ದುಃಖಿ ಮನಸ್ಸಿನ ಪತ್ರಗಳು


ದುಃಖಿ ಮನಸ್ಸಿನ ಪತ್ರಗಳು 
ಮೂಲ ಹಿಂದಿ ಕವಿತೆ: ಕುಂವರ್ ಬೇಚೈನ್ 
ಕನ್ನಡಕ್ಕೆ: ಸಿ.ಪಿ. ರವಿಕುಮಾರ್ 

ಪಾತ್ರೆಗಳನ್ನು ಹೀಗೆ ಕುಕ್ಕುವುದು 
ಮಾತುಮಾತಿಗೂ ಸಿಡುಕುವುದು 
ಇವು ಯಾವುದೋ ದುಃಖಿ ಮನಸ್ಸಿನ ಪತ್ರಗಳು 

ಸುಸ್ತು ದೇಹದ ಮೇಲೆ ಕಾರ್ಯಭಾರ ಹೊತ್ತು 
ಒಬ್ಬರಿಗೆ ಕೆಮ್ಮು ಇನ್ನೊಬ್ಬರಿಗೆ ಜಡ್ಡು 
ಎಷ್ಟು ಪಗಾರವೋ ಸಾಲವೂ ಅಷ್ಟು 
ಪ್ರತಿಸಲವೂ ಮಕ್ಕಳ ಮೇಲೆ ತೆಗೆದು ಸಿಟ್ಟು 
ಕೈ ಎತ್ತಿ ಅನಂತರ ಪರಿತಪಿಸುವುದು ಅತ್ತು 
ಯಾವುದೋ ದುಃಖಿ ಮನಸ್ಸಿನ ಪತ್ರಗಳು


ಎಷ್ಟೊಂದು ಬಗೆಯ ವ್ಯಾಪಾರ 
ವಿವಶವಾಗಿ ಮಾಡುತ್ತಿದೆ ದುರ್ಬಲ ಶರೀರ 
ತಾನೇ ಸಮಸ್ಯೆ ತಾನೇ ಪರಿಹಾರ 
ಇಷ್ಟರಲ್ಲೇ ಬಂದ ಅತಿಥಿಗಳ ಸತ್ಕಾರ 
ಹೇಗೋ ಬರಿಸಿಕೊಂಡು ನಗುವ ಚಮತ್ಕಾರ 
ಯಾವುದೋ ದುಃಖಿ ಮನಸ್ಸಿನ ಪತ್ರಗಳು



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)