ಅಪರಿಚಿತನ ಮನೆಯಲ್ಲಿ ಕಳೆದುಹೋಯಿತು ಜೀವನ

ಮೂಲ ಹಿಂದಿ ಗಜಲ್ - ಗೋಪಾಲ್ ದಾಸ್ "ನೀರಜ್"
ಕನ್ನಡಕ್ಕೆ - ಸಿ ಪಿ ರವಿಕುಮಾರ್ 




ಅಪರಿಚಿತನ ಮನೆಯಲ್ಲಿ ಕಳೆದುಹೋಯಿತು ಜೀವನ
ಯಾತ್ರೆಯಲ್ಲದ ಯಾತ್ರೆಯಲ್ಲಿ ಸವೆದು ವಿನಾ ಕಾರಣ

ಅತ್ತಿಂದ ಇತ್ತ ಓಡಾಡುತ್ತಿತ್ತಲ್ಲ ಅದು ದೇಹ ಮಾತ್ರ
ಹೃದಯ ಮಲಗಿತ್ತು ನಿನ್ನ ಓಣಿಯಲ್ಲಿ ದಾರಿ ನೋಡುತ್ತಾ

ವ್ರಜದ ಗೋಕುಲದಲ್ಲಿ ಹುಡುಕುತ್ತಿದ್ದೆಯಲ್ಲ ನೀನು ಶ್ಯಾಮನನ್ನು
ಯಾವುದೋ ಮೀರಾಳ ಕಣ್ನೋಟದಲ್ಲಿ ಸಿಕ್ಕಿಕೊಂಡಿದ್ದ ಅವನು

ತಾರೆಗಳ ಕನಸು ಕಂಡವರು ಯಾರೋ ಬೇರೆಯವರು
ನನ್ನ ದೇಶದಲ್ಲಿ ಎಲ್ಲರಿಗೆ ನಾಳೆಯ ಊಟದ್ದೇ ಖಬರು

ರತ್ನಮುತ್ತುಗಳಿಂದ ತುಂಬಿತ್ತು ವ್ಯಾಪಾರಿಯ ಜೋಳಿಗೆ 

ಏನೂ ಗಿಟ್ಟಲಿಲ್ಲ  ಆದರೆ-ಹೋದರೆಗಳಲ್ಲೇ ಉಳಿದವನ ಪಾಲಿಗೆ


(c) 2015  C.P. Ravikumar, Translation of a Hindi Gazal by Gopaldas Neeraj

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)