ಹಾದಿ ತಪ್ಪಿದವರು

ಸಿ ಪಿ ರವಿಕುಮಾರ್ 
ಸಮಾಜದ ಬಿರುಕುಗಳನ್ನು ಮುಚ್ಚಬೇಕಾದ ಸಾಹಿತಿಗಳು ಕೂಡಾ ಇಂದು ಸಮಯಸಾಧಕರಾಗಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿರುವುದು ಶೋಚನೀಯ.  ಏನಾದರೂ ಅಸಂಬದ್ಧ ಹೇಳಿಕೆ ಕೊಟ್ಟು ಪ್ರಚಾರ ಗಿಟ್ಟಿಸುವುದು ಈನಡುವೆ ನಾವು ಕಾಣುತ್ತಿರುವ ಟ್ರೆಂಡ್. ಪ್ರಸ್ತುತ ಕವಿತೆ ಇಂಥವರನ್ನು ಕುರಿತದ್ದು. 

ದೀಪಾವಳಿಯ ಹಬ್ಬಕ್ಕೆ ಬೆಳಗಬೇಕಾದವರು ಜ್ಞಾನದ ಹಣತೆ
ಯಾಕೆ ಅಗೆದು ತೆಗೆಯುತ್ತಿದ್ದಾರೆ ಅಂಧಕಾರ?
ಯಾಕಿವರಿಗೆ ಅದಮ್ಯವಾಗಿದೆ ಬಾಂಬ್ ಸಿಡಿಸುವ ಆಸೆ?
ಲೆಕ್ಕಿಸದೆ ಜನಜೀವನಕ್ಕೆ ಸಂಚಕಾರ -

ಭೂತವನ್ನು ಬಡಿದೆಚ್ಚರಿಸಿ ಕೂಗುತ್ತಾರೆ
ಕೈಯಲ್ಲಿ ಡಮರುಗ ಹಿಡಿದು ಬಡಿಯುತ್ತಾ ಡಮಡಮ -
ಕೇಳುವವರಿದ್ದಾರೆ ಇವರ ಒಡಕುದನಿ ಹಾಡನ್ನು
ಎನ್ನುವುದೇ ಇವರಿಗೆ ಸಂತೋಷ-ಚರಮ

ಇಂಥವರಿಗೇ ಸಿಕ್ಕುತ್ತದೆ ಇಂದು ಮನ್ನಣೆ ಪುರಸ್ಕಾರ
ದೊಡ್ಡಕ್ಷರದ ವರದಿ ಮೊದಲ ಪುಟದಲ್ಲಿ
ಇವರ ಕೀರ್ತಿದಾಹಕ್ಕೆ ಎಷ್ಟೊಂದು ಬಲಿದಾನ
ಇವರು ಬಾಯ್ತೆರೆಯುತ್ತಾರೆ ಕೆಟ್ಟ ಹಟದಲ್ಲಿ

ಕಾರುತ್ತಾರೆ ನಂಜು ಬಿಟ್ಟಾಗಲೆಲ್ಲಾ ಬಾಯಿ
ಇವರ ಲೇಖನಿಯಲ್ಲಿ ತುಂಬಿಹುದು ರಕ್ತಶಾಯಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)