ಒಂದು ದುಃಖ ದಂತ(ಹ)ಕಥೆ
ಒಂದು ದುಃಖ ದಂತ(ಹ)ಕಥೆ
ಮೂಲ (ಇಂಗ್ಲಿಷ್) ಕವಿತೆ - ಡೊರೊತಿ ಪಾರ್ಕರ್
ಕನ್ನಡ ಅನುವಾದ - ಸಿ. ಪಿ. ರವಿಕುಮಾರ್
ನನಗೇ ಗೊತ್ತಾಗಿಲ್ಲ ಇನ್ನೂ, ಗೊತ್ತಾಗಲಾರದು ಮುಂದೆಯೂ
ನಾನೇಕೆ ಹೀಗೆ, ಹೀಗೇಕೆ ನಾನೆಂದು.
ನೋಡುತ್ತೇನೆ ನನ್ನ ಮುಂದೆಯೇ ಬೇರೆ ಹುಡುಗಿಯರು
ಗಂಡುಗಳಲ್ಲಿ ತುಂಬುವುದು ತೀವ್ರತೆಯನ್ನು, ಜ್ವಾಲೆಯ ಭುಗಿಲು
ಪಡೆದುಕೊಂಡು ಗಾಜಿನ ಮನೋಹರ ಪಾರದರ್ಶಕ ಸತ್ತ್ವ,
ಅನಂತರ ಏಪ್ರಿಲ್ ಮಾಸದ ಹುಲ್ಲಿನ ಮಕಮಲ್ ಮೃದುತ್ವ,
ಕೊನೆಗೆ ಬಂಡೆಯಂಥ ಬಾಳಿಕೆ;
ನನಗೋ ಇದೆಲ್ಲ ಮರೀಚಿಕೆ.
ನನ್ನ ಜೊತೆ ಮನ್ಮಥನ ಹೂಬಾಣಕ್ಕೆ ಸಿಕ್ಕ ಹುಡುಗರು
ಏನು ಹೇಳಲಿ, ಮದುವೆಯ ಹೊರಗೆ ಹುಟ್ಟಿದವರು,
ನನ್ನ ಹೃದಯ ಮುರಿದು, ನಿಶ್ಶಬ್ದಗೊಳಿಸಿ ನನ್ನ ಹಾಡು
ಇನ್ನು ತಡವಾಯ್ತು ಎಂದು ಹೊರಟು ನಿಂತವರು
ನನ್ನ ಕಣ್ಣೀರನ್ನು ನೋಡಿ ಅವರು ಕೊಟ್ಟ ಸಮಜಾಯಿಷಿ
ಅವರ ತಾಯ್ತಂದೆ ಮುಖ್ಯ, ಮೊದಲವರ ವೃತ್ತಿ.
ಇಷ್ಟಾದರೂ ಅನುಭವವು ಕಲಿಸಿತೇ ನನಗೆ
ಒಂದಿಷ್ಟು ಜಾಣ್ಮೆ, ಶಾಂತವಾಗಿರುವ ಕಲೆ, ತಿಳುವಳಿಕೆ?
ಇಪ್ಪತ್ತೊಂದನೇ ಸಲವಾದರೂ ಹಿಡಿಯಬಹುದೆಂದು
ಹೊರಡುವುದಿದೆಯಲ್ಲ ಪರಮಸುಖವನ್ನು
ಅದು ಮೂರ್ಖತನವೆಂದು ಗೊತ್ತಿದ್ದರೂ ನನಗೆ
ಹೊರಟು ನಿಲ್ಲುವೆ ಮತ್ತೆ, ಶಾಪವಾಗಿದೆ ಭರವಸೆ.
ಹಳೆಯದಾಯಿತು ಹೃದಯ ಇಬ್ಭಾಗವಾಗಿರುವ ಚಿತ್ರ
ನನ್ನದೋ ಮೊಸಾಯಿಕ್ ನಂತೆ ವಿಚ್ಛಿದ್ರ -
ಈನಡುವೆ ಇದು ಹಾಸ್ಯಾಸ್ಪದವಾಗುತ್ತಿದೆ!
ನಾನೇಕೆ ಈ ರೀತಿ? ನಾನೇಕೆ ಹೀಗೆ?
Kannada Translation of a poem ("A Fairly Sad Tale") by Dorothy Parker
Translated by C.P. Ravikumar
(c) 2014, C.P. Ravikumar

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ