ದೂರಗೊಳಿಸು ಜಗದ ಕತ್ತಲೆಯನ್ನು ನೀನು ದೀಪಾವಳಿಯಾಗಿ

ಮೂಲ ಹಿಂದಿ ಕವಿತೆ - ನೀರಜ್ 
ಕನ್ನಡ ಅನುವಾದ - ಸಿ ಪಿ ರವಿಕುಮಾರ್ 




ದೂರಗೊಳಿಸು ಜಗದ ಕತ್ತಲೆಯನ್ನು ನೀನು ದೀಪಾವಳಿಯಾಗಿ
ದೂರಾದ ಹೃದಯಗಳ ಜೋಡಿಸುವೆ ನಾನು ಹೋಳಿಯಾಗಿ


ನಿಶೆಯ ಹಣೆ ಬರಿದಾಗಿದೆ ಇಂದು ಚಂದ್ರಮನಿಲ್ಲದೆ
ಪ್ರತಿಯೊಬ್ಬರ ಹೊಸ್ತಿಲಲ್ಲೂ ಕುಳಿತಿದೆ ಬೆಳಗು ಮುನಿದು,
ಶೂನ್ಯವಾಗಿದೆ ಗಗನ, ಉದುರಿಹೋಗಿವೆ ತಾರೆ
ಕತ್ತಲೆಗೆ ಬೆಳಕಿನೆದೆಯೂ ಹೋದೀತು ಒಡೆದು!
ನೀನು ಮನೆಮನೆಯ ಮುಂದೆ ಮುಗುಳ್ನಗು ಹಣತೆಯಾಗಿ
ನಾನು ಹಣೆಗಳಲ್ಲಿ ಮಿಂಚುವೆನು ಕುಂಕುಮದ ಘನತೆಯಾಗಿ!


ದೂರಗೊಳಿಸು ಜಗದ ಕತ್ತಲೆಯನ್ನು ನೀನು ದೀಪಾವಳಿಯಾಗಿ
ದೂರಾದ ಹೃದಯಗಳ ಜೋಡಿಸುವೆ ನಾನು ಹೋಳಿಯಾಗಿ


ನಡೆಯುತ್ತಿದೆ ವಿಧ್ವಂಸದ ನೃತ್ಯ, ಸೋಲುತ್ತಿವೆ ಸೃಜನದ ಕೈಕಾಲು
ಇತಿಯಾಗುತ್ತಿದೆ ಸಂಸ್ಕೃತಿ, ಮುನಿದಿಹನು ದೂರ್ವಾಸ,
ನಡೆಯುತ್ತಿದೆ ನಡುಬೀದಿಯಲ್ಲಿ ನಗ್ನದ್ರೌಪದಿಯ ಮಾರಾಟ
ಇಷ್ಟಾದರೂ ದಂತಗೋಪುರದಲ್ಲಿ ಸಾಹಿತ್ಯದ ವಾಸ,

ನೀನು ಹಾಡು ದೀಪಕ ರಾಗ, ಮೇಲೆಬ್ಬಿಸು ಶವಗಳನ್ನು
ಜೀವಂತರಿಗೆ ಜೀವನದ ಅರ್ಥ ತಿಳಿಸುವೆನು ನಾನು!


ದೂರಗೊಳಿಸು ಜಗದ ಕತ್ತಲೆಯನ್ನು ನೀನು ದೀಪಾವಳಿಯಾಗಿ 
ದೂರಾದ ಹೃದಯಗಳ ಜೋಡಿಸುವೆ ನಾನು ಹೋಳಿಯಾಗಿ 

ಯಾವ ಮಟ್ಟಕ್ಕೇರಿದೆ ವಸಂತದ ವಿವಶತೆ
ಹೂಗಳಿಗೆ ನಗುವುದೇ ಅಪರಾಧವಾಗಿದೆ,
ಯಾವ ಮಟ್ಟಕ್ಕಿಳಿದಿದೆ ಪಶುಗಳ ಕ್ರೀಡೆ
ಕಳೆದುಹೋದಂತಿದೆ ಜಗದಲ್ಲಿ ಮಾನವತೆ,
ನಡೆ, ಕಳೆದುಹೋದವರಿಗೆ ದಾರಿ ತಿಳಿಸಿ ಬಾ ನೀನು
ನಾನು ಇತಿಹಾಸಕ್ಕೆ ಸುಣ್ಣ-ಬಣ್ಣ ಮಾಡುವೆನು!

ದೂರಗೊಳಿಸು ಜಗದ ಕತ್ತಲೆಯನ್ನು ನೀನು ದೀಪಾವಳಿಯಾಗಿ 
ದೂರಾದ ಹೃದಯಗಳ ಜೋಡಿಸುವೆ ನಾನು ಹೋಳಿಯಾಗಿ


ನೋಡು ನಂದನದಂತಹ ಚಂದನವನದಲ್ಲಿ 

ಮತ್ತೆ ರಕ್ತದ ಬೀಜ ಬಿತ್ತುವ ಸನ್ನಾಹ ನಡೆದಿದೆ,
ಹಾರುವ ಪರಿಮಳ ಪರಾಗಧೂಳಿಯ ಹಿಂದೆ
ಬೆಂಕಿಯ ಕಿಡಿಯೊಂದು ಕೆಂಗಣ್ಣು ತೆರೆದಿದೆ,
ನೀನು ಶ್ರಾವಣವಾಗಿ ಹೀರಿ ಬಿಡು ಎಲ್ಲವನೂ
ಖಡ್ಗದಿಂದಲೂ ಸಂಗೀತ ಮಿಡಿಯುವೆನು ನಾನು!


ದೂರಗೊಳಿಸು ಜಗದ ಕತ್ತಲೆಯನ್ನು ನೀನು ದೀಪಾವಳಿಯಾಗಿ 
ದೂರಾದ ಹೃದಯಗಳ ಜೋಡಿಸುವೆ ನಾನು ಹೋಳಿಯಾಗಿ

ಅಲೆಗಳು ಧಾವಿಸುತ್ತಿರುವಾಗ ಭೂಮಿಯಲ್ಲೆಲ್ಲೆಡೆ
ಎಷ್ಟು ದಿನ ಬದುಕಬಹುದು ನಾವು ದ್ವೀಪದ ಮೇಲೆ!
ಸುಖವಾಗಿ ಹೇಗೆ ಬಾಳಬಹುದು ನಾವು
ಹಬ್ಬುತ್ತಿರುವಾಗ ಜಗದಲ್ಲಿ ದುಃಖದ ಜ್ವಾಲೆ!
ಅಳಿಯುತ್ತಿರುವ ಮಾನವನ ರಕ್ಷಣೆಯಲ್ಲಿ, ಹೇ ಪ್ರಿಯೆ!

ಮಾಡೋಣ ನಾವೂ ಅಳಿದುಹೋಗುವ ಪ್ರತಿಜ್ಞೆ!

ದೂರಗೊಳಿಸು ಜಗದ ಕತ್ತಲೆಯನ್ನು ನೀನು ದೀಪಾವಳಿಯಾಗಿ 
ದೂರಾದ ಹೃದಯಗಳ ಜೋಡಿಸುವೆ ನಾನು ಹೋಳಿಯಾಗಿ

ಕಾಮೆಂಟ್‌ಗಳು

  1. तुम दीवाली बन कर

    - गोपालदास "नीरज"

    तुम दीवाली बनकर जग का तम दूर करो,
    मैं होली बनकर बिछड़े हृदय मिलाऊंगा!

    सूनी है मांग निशा की चंदा उगा नहीं
    हर द्वार पड़ा खामोश सवेरा रूठ गया,
    है गगन विकल, आ गया सितारों का पतझर
    तम ऎसा है कि उजाले का दिल टूट गया,
    तुम जाओ घर-घर दीपक बनकर मुस्काओ
    मैं भाल-भाल पर कुंकुम बन लग जाऊंगा!

    तुम दीवाली बनकर जग का तम दूर करो,
    मैं होली बनकर बिछड़े हृदय मिलाऊंगा!

    कर रहा नृत्य विध्वंस, सृजन के थके चरण,
    संस्कृति की इति हो रही, क्रुद्व हैं दुर्वासा,
    बिक रही द्रौपदी नग्न खड़ी चौराहे पर,
    पढ रहा किन्तु साहित्य सितारों की भाषा,
    तुम गाकर दीपक राग जगा दो मुर्दों को
    मैं जीवित को जीने का अर्थ बताऊंगा!

    तुम दीवाली बनकर जग का तम दूर करो,
    मैं होली बनकर बिछड़े हृदय मिलाऊंगा!

    इस कदर बढ रही है बेबसी बहारों की
    फूलों को मुस्काना तक मना हो गया है,
    इस तरह हो रही है पशुता की पशु-क्रीड़ा
    लगता है दुनिया से इन्सान खो गया है,
    तुम जाओ भटकों को रास्ता बता आओ
    मैं इतिहास को नये सफे दे जाऊंगा!

    तुम दीवाली बनकर जग का तम दूर करो,
    मैं होली बनकर बिछड़े हृदय मिलाऊंगा!

    मैं देख रहा नन्दन सी चन्दन बगिया में,
    रक्त के बीज फिर बोने की तैयारी है,
    मैं देख रहा परिमल पराग की छाया में
    उड़ कर आ बैठी फिर कोई चिन्गारी है,
    पीने को यह सब आग बनो यदि तुम सावन
    मैं तलवारों से मेघ-मल्हार गवाऊंगा!

    तुम दीवाली बनकर जग का तम दूर करो,
    मैं होली बनकर बिछड़े हृदय मिलाऊंगा!

    जब खेल रही है सारी धरती लहरों से
    तब कब तक तट पर अपना रहना सम्भव है!
    संसार जल रहा है जब दुख की ज्वाला में
    तब कैसे अपने सुख को सहना सम्भव है!
    मिटते मानव और मानवता की रक्षा में
    प्रिय! तुम भी मिट जाना, मैं भी मिट जाऊंगा!

    तुम दीवाली बनकर जग का तम दूर करो,
    मैं होली बनकर बिछड़े हृदय मिलाऊंगा!

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)