ಪೋಸ್ಟ್‌ಗಳು

ನವೆಂಬರ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಚೌಚೌಪದಿ - 4

ಇಮೇಜ್

ತಿಪ್ಪೆಸಾಂಗ್

ಇಮೇಜ್
ಸಿ ಪಿ ರವಿಕುಮಾರ್              ಭಾಳ trashಆ ಆಗಲಿಕ್ಕೆ ಹತ್ತಿದೆರೀ ಬೆಂಗಳೂರದಾಗs ನಡುವs ನಡಕೋತ ಹೊಂಟೆs ಹಾಕುತ ತಿಪ್ಪರ್ ಲಾಗs ದೀರ್ಘ ಶ್ವಾಸs ಎಳಕೋಬೇಕಂತs ಬಾಬಾ ಪ್ರಾಣಾಯಾಮಾs ತಿಪ್ಪೆ ಗುಂಡಿ ಹತ್ರs ಎಂಥದ್ದೂರೀ ಅಯ್ಯೋ ರಾಮಾs ತಿಪ್ಪೆ, ತಿಪ್ಪೆ, ಎಲ್ಲಾ ಕಡೆಗೂ, ತಿಪ್ಪೆ ತಿಪ್ಪೆ ತಿಪ್ಪೆ! ಬ್ಯಾರೆ ಚಾನಲ್ ಹಾಕಿದರೂನೂ ಅಷ್ಟೇ ತಕ್ಕಡಿ ಬೆಪ್ಪೇ ಓದಲು ಕೂತರs ವಾರ್ತಾ ಪತ್ರಿಕೆ ಟೀವೀ ಬಂದು ಮಾಡಿs ಕೈಯಲ್ಲಿರುವುದು ಪತ್ರಿಕೆಯೋ ಅಥವಾ ಅದು ತಿಪ್ಪೇಗಾಡಿ? ಕನ್ನಡ ಪತ್ರಿಕೆ ಪುಟಪುಟದಲ್ಲೂ ಇಂಗ್ಲಿಷ್ ಜಾಹೀರಾತs ಪುರುಸೊತ್ ಸಿಕ್ರs ಕರೇಂಗೆ ಮಿಲ್ಕೇ ಹಿಂದೀಮೇ ಹಂ ಬಾತs ವಾರ್ತಾ ಪತ್ರಿಕೆ ಅಂತಾರs ತುಂಬಿದೆ ಬರಿಯ ವರಾತs ಯಾವುದು ಇಲ್ಲಿ ವಾರ್ತಾ ತಮ್ಮಾ ಯಾವುದು ಜಾಹೀರಾತs? ನಮ್ ತಿಪ್ಪಾರಳ್ಳಿ ದೂರ ಅಂದ್ರು ಸುಮ್ನೇ ಕೈಲಾಸಮ್ಮೂ ಹತ್ರs ತಂತು ತಿಪ್ಪಾರಳ್ಳಿ ಲೊಟ್ಟೆ-ಲೊಸಕು ಇಸಮ್ಮು

"ಇಲ್ಲದಿದ್ದರೆ ನಾನು ಬರುವುದಿಲ್ಲ" ಅಥವಾ ಸಾಹಿತಿಯ ಕರಾರು

ಇಮೇಜ್
ಸಿ ಪಿ ರವಿಕುಮಾರ್ ಒಪ್ಪದಿದ್ದರೆ ನೀನು ನನ್ನೈಡಿಯಾಲಜಿಯ ನಿಮ್ಮ ಸಮ್ಮೇಳನಕ್ಕೆ ಬರುವುದಿಲ್ಲ ಇರುವುದೆಲ್ಲೆಡೆ ಎಂದು ಆಕ್ಸಿಜನ್ ಜೊತೆಜೊತೆಗೆ ಅಸಹನೆ ಎಂಬೊಂದು ಹೊಸ ಅನಿಲವೆಂದು ನಾನು ಹೇಳುವ ಮಾತು ಒಪ್ಪದಿದ್ದರೆ ನೀನು ಟೂ! ನಿನ್ನ ಜೊತೆ ಆಟಕ್ಕೆ ಬರುವುದಿಲ್ಲ ಕಪ್ಪು ತೋರಣ ಕಟ್ಟಿ, ಕಪ್ಪು ಕಾಫಿಯ ಕೊಟ್ಟು ಕಪ್ಪು ಪೇಪರ್ ಮೇಲೆ ಮಾತ್ರ ಕರೆಯೋಲೆ, ಎಲ್ಲರೂ ಹೊದ್ದು ಬರಬೇಕು ಕರಿಶಾಲು, ಇಲ್ಲದಿದ್ದರೆ ನಾನು ಬರುವುದಿಲ್ಲ ಬಂದವರ ಮುಖವೆಲ್ಲ ಊದಿಕೊಂಡಿರಬೇಕು ನಗೆ ಯಾಕೆ ಮಂದಸ್ಮಿತವೂ ಇರಕೂಡದು ಮರಳಿಸಬೇಕು ಒಬ್ಬರಾದರೂ ಪದ್ಮಪ್ರಶಸ್ತಿ, ಇಲ್ಲದಿದ್ದರೆ ನಾನು ಬರುವುದಿಲ್ಲ ಕಾರ್ಯಕ್ರಮದ ಮುಂಚೆ ದೀಪ ಆರಿಸಬೇಕು, ಎಲ್ಲರೂ ಮೌನ ಆಚರಿಸಬೇಕು, ಮಲ್ಲಿಗೆಯ ಬದಲು ರಕ್ತ ಕಣಿಗಲೆಯೇ ಇರಬೇಕು, ಇಲ್ಲದಿದ್ದರೆ ನಾನು ಬರುವುದಿಲ್ಲ ಮುಖ್ಯಭಾಷಣದಲ್ಲಿ ಆಸ್ಫೋಟವಿರಬೇಕು, ಚಾರಿತ್ರ್ಯವಧೆಯಾಗಬೇಕು ರಾಮನಿಗೆ, ಗೋಮಾಂಸ ಇರಲೇ ಬೇಕು ಭೋಜನದಲ್ಲಿ ಇಲ್ಲದಿದ್ದರೆ ನಾನು ಬರುವುದಿಲ್ಲ ಮೂಢನಂಬಿಕೆ ವಿರುದ್ಧ ಗಾಢನಂಬಿಕೆಯುಳ್ಳ ಜನರನ್ನೇ ಪ್ಯಾನೆಲ್ ಗೆ ಕರೆಯಬೇಕು, ಮೀಡಿಯಾದಲ್ಲಿ ಮುರಿವ ಸುದ್ದಿ ಬರಲೇಬೇಕು ಇಲ್ಲದಿದ್ದರೆ ನಾನು ಬರುವುದಿಲ್ಲ

ಸಯೀದ್ ಜಾಫ್ರಿ - ಚದುರಂಗದ ಆಟಗಾರ

ಇಮೇಜ್
ಸಿ ಪಿ ರವಿಕುಮಾರ್ ಚಿತ್ರನಟ ಸಯೀದ್ ಜಾಫ್ರಿ ಅವರು ನಿಧನರಾದ ಸುದ್ದಿ ಬಂದಿದೆ.   ಸಯೀದ್ ಜಾಫ್ರಿ ಎಂದಾಗ ನೆನಪಾಗುವುದು ಅವರ ವಿಶಿಷ್ಟವಾದ ಧ್ವನಿ ಮತ್ತು ಮಧುರ ಲಖನವಿ ಸಂಭಾಷಣಾ ಶೈಲಿ.  ನಾನು ನೋಡಿದ ಅವರ ಮೊದಲ ಚಿತ್ರ "ಶತರಂಜ್ ಕೇ ಖಿಲಾಡಿ."  ಅವಧ್ ಪ್ರಾಂತದಲ್ಲಿ ನವಾಬನಾದ ವಾಜಿದ್ ಅಲಿ ಶಾಹ್ ಒಬ್ಬ ವಿಲಾಸಿ ರಾಜ. ಅವನಿಗೆ ಮೂರು ಹೊತ್ತೂ ಶಾಯರಿ-ನೃತ್ಯ-ಗೀತೆಗಳಲ್ಲೇ ಮೋಹ. ಸ್ವಂತ ಕವಿ ಕೂಡ! ಯಥಾ ರಾಜಾ ತಥಾ ಪ್ರಜಾ! ಜನರಿಗೂ ಇಂಥದ್ದೇ ಶೋಕಿಗಳು. ಈ ಚಿತ್ರದಲ್ಲಿ ಸಜ್ಜದ್ ಅಲಿ ಮತ್ತು ರೋಷನ್ ಅಲಿ ಎಂಬ ಇಬ್ಬರು ಶ್ರೀಮಂತರ ಪಾತ್ರಗಳು ಬರುತ್ತವೆ. ಸಯೀದ್ ಜಾಫ್ರಿ ಮತ್ತು ಸಂಜೀವ್ ಕುಮಾರ್ ಈ ಪಾತ್ರಗಳಲ್ಲಿ ನಟಿಸಿದ್ದಾರೆ.  ಈ ಇಬ್ಬರೂ ಶ್ರೀಮಂತರಿಗೆ ಶತರಂಜ್ ಆಡುವ ಶೋಕಿ. ಅದರಲ್ಲೇ ಮೂರು ಹೊತ್ತೂ ಮಗ್ನರಾಗಿರುವ ಇವರಿಗೆ ಸುತ್ತಮುತ್ತ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಗಮನವೇ ಇರುವುದಿಲ್ಲ. ಒಬ್ಬ ಶ್ರೀಮಂತನ ಹೆಂಡತಿ ವಿರಹದಲ್ಲಿ ಬೇಯುತ್ತಾ ಹುಚ್ಚಿಯಂತಾಗಿದ್ದಾಳೆ.  ಇನ್ನೊಬ್ಬನ ಹೆಂಡತಿ ಬೇರೊಬ್ಬನ ಜೊತೆ ಸಂಬಂಧ ಇಟ್ಟುಕೊಂಡಿದ್ದಾಳೆ! ಇತ್ತ ಈಸ್ಟ್ ಇಂಡಿಯಾ ಕಂಪನಿ ಅವಧ್ ಮೇಲೆ ಕಣ್ಣಿಟ್ಟಿದೆ.  ಶತ್ರುಗಳು ಬಂದಾಗ ವಾಜಿದ್ ಅಲಿ ಶಾಹ್ ಯಾವುದೇ ಹೋರಾಟವಿಲ್ಲದೆ ತನ್ನ ತಲೆಯ ಮೇಲಿನ ಮುಕುಟವನ್ನು ಎತ್ತಿ ಕೆಳಕ್ಕಿಟ್ಟುಬಿಡುತ್ತಾನೆ. ಯುದ್ಧಕ್ಕೆ ಹೆದರಿದ ಶ್ರೀಮಂತರು ಓಡಿ ಒಂದು ಸ್ಮಶಾನದಲ್ಲಿ ಬಚ್ಚಿಟ್ಟುಕೊಳ್ಳುತ್ತಾರೆ. ಅಲ್ಲ

ನಾವು ಆಡುತ್ತೇವೆ ಅಸಹನೆಯ ಮಾತು

ಇಮೇಜ್
ಸಿ ಪಿ ರವಿಕುಮಾರ್  ಮಳೆ ಬಂದು ಟ್ರಾಫಿಕ್ ಜಾಮಾದರೆ ನಾನು ಸಿಟ್ಟಾಗುತ್ತೇನೆ - ಹೊಳೆಯೇ ಹರಿದು ಬರುತ್ತಿದೆ ಚೆನ್ನೈ ನಗರದಲ್ಲಿ.  ಅಸಾಧ್ಯ ನೋವೆಂದು ಮುಖ ಕಿವಿಚುತ್ತೇನೆ    ಚರ್ಮ ಕಿತ್ತರೆ ಬೆರಳಿನ ಉಗುರಿನಲ್ಲಿ. ಬಾಂಬ್ ದಾಳಿಯಲ್ಲಿ ಇವನ ಕೈ ಕತ್ತರಿಸಿಹೋಗಿದೆ,    ಕಂಡಕಂಡವರನ್ನು ಸುಡುತ್ತಿದ್ದಾರೆ ಉಗ್ರರಲ್ಲಿ.  ಮನೆಗೆ ಬರುವುದು ತಡವಾದರೆ ಸಿಟ್ಟಾಗುತ್ತೇನೆ    ತಡೆಯದೆ ಹಸಿವು-ಬಾಯಾರಿಕೆ. ಅದೆಷ್ಟು ಜನರಿಗೆ ಇದು ನಿತ್ಯದ ಚಡಪಡಿಕೆ.  ಆಫ್ರಿಕಾದಲ್ಲಿ, ಇರಾಕಿನಲ್ಲಿ, ಆಫ್ಘಾನಿಸ್ತಾನದಲ್ಲಿ, ಸಿರಿಯಾದಲ್ಲಿ ಜಗತ್ತಿನ ಪ್ರತಿಯೊಂದು ಮೂಲೆಯಲ್ಲಿ  ನಿರಂತರವಾಗಿ ಸಾಗಿದೆ ಮಾನವನಿಂದ ಮಾನವನ ಬೇಟೆ. ಜನ ಕಂಗಾಲಾಗಿದ್ದಾರೆ,  ಹಸಿದಿದ್ದಾರೆ, ನೊಂದಿದ್ದಾರೆ, ಉಟ್ಟಬಟ್ಟೆಯಲ್ಲೇ ಓಡಿ ಬಂದಿದ್ದಾರೆ, ಮನೆ-ಮಾರು ಕಳೆದುಕೊಂಡಿದ್ದಾರೆ.  ಹಸಿವೆಯಿಂದ ಅಳುವ ಮಕ್ಕಳು   ಕಡಲಿನ ಪಾಲಾಗಿವೆ.  ಸಾಗರವೂ ತನಗೆ ಬೇಡವೆಂದು  ದಡಕ್ಕೆ ತಂದು ಹಾಕಿದೆ.  ಹೋದೆಡೆಗೆ ಇವರನ್ನು ಹಿಂಬಾಲಿಸುತ್ತದೆ ಸಂಶಯದ ದೃಷ್ಟಿ.  ಹೋದೆಡೆಗೆ ಇವರ ಮೇಲೆ ಸುರಿಯುತ್ತದೆ ಬೈಗುಳದ ವೃಷ್ಟಿ.  ಉಗ್ರರಿಂದ ಓಡಿ ಬಂದವರಿಗೇ  ಉಗ್ರರೆಂಬ ಹಣೆಪಟ್ಟಿ. ಎದೆಯನ್ನು ಬಗೆದು ತೋರಿಸುವಂತಿದ್ದರೆ ಮನುಷ್ಯ! ಕಾಣಿಸುವಂತಿದ್ದರೆ ಮಸ್ತಿಷ್ಕದ ಒಳಗಿನ ದೃಶ್ಯ! ಇದೆಯೇ ಯಾವುದಾದರೂ ಅಗ್ನಿಪರೀಕ್ಷೆ, ಕರಗಿಸಿ ಮತ್ತೊಮ್ಮೆ ಎರಕ ಹೊಯ್ಯುವ ಹಾಗೆ? ಇಷ್ಟೆಲ್ಲಾ ನಡೆಯು

ನೆನಪುಗಳ ಹಕ್ಕುಸ್ವಾಮ್ಯ

ಇಮೇಜ್
- ಸಿ ಪಿ ರವಿಕುಮಾರ್  ಈಚೆಗೆ ಒಂದು ಕನ್ನಡ ಲೇಖನವನ್ನು ಯಾರೋ ಓದಲು ಕಳಿಸಿದರು. ಅದನ್ನು ಬರೆದ ಲೇಖಕರ ಬಗ್ಗೆ ನನಗೆ ಗೌರವವಿದೆ. ಅವರನ್ನು X ಎಂದು ಕರೆಯೋಣ. ಲೇಖನ ಓದುವಾಗ ಒಂದು ವಿಷಯ ನೆನಪಿಗೆ ಬಂತು. ಗೋಪಾಲಕೃಷ್ಣ ಅಡಿಗರ ಜನ್ಮದಿವಸದ ಸಂದರ್ಭದಲ್ಲಿ ಈ ಲೇಖಕರು ಒಂದು ಲೇಖನ ಬರೆದರು.  ಇದರಲ್ಲಿ ಅವರು ಅಡಿಗರು ಕನ್ನಡದ ಇನ್ನೊಬ್ಬ ಹೆಸರಾಂತ ಕವಿಗಳಾದ ನರಸಿಂಹಸ್ವಾಮಿ ಅವರ ಬಗ್ಗೆ ತಮಗೆ ಸ್ವಂತವಾಗಿ ಹೇಳಿದ್ದನ್ನು ಕುರಿತಾಗಿ ಬರೆದಿದ್ದರು.  ಲೇಖಕ X ಮಾಡಿದ್ದು ತಪ್ಪು ಎಂದೇ ನನ್ನ ಅನ್ನಿಸಿಕೆ.  ಅವರ ಲೇಖನದಲ್ಲಿರುವ ವಿಷಯ ತಿಳಿದುಕೊಂಡು ನಾವು ಯಾರೂ ಶ್ರೀಮಂತರಾಗಲಿಲ್ಲ, ತಿಳಿಯದಿದ್ದರೆ ನಾವು ಬಡವರೂ ಆಗುತ್ತಿರಲಿಲ್ಲ.  ಅಡಿಗರು ಬಹಿರಂಗವಾಗಿ ಹೇಳಬೇಕಾದ ವಿಷಯಗಳನ್ನು ಕುರಿತು ಬರೆದೇ ಇದ್ದಾರೆ. ಅವರ "ಪುಷ್ಪಕವಿಯ ಪರಾಕು" ಕವನವೇ ಇದೆ.  ಒಬ್ಬ ಕವಿಯ ಮನಸ್ಸಿನಲ್ಲಿ ನೂರಾರು ಭಾವನೆಗಳು ಏಳಬಹುದು. ಅವನ್ನೆಲ್ಲಾ ಅವನು ಬರೆದಿಡುವುದಿಲ್ಲ. ಹಾಗೆ ಅನಿಸಿದ್ದನ್ನೆಲ್ಲಾ ಬರೆದರೆ ಅವನು ಲೇಖಕನಾಗುವುದೂ ಇಲ್ಲ.  ಅವನ ಮನಸ್ಸಿನಲ್ಲಿದ್ದ ಒಂದು ಅಪಕ್ವ ಭಾವನೆ ಸಂಭಾಷಣೆಯಲ್ಲಿ  ತುಳುಕಿದರೆ ಅದನ್ನು ನೆನಪಿಟ್ಟುಕೊಂಡು ಜಗತ್ತಿಗೆ ಜಾಹೀರು ಮಾಡುವುದು ಕೂಡಾ ಸರಿಯಲ್ಲ.  ಲೇಖಕ X ಬೇರೆ ಯಾರಲ್ಲೂ ತಮ್ಮ ಮಾತನ್ನು ಪುನರಾವರ್ತಿಸುವುದಿಲ್ಲ ಎಂಬ ನಂಬಿಕೆ ಅಡಿಗರಿಗೆ ಇದ್ದರೆ ಅದು ಸುಳ್ಳಾಯಿತು. ತಮ್ಮ ನಿಲುಮೆಯನ್ನು ಸಮರ್ಥಿಸಿಕೊಳ್ಳಲು ಅಡಿಗರು ಬ

ಇತಿಹಾಸಕ್ಕೆ ವಿದಾಯ

ಇಮೇಜ್
ಸಿ ಪಿ ರವಿಕುಮಾರ್  ಯಾರಾದರೂ ನನ್ನನ್ನು ಮಾಡಿದರೆ ಶಿಕ್ಷಣ ಸಚಿವ ತಕ್ಷಣ ಮಾಡುವೆನು ಒಂದು ಅತಿಮುಖ್ಯ ಕೆಲಸ! ಸಿಲಬಸ್ ಪುಸ್ತಕದಿಂದ ಹೊಡೆಸಿಹಾಕಿಬಿಡುವೆ ಹಿಸ್ಟರಿ, ಚರಿತ್ರೆ, ಇತಿಹಾಸ. ಆಗುವುದೇ ಇಲ್ಲ ಆಗ ಇತಿಹಾಸದ ಪುನರಾವರ್ತನೆ ಮಾಯವೇ ಆಗಿಬಿಡುವುದು ದ್ವೇಷ.  ಮಾಗದಂತೆ ಎಂದೂ ನೂರಾರು ವರ್ಷದ ಗಾಯ ಕಿತ್ತುತ್ತಲೇ ಇರುವ ಇತಿಹಾಸದ ಪಾಠಗಳು! ಎಂದೋ ಉರಿದ ಅಗ್ನಿಗೆ ಇನ್ನಷ್ಟು ಉರುವಲನ್ನಿಟ್ಟು ಕೆದಕುವ ಈ ಆಟಗಳು! ಹಳೆಯ ತಪ್ಪುಗಳನ್ನು ಮತ್ತೆ ಮಾಡದೇ ಇರುವುದು ಇತಿಹಾಸದಿಂದ ಕಲಿಯಬೇಕಾದ ಪಾಠ. ನಮಗಿಲ್ಲ ಅದಕ್ಕೆ ಬೇಕಾದ ತಾಳ್ಮೆ ಮತ್ತು ತಯಾರಿ ಆದ್ದರಿಂದ ಹೇಳೋಣ ಇತಿಹಾಸಕ್ಕೆ ಟಾಟಾ. -- ಸಿ ಪಿ ರವಿಕುಮಾರ್

ಇತಿಹಾಸ

ಇಮೇಜ್
ಸಿ ಪಿ ರವಿಕುಮಾರ್  ನಾಣ್ಯದ ಒಂದು ಮುಖ ಸಾಚಾ, ಇನ್ನೊಂದು ಮುಖ ಖೋಟಾ. ಅವನು ಸಾಚಾ ಮುಖ ಮೇಲಿಟ್ಟು ಕೊಡುತ್ತಾನೆ, ಹೇಗೋ ನಡೆಯಬಹುದು ಆಟ. ನಾಣ್ಯಕ್ಕೆ ಬದಲಾಗಿ ಅವನಿಗೆ ಸಿಕ್ಕಿದ್ದು - ಖೋಟಾ ಮಾಲು + ಸವಕಲು ನಾಣ್ಯ ಚಿಲ್ಲರೆ. ನಿನ್ನದು ಖೋಟಾ ಎಂದು ಜಗಳವಾಡುತ್ತಾರೆ, ಉರಿದುಬೀಳುತ್ತಾರೆ ಮಾತೆತ್ತಿದರೆ. ಯೋಚಿಸಿದರೆ ತೋರುವುದು ನಿಮಗೆ, ಸ್ವಲ್ಪ ಹೀಗೇ ಅಲ್ಲವೇ ನಮ್ಮ ಇತಿಹಾಸ? ಸಾಚಾ ಮುಖ ಕಾಣಿಸಿತೆ ನಿನಗೆ, ಅವನಿಗೆ ಖೋಟಾಮುಖವಾಗುತ್ತಿದೆ ಭಾಸ. ಹಳೆಯದನ್ನೆಲ್ಲಾ ತೆಗೆದು ಪ್ರತಿನಿತ್ಯವೂ ಜಗಳ, ಗೊತ್ತಾಗುತ್ತಿಲ್ಲ ನಾನು ಅಳಲಾ ಅಥವಾ ನಗಲಾ? ಸಿ ಪಿ ರವಿಕುಮಾರ್

ಅಪರಿಚಿತನ ಮನೆಯಲ್ಲಿ ಕಳೆದುಹೋಯಿತು ಜೀವನ

ಇಮೇಜ್
ಮೂಲ ಹಿಂದಿ ಗಜಲ್ - ಗೋಪಾಲ್ ದಾಸ್ "ನೀರಜ್" ಕನ್ನಡಕ್ಕೆ - ಸಿ ಪಿ ರವಿಕುಮಾರ್   ಅಪರಿಚಿತನ ಮನೆಯಲ್ಲಿ ಕಳೆದುಹೋಯಿತು ಜೀವನ ಯಾತ್ರೆಯಲ್ಲದ ಯಾತ್ರೆಯಲ್ಲಿ ಸವೆದು ವಿನಾ ಕಾರಣ ಅತ್ತಿಂದ ಇತ್ತ ಓಡಾಡುತ್ತಿತ್ತಲ್ಲ ಅದು ದೇಹ ಮಾತ್ರ ಹೃದಯ ಮಲಗಿತ್ತು ನಿನ್ನ ಓಣಿಯಲ್ಲಿ ದಾರಿ ನೋಡುತ್ತಾ ವ್ರಜದ ಗೋಕುಲದಲ್ಲಿ ಹುಡುಕುತ್ತಿದ್ದೆಯಲ್ಲ ನೀನು ಶ್ಯಾಮನನ್ನು ಯಾವುದೋ ಮೀರಾಳ ಕಣ್ನೋಟದಲ್ಲಿ ಸಿಕ್ಕಿಕೊಂಡಿದ್ದ ಅವನು ತಾರೆಗಳ ಕನಸು ಕಂಡವರು ಯಾರೋ ಬೇರೆಯವರು ನನ್ನ ದೇಶದಲ್ಲಿ ಎಲ್ಲರಿಗೆ ನಾಳೆಯ ಊಟದ್ದೇ ಖಬರು ರತ್ನಮುತ್ತುಗಳಿಂದ ತುಂಬಿತ್ತು ವ್ಯಾಪಾರಿಯ ಜೋಳಿಗೆ  ಏನೂ ಗಿಟ್ಟಲಿಲ್ಲ  ಆದರೆ-ಹೋದರೆಗಳಲ್ಲೇ ಉಳಿದವನ ಪಾಲಿಗೆ (c) 2015  C.P. Ravikumar, Translation of a Hindi Gazal by Gopaldas Neeraj

ತಪ್ಪು ಹೆಜ್ಜೆ ಇಟ್ಟು ನಡೆದ ಬಾಲ ರಾಮಚಂದ್ರ!

ಇಮೇಜ್
ಕವಿತೆ ಓದುವ ಮುನ್ನ ... ಕನ್ನಡದಲ್ಲಿ ಪುರಂದರದಾಸರು ಹೇಗೆ ಕೃಷ್ಣನ ಬಾಲ್ಯವನ್ನು ನವಿರು ಹಾಸ್ಯದಿಂದ ಚಿತ್ರಿಸಿದ್ದಾರೋ ಅದೇ ಬಗೆಯ ನವಿರು ಹಾಸ್ಯವನ್ನು ತುಲಸೀದಾಸರ ಈ ಗೀತೆಯಲ್ಲಿ ಕಾಣಬಹುದು. ರಾಮನ ಬಾಲ್ಯವನ್ನು ಕವಿ ವರ್ಣಿಸುತ್ತಿದ್ದಾನೆ. ಕವಿಯ ಒಳಗಣ್ಣಿಗೆ ಮಗು ಶ್ರೀರಾಮನು ತಪ್ಪು ಹೆಜ್ಜೆ ಇಡುತ್ತಾ ನಡೆಯಲು ಕಲಿಯುವ ಚಿತ್ರ ಗೋಚರಿಸುತ್ತಿದೆ. ಹಾಗೆ ನಡೆಯುವಾಗ ಅವನ ಪುಟ್ಟ ಕಾಲಿಗೆ ಕಟ್ಟಿದ ಗೆಜ್ಜೆಯ ಘಲ್ ಘಲ್ ಸದ್ದು ಕವಿಯ ಕಿವಿಗೆ ಕೇಳುತ್ತಿದೆ. ನಡೆಯುವ ರಭಸದಲ್ಲಿ ರಾಮ ಧೊಪ್ಪನೆ ಬಿದ್ದಾಗ ಅವನತ್ತ ತಾಯಿ-ತಂದೆಯರು ಧಾವಿಸಿ ಬರುತ್ತಾರೆ. ರಾಮನು ಪುತ್ರಕಾಮೇಷ್ಟಿ ಯಾಗವನ್ನೇ ಮಾಡಿ ಪಡೆದ ಪುತ್ರ! ಅಯ್ಯೋ, ಮಗುವಿಗೆ ಏನಾಯಿತೋ ಎಂದು ದಶರಥ ಪರಿತಪಿಸುತ್ತಾನೆ! ತಂದೆ ತಾಯಿ ಹೀಗೆ ಕಂಗಾಲಾದಾಗ ಮಗುವೂ ಪೆಚ್ಚಾಗಿ ಅಳುತ್ತದೆ! ಕವಿಯ ಕಲ್ಪನೆಯಲ್ಲಿ ಸಾಕ್ಷಾತ್ ಶ್ರೀರಾಮಚಂದ್ರನೇ ಅಳುತ್ತಿದ್ದಾನೆ! ತಂದೆ ತನ್ನ ಉತ್ತರೀಯದ ಸೆರಗಿನಿಂದಲೇ ಧೂಳನ್ನು ಝಾಡಿಸಿ ಒರೆಸಿ ಮಗುವಿಗೆ ಪರಿಪರಿಯಾಗಿ ಸಮಾಧಾನ ಮಾಡುತ್ತಿದ್ದಾನೆ! ಗಲ್ಲ ನೇವರಿಸಿ ಕೂದಲು ಸರಿಮಾಡಿ ಅಳಬಾರದೆಂದು ಗೋಗರೆಯುತ್ತಿದ್ದಾನೆ! ಈ ಬಗೆಯ ಕಕ್ಕುಲತೆಯಿಂದ ಸಮಾಧಾನಗೊಂಡ ಮಗುವಿನ ತುಟಿಯಲ್ಲಿ ಕೊನೆಗೂ ನಗು ಅರಳುತ್ತದೆ. ಜೇನು ಸುರಿಯುವಂತೆ ತೋರುವ ಹವಳದಂಥ ತುಟಿಗಳಿಂದ ಜೇನಿನಷ್ಟೇ ಸವಿಯಾದ ತೊದಲು ಮಾತುಗಳನ್ನು ಕೇಳಿ ದಶರಥ-ಕೌಸಲ್ಯೆ ಮುಗ್ಧರಾಗಿದ್ದಾರೆ! ಕೆಳಗೆ ಬಿದ್ದು ಅತ್ತು ರಂಪ

ದೂರಗೊಳಿಸು ಜಗದ ಕತ್ತಲೆಯನ್ನು ನೀನು ದೀಪಾವಳಿಯಾಗಿ

ಇಮೇಜ್
ಮೂಲ ಹಿಂದಿ ಕವಿತೆ - ನೀರಜ್  ಕನ್ನಡ ಅನುವಾದ - ಸಿ ಪಿ ರವಿಕುಮಾರ್   ದೂರಗೊಳಿಸು ಜಗದ ಕತ್ತಲೆಯನ್ನು ನೀನು ದೀಪಾವಳಿಯಾಗಿ ದೂರಾದ ಹೃದಯಗಳ ಜೋಡಿಸುವೆ ನಾನು ಹೋಳಿಯಾಗಿ ನಿಶೆಯ ಹಣೆ ಬರಿದಾಗಿದೆ  ಇಂದು  ಚಂದ್ರಮನಿಲ್ಲದೆ ಪ್ರತಿಯೊಬ್ಬರ ಹೊಸ್ತಿಲಲ್ಲೂ ಕುಳಿತಿದೆ ಬೆಳಗು ಮುನಿದು, ಶೂನ್ಯವಾಗಿದೆ ಗಗನ, ಉದುರಿಹೋಗಿವೆ ತಾರೆ ಕತ್ತಲೆಗೆ ಬೆಳಕಿನೆದೆಯೂ ಹೋದೀತು ಒಡೆದು! ನೀನು ಮನೆಮನೆಯ ಮುಂದೆ ಮುಗುಳ್ನಗು ಹಣತೆಯಾಗಿ ನಾನು ಹಣೆಗಳಲ್ಲಿ ಮಿಂಚುವೆನು ಕುಂಕುಮದ ಘನತೆಯಾಗಿ! ದೂರಗೊಳಿಸು ಜಗದ ಕತ್ತಲೆಯನ್ನು ನೀನು ದೀಪಾವಳಿಯಾಗಿ ದೂರಾದ ಹೃದಯಗಳ ಜೋಡಿಸುವೆ ನಾನು ಹೋಳಿಯಾಗಿ ನಡೆಯುತ್ತಿದೆ ವಿಧ್ವಂಸದ ನೃತ್ಯ, ಸೋಲುತ್ತಿವೆ ಸೃಜನದ ಕೈಕಾಲು ಇತಿಯಾಗುತ್ತಿದೆ ಸಂಸ್ಕೃತಿ, ಮುನಿದಿಹನು ದೂರ್ವಾಸ, ನಡೆಯುತ್ತಿದೆ ನಡುಬೀದಿಯಲ್ಲಿ ನಗ್ನದ್ರೌಪದಿಯ ಮಾರಾಟ ಇಷ್ಟಾದರೂ ದಂತಗೋಪುರದಲ್ಲಿ ಸಾಹಿತ್ಯದ ವಾಸ, ನೀನು ಹಾಡು ದೀಪಕ ರಾಗ, ಮೇಲೆಬ್ಬಿಸು ಶವಗಳನ್ನು ಜೀವಂತರಿಗೆ ಜೀವನದ ಅರ್ಥ ತಿಳಿಸುವೆನು ನಾನು! ದೂರಗೊಳಿಸು ಜಗದ ಕತ್ತಲೆಯನ್ನು ನೀನು ದೀಪಾವಳಿಯಾಗಿ  ದೂರಾದ ಹೃದಯಗಳ ಜೋಡಿಸುವೆ ನಾನು ಹೋಳಿಯಾಗಿ  ಯಾವ ಮಟ್ಟಕ್ಕೇರಿದೆ ವಸಂತದ ವಿವಶತೆ ಹೂಗಳಿಗೆ ನಗುವುದೇ ಅಪರಾಧವಾಗಿದೆ, ಯಾವ ಮಟ್ಟಕ್ಕಿಳಿದಿದೆ ಪಶುಗಳ ಕ್ರೀಡೆ ಕಳೆದುಹೋದಂತಿದೆ ಜಗದಲ್ಲಿ ಮಾನವತೆ, ನಡೆ, ಕಳೆದುಹೋದವರಿಗೆ ದಾರಿ ತಿಳಿಸಿ ಬಾ ನೀನು ನಾನು ಇತಿಹಾಸಕ್ಕೆ ಸುಣ್ಣ-ಬಣ್

ಹಾದಿ ತಪ್ಪಿದವರು

ಸಿ ಪಿ ರವಿಕುಮಾರ್  ಸಮಾಜದ ಬಿರುಕುಗಳನ್ನು ಮುಚ್ಚಬೇಕಾದ ಸಾಹಿತಿಗಳು ಕೂಡಾ ಇಂದು ಸಮಯಸಾಧಕರಾಗಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿರುವುದು ಶೋಚನೀಯ.  ಏನಾದರೂ ಅಸಂಬದ್ಧ ಹೇಳಿಕೆ ಕೊಟ್ಟು ಪ್ರಚಾರ ಗಿಟ್ಟಿಸುವುದು ಈನಡುವೆ ನಾವು ಕಾಣುತ್ತಿರುವ ಟ್ರೆಂಡ್. ಪ್ರಸ್ತುತ ಕವಿತೆ ಇಂಥವರನ್ನು ಕುರಿತದ್ದು.  ದೀಪಾವಳಿಯ ಹಬ್ಬಕ್ಕೆ ಬೆಳಗಬೇಕಾದವರು ಜ್ಞಾನದ ಹಣತೆ ಯಾಕೆ ಅಗೆದು ತೆಗೆಯುತ್ತಿದ್ದಾರೆ ಅಂಧಕಾರ? ಯಾಕಿವರಿಗೆ ಅದಮ್ಯವಾಗಿದೆ ಬಾಂಬ್ ಸಿಡಿಸುವ ಆಸೆ? ಲೆಕ್ಕಿಸದೆ ಜನಜೀವನಕ್ಕೆ ಸಂಚಕಾರ - ಭೂತವನ್ನು ಬಡಿದೆಚ್ಚರಿಸಿ ಕೂಗುತ್ತಾರೆ ಕೈಯಲ್ಲಿ ಡಮರುಗ ಹಿಡಿದು ಬಡಿಯುತ್ತಾ ಡಮಡಮ - ಕೇಳುವವರಿದ್ದಾರೆ ಇವರ ಒಡಕುದನಿ ಹಾಡನ್ನು ಎನ್ನುವುದೇ ಇವರಿಗೆ ಸಂತೋಷ-ಚರಮ ಇಂಥವರಿಗೇ ಸಿಕ್ಕುತ್ತದೆ ಇಂದು ಮನ್ನಣೆ ಪುರಸ್ಕಾರ ದೊಡ್ಡಕ್ಷರದ ವರದಿ ಮೊದಲ ಪುಟದಲ್ಲಿ ಇವರ ಕೀರ್ತಿದಾಹಕ್ಕೆ ಎಷ್ಟೊಂದು ಬಲಿದಾನ ಇವರು ಬಾಯ್ತೆರೆಯುತ್ತಾರೆ ಕೆಟ್ಟ ಹಟದಲ್ಲಿ ಕಾರುತ್ತಾರೆ ನಂಜು ಬಿಟ್ಟಾಗಲೆಲ್ಲಾ ಬಾಯಿ ಇವರ ಲೇಖನಿಯಲ್ಲಿ ತುಂಬಿಹುದು ರಕ್ತಶಾಯಿ

ಥಟ್ ಅಂತ ಒಂದು ಕ್ವಿಜ್ ಕಾರ್ಯಕ್ರಮ!

- ಸಿ ಪಿ ರವಿಕುಮಾರ್ ಡಾ. ನಾ. ಸೋಮೇಶ್ವರ ಅವರನ್ನು ನಮ್ಮ ಕಚೇರಿಯಲ್ಲಿ ನಡೆಸಿದ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿದಾಗ ಅವರು ಯಾವ ಶರತ್ತುಗಳೂ ಇಲ್ಲದೆ ಸಂತೋಷವಾಗಿ ಒಪ್ಪಿಗೆ ಕೊಟ್ಟರು.  "ಥಟ್ ಅಂತ ಹೇಳಿ" ಕಾರ್ಯಕ್ರಮವನ್ನು 14 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಡಾ. ಸೋಮೇಶ್ವರ ಅವರು ಈಗಾಗಲೇ ಲಿಮ್ಕಾ ದಾಖಲೆಯಲ್ಲಿ ಸ್ಥಾನ ಕಂಡುಕೊಂಡಿದ್ದಾರೆ. ಇದುವರೆಗೂ "ಥಟ್ ಅಂತ ಹೇಳಿ" ಕಾರ್ಯಕ್ರಮದ 2902 ಕಂತುಗಳು ಪ್ರಸಾರವಾಗಿವೆ ಎಂದು ಅವರೇ ನಮಗೆ ತಿಳಿಸಿದರು. ವಿಕಿಪೀಡಿಯಾದಲ್ಲಿರುವ  ಮಾಹಿತಿ ಹಳತಾಗಿದೆ! ಈ ಕಾರ್ಯಕ್ರಮ 3000 ಮುಟ್ಟಿದಾಗ ಗಿನ್ನೆಸ್ ದಾಖಲೆಯನ್ನೇ ಮುರಿಯುತ್ತದೆ. ಡಾ. ಸೋಮೇಶ್ವರ ಅವರಿಂದ ನಾವು ಭಾಷಣವನ್ನು ಅಪೇಕ್ಷಿಸಿದ್ದು ತಪ್ಪು! ಅವರು ಪ್ರಶ್ನೆಗಳನ್ನು ಕೇಳಲು ಸಿದ್ಧರಾಗಿ ಬಂದಿದ್ದರು - ತಾವೇ ಸಂಪಾದಿಸಿದ ಪುಸ್ತಕಮಾಲೆಯಿಂದ ಕೆಲವು ಕನ್ನಡ ಪುಸ್ತಕಗಳನ್ನು  ಬಹುಮಾನವಾಗಿ ಕೊಡಲು ಕೈಯಲ್ಲಿ ಹಿಡಿದೇ ಬಂದರು. ನಮ್ಮ ಕಚೇರಿಯ ಅಂಗಳದಲ್ಲಿ ಕನ್ನಡ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದ್ದುದನ್ನು ಕಂಡು ಸಂತೋಷ ಪಟ್ಟರು. ಕೆಲವು ಹೊಸ ಪುಸ್ತಕಗಳನ್ನು ತಿರುವಿ ಹಾಕಿ ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡರು.  ಅವರು ಅಂದು ಮೈಕ್ ಮುಂದೆ ನಿಂತು ಮಾತಾಡಿದ್ದು ಸುಮಾರು 40 ನಿಮಿಷ. ಅಷ್ಟರಲ್ಲಿಯೇ ಅದೆಷ್ಟು ಹೊಸ ಮಾಹಿತಿಗಳನ್ನು ನಮ್ಮ ಜೊತೆ ಹಂಚಿಕೊಂಡರು! ಬೆಂಗಳೂ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ವೆಬ್ ತಾಣ - ಒಂದು ವಿಮರ್ಶಾತ್ಮಕ ನೋಟ

ಒಂದು ತಿಂಗಳ ಹಿಂದೆ ಕರ್ನಾಟಕ ಸಾಹಿತ್ಯ ಅಕಾಡೆಮಿ ವೆಬ್ ತಾಣವನ್ನು ಒಂದಷ್ಟು ಸೂಕ್ಷ್ಮವಾಗಿ ಪರಿಶೀಲಿಸಿ ಒಂದು ವಿಮರ್ಶೆ ಬರೆದು ಅದರಲ್ಲಿರುವ ಲೋಪಗಳನ್ನು ಪಟ್ಟಿ ಮಾಡಿ ಪತ್ರ ಬರೆದೆ. ಒಂದು ತಿಂಗಳಿನ ನಂತರವೂ ಅಕಾಡೆಮಿಯಿಂದ ಉತ್ತರ ಬಂದಿಲ್ಲ. ವೆಬ್ ತಾಣ ಇನ್ನೂ ಹಾಗೇ ಇದೆ.  ನನ್ನ ಪತ್ರದ  ಉದ್ದೇಶ ಟೀಕೆ ಮಾಡುವುದಲ್ಲ.   ಆನ್ಲೈನ್  ಪ್ರಕಾಶನಕ್ಕೂ ಪುಸ್ತಕ ಮುದ್ರಣಕ್ಕೂ ಒಂದು ಮುಖ್ಯ ವ್ಯತ್ಯಾಸವೆಂದರೆ ಆನ್ಲೈನ್  ಕಡತಗಳನ್ನು ಯಾವಾಗ ಬೇಕಾದರೂ ಸುಲಭವಾಗಿ ತಿದ್ದಬಹುದು.  ಹೀಗಾಗಿ ಲೋಪದೋಷಗಳನ್ನು ಸುಲಭವಾಗಿ ಸರಿಪಡಿಸಿಕೊಳ್ಳಬಹುದು, ದೈನಂದಿನ ಆಗುಹೋಗುಗಳಿಗೆ ಬೇಗ ಪ್ರತಿಕ್ರಯಿಸಬಹುದು.  ಇದಕ್ಕಾಗಿ ಅವರು ಒಂದು ಪ್ರತ್ಯೇಕ ತಂಡವನ್ನು ಮೀಸಲಾಗಿಡಬೇಕು. ಕರ್ನಾಟಕ ಸಾಹಿತ್ಯ ಅಕಾಡೆಮಿಯಾಗಲಿ ಕನ್ನಡ ಸಾಹಿತ್ಯ ಪರಿಷತ್ತಾಗಲಿ ತಮ್ಮ ವೆಬ್ ತಾಣವನ್ನು ಈ ದೃಷ್ಟಿಯಿಂದ ನೋಡುತ್ತಿಲ್ಲ. ಪುಸ್ತಕದ ಒಂದು ಮುದ್ರಣವಾದ ನಂತರ  ಹೇಗೆ ಮರುಮುದ್ರಣವಾಗುವವರೆಗೆ ಅದರಲ್ಲಿ ತಿದ್ದುಪಡಿ ಮಾಡುವುದಿಲ್ಲವೋ ಈ ಸಂಸ್ಥೆಗಳು ತಮ್ಮ ವೆಬ್ ತಾಣಗಳನ್ನೂ ಹಾಗೇ ಪರಿಗಣಿಸುತ್ತಿವೆ. ನನ್ನ ವಿಮರ್ಶೆಯ ಉದ್ದೇಶ ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಸಲಹೆ ನೀಡುವುದೇ ಆಗಿದೆ. ನನ್ನ ಪತ್ರವನ್ನು ಅವರು ತಿಂಗಳಾದರೂ ಪ್ರತಿಕ್ರಯಿಸಿಲ್ಲ. ಹೀಗಾಗಿ ನನ್ನ ವಿಮರ್ಶೆಯನ್ನು ಸಾರ್ವಜನಿಕವಾಗಿ ಪ್ರಕಟಿಸುತ್ತಿದ್ದೇನೆ.    ಡಾ. ಸಿ ಪಿ ರವಿಕುಮಾರ್ ಸಂಕ್ಷೇಪ  ಸೆಪ್ಟೆಂಬರ್ ೨೦೧೫ ಕರ್ನಾ