ಅನೇಕ ಕಾಂಪ್ಲೆಕ್ಸ್ ಗಳ ಬುದ್ಧಿಜೀವಿಗಳು
ಮೂಲ - ಕಾನ್ರಾಡ್ ಎಲ್ಸ್ಟ್ ಕನ್ನಡಕ್ಕೆ - ಸಿ ಪಿ ರವಿಕುಮಾರ್ ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ| ಕಪಿಲ್ ಕಪೂರ್ ಅವರು ಇಂದೋರ್ ನಲ್ಲಿ ಸಮಾವೇಶಗೊಂಡ ಇಂಡಿಯಾ ಇನ್ಸ್-ಪೈರ್ಸ್ ಸಂಸ್ಥಾನದ ಸಭೆಯಲ್ಲಿ ಮಾಡಿದ ಭಾಷಣದಿಂದ ಕೆಲವು ಭಾಗಗಳನ್ನು ಇಲ್ಲಿ ಕೊಡುತ್ತಿದ್ದೇನೆ. ಅದರಲ್ಲೂ ನಮ್ಮ ಭಾರತೀಯ ಬುದ್ಧಿಜೀವಿಗಳನ್ನು ಕುರಿತು ಅವರ ಅನ್ನಿಸಿಕೆಗಳನ್ನು ಇಲ್ಲಿ ದಾಖಲಿಸಿದ್ದೇನೆ. ಗ್ರಹಣದಲ್ಲಿ ದೋಷಗಳಿದ್ದರೆ ಅವು ನನ್ನವು ಎಂದು ಮೊದಲೇ ಹೇಳಿಬಿಡುತ್ತೇನೆ. ನಮ್ಮ ಭಾರತೀಯ ಬುದ್ಧಿಜೀವಿಗಳಿಗೂ ಹಿಂದೂ ಪರಂಪರೆಯ ಜ್ಞಾನವಂತ ಋಷಿಗಳಿಗೂ ವ್ಯತ್ಯಾಸವಿದೆ. ಋಷಿಗಳು ತಮ್ಮ ಜೀವನವನ್ನು ಸಮಾಜದ ಒಳಿತಿಗಾಗಿ ಮುಡಿಪಿಟ್ಟವರು. ಜವಾಬ್ದಾರಿಯುತ ವರ್ತನೆ, ಸ್ವಾವಲಂಬನೆ ಮತ್ತು ಮಾನಸಿಕವಾಗಿ ಗೆಲುವಾಗಿರುವುದರ ಮೇಲೆ ಅವರು ಒಟ್ಟು ಕೊಟ್ಟವರು. ನಮ್ಮ ಇಂದಿನ ಬುದ್ಧಿಜೀವಿಗಳೋ ತಮ್ಮ ಬುದ್ಧಿಯ ಬಲದಿಂದ ಜೀವನೋಪಾಯ ಹುಡುಕಿಕೊಳ್ಳುತ್ತಿರುವವರು. ಅವರ ವ್ಯಕ್ತಿತ್ವಕ್ಕೆ ಕೆಲವು ಮಗ್ಗಲುಗಳಿವೆ.. ಅವರು ನಿತ್ಯದುಃಖಿಗಳು - ಅವರ ಮುಖದ ಮೇಲೆ ಸದಾ ಚಿಂತೆಯ ಕಳೆ. ಬಹಳ ಜತನದಿಂದ ಅವರು ತಮ್ಮ ಮುಖದ ಮೇಲೆ ಉಪೇಕ್ಷೆಯ ಭಾವನೆಯನ್ನು ತಂದುಕೊಂಡರೂ ಕೂಡಾ ಅವರು ಚಿಂತಿತರೆಂದು ಗೊತ್ತಾಗುತ್ತದೆ. ಎಲ್ಲವೂ ಕೆಟ್ಟದ್ದೇ ಎಂಬುದು ಅವರ ನಂಬಿಕೆ. ಅದರಲ್ಲೂ ಹಿಂದೂ ಧರ್ಮದಿಂದ ಹುಟ್ಟಿದ ಎಲ್ಲವೂ ಕೆಟ್ಟ...