ಕೃಷ್ಣನ ಕೊಳಲಿನ ಕರೆ

ಸಿ. ಪಿ. ರವಿಕುಮಾರ್




ಟಿ.ವಿ.ಯಲ್ಲಿ ನೋಡಿ ಕಲಿತ ಉಸಿರಾಡುವ ವಿಶ್ವಾಸ
ಅನುಲೋಮ್  ವಿಲೋಮ್ ಶ್ವಾಸ ನಿಃಶ್ವಾಸ
ನಂತರ ಬಂದದ್ದು ಕಾರ್ಟೂನ್ ಇಲಿ ಬೆಕ್ಕು
ಮಮ್ಮಿ ಡ್ಯಾಡಿಯ ಮುದ್ದಿನ ಸೊಕ್ಕು


ಜೋಗುಳ ಹಾಡಿದಳೇನೋ ತಾಯಿ
ಕೇಳಿಸಿಕೊಳ್ಳಲಿಲ್ಲ ಇವನ ಕಿವಿ
ಎಫ್ ಎಮ್ ರೇಡಿಯೋ ಬೀಟ್ಸ್ ಲಯದಲ್ಲಿ
ಪೆಚ್ಚಾಗಿ ಸುಮ್ಮನಾದ ಜೋ ಜೋ ಕವಿ

ಪ್ಯಾಕೆಟ್ ದಯಪಾಲಿಸುವುದು ಪ್ರತಿನಿತ್ಯ ಹಾಲು
ಊದದಿದ್ದರೂ ಉಸಿರು ಹಿಡಿದು ಕೊಳಲು
ಇವನು ಬೆಣ್ಣೆ ಕದಿಯಲಿಲ್ಲ; ಫ್ರಿಜ್ ನಲ್ಲಿದೆ ಅದರ ಪಾಡಿಗೆ
ಬರ್ಗರ್ ಪೀಟ್ಜಾ  ಕೋಲಾ  ಇವುಗಳದೆ ನಡಿಗೆ

ಕೊಳ್ಳುವ ಮುನ್ನವೇ ಇವನಿಗೆ ಚಡ್ಡಿ
ಮನೆಗೆ ಬಂದಿತು ಮುದ್ದು ಟೆಡ್ಡಿ
ಬರ್ತ್ ಡೇ ಸಂಭ್ರಮಕ್ಕೆ ಕೇಕ್ ಕತ್ತರಿಸಿ
ಉಡುಗೊರೆಗೆ ಪ್ರತಿ ಉಡುಗೊರೆಯ ಬಿತ್ತರಿಸಿ

ನೀಲ ಮೇಘ ಶ್ಯಾಮ ಇತ್ಯಾದಿ  ರೂಪಕ
ಇವನಿಗಿಂತ ಇವನ ನೀಲಿ ಜೀನ್ಸ್ ಗೆ ವ್ಯಾಪಕ
ಎಷ್ಟು ನೀಲಮಯವಾಗಿದೆ ಇವನ ಜೀನ್ಸ್ ಆಹಾ!
ಕಾಶಿ ಪೀತಾಂಬರ ಶ್ರೀಗಂಧ ಸ್ವಾಹಾ ಸ್ವಾಹಾ


(c) 2014 C.P. Ravikumar
The call of Krishna's flute

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)