೆ ಇಟ್ಟುಕೊಂಡವರು ಎಷ್ಟು ಜನ ಇರಬಹುದು?
  3. ಮೂಲ ಕನ್ನಡದಲ್ಲ್ಲಿ ಅಲ್ಲವಾದರೂ ಇಂಗ್ಲಿಷ್ ಅಥವಾ ಹಿಂದಿ ಅನುವಾದವನ್ನು ಓದಿದವರು ಎಷ್ಟು ಜನ ಇರಬಹುದು?  ಓದಬೇಕು ಎನ್ನುವ ಆಸಕ್ತಿ ಇರುವವರು ಎಷ್ಟು ಜನ ಇರಬಹುದು?  ಮುಂದೆ ಓದುತ್ತೇನೆ ಎಂಬ ಯೋಜನೆ ಇಟ್ಟುಕೊಂಡವರು ಎಷ್ಟು ಜನ ಇರಬಹುದು?
  4. ಹತ್ತನೇ ತರಗತಿಯವರೆಗೆ ಕನ್ನಡ ಭಾಷೆ ಓದುವ ಮಕ್ಕಳಿಗೆ ಪಠ್ಯಪುಸ್ತಕಗಳಲ್ಲಿ ಈ ಪ್ರಶಸ್ತಿ ಪಡೆದ ಯಾರಾದರೂ ಸಾಹಿತಿಗಳು ಗೋಚರಿಸುತ್ತಾರೆಯೆ? ಈ ಸಾಹಿತಿಗಳು ಮತ್ತು ಅವರ ಕೃತಿಗಳು ಬಿ.ಎ. ಮತ್ತು ಎಂ.ಎ. ಪದವಿ ಮಾಡುವವರಿಗೆ ಮಾತ್ರ ಮೀಸಲೆ?
  5.  ಈ ಸಾಹಿತಿಗಳ ಕೃತಿಗಳು ಸುಲಭವಾಗಿ ಸಿಕ್ಕುತ್ತಿವೆಯೇ? (ಕನ್ನಡದಲ್ಲ್ಲಿ ಅಷ್ಟೇ ಅಲ್ಲ, ಇನ್ನಿತರ ಭಾಷೆಗಳಲ್ಲಿ.) ಮಲ್ಟಿಮೀಡಿಯಾ ಮಾಧ್ಯಮಗಳಲ್ಲಿ ಈ ಸಾಹಿತಿಗಳ ಕೃತಿಗಳ ಪುನರ್-ಸೃಷ್ಟಿ ನಡೆದಿದೆಯೇ?
  6.  "ಕಾಳಿದಾಸ ಸಂಸ್ಕೃತದ ಬಹಳ ದೊಡ್ಡ ಕವಿಯಂತೆ" ಎಂದು ದಂತಕಥೆಯ ಮಾದರಿಯಲ್ಲಿ ಅವನ ಮತ್ತು ಅವನ ಕೃತಿಗಳ ಬಗ್ಗೆ ಮಾತಾಡುವ ಕಾಲ ಈಗಾಗಲೇ ಈ ಸಾಹಿತಿಗಳಿಗೆ ಪ್ರಾಪ್ತವಾಗಿಬಿಟ್ಟಿದೆಯೇ?
  7. ಫೇಸ್ ಬುಕ್ ಮೊದಲಾದ ಮಾಧ್ಯಮಗಳ  ಮೂಲಕ ಈ ಕೃತಿಗಳ ಮತ್ತು ಕನ್ನಡ ಸಾಹಿತ್ಯದಲ್ಲಿರುವ ಆಸಕ್ತಿಯ  ಪುನರುಜ್ಜೀವನ ಸಾಧ್ಯವೇ?
  8.  "ಕನ್ನಡ ಸಾಹಿತ್ಯಕ್ಕೆ ಮತ್ತು ಭಾಷೆಗೆ ಏನೂ  ಆಗಿಲ್ಲ; ನಿಮಗೆ ಸುಮ್ಮನೇ ಇಲ್ಲದ ಕಾಳಜಿ" ಎನ್ನುತ್ತೀರಾ? ನನಗೆ ತಿಳಿಯದಂತೆ ಇಂಟರ್ ನೆಟ್ ಹೊರಗಿನ ಲೋಕದಲ್ಲಿ ಕನ್ನಡ ರಾರಾಜಿಸುತಿದೆಯೇ? ಯಾರಿಗೆ ಮಾಡ್ತೀರಿ ಮೀಮ್? 
Kannada language has the highest number of Jnanpith awards to its credit. In this blog post, I have raised questions on the mindless celebration of this fact through Memes that go viral for a while, without ever bothering to read the authors who have brought these accolades to the language. What is needed is to popularize the reading of these works of literature, not just the factoids about the winners.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)