ಸ್ವಚ್ಛ ಆಗಸದ ನಡುರಾತ್ರಿ

ಮೂಲ ಇಂಗ್ಲಿಷ್ ಕವಿತೆ - ವಾಲ್ಟ್ ವ್ಹಿಟ್ ಮನ್
ಕನ್ನಡಕ್ಕೆ - ಸಿ. ಪಿ. ರವಿಕುಮಾರ್  




ಆತ್ಮವೇ ಇಗೋ ಬಂತು ನಿನ್ನ ಘಳಿಗೆ
ಹಾರು ಮುಕ್ತವಾಗಿ ಮಾತುಗಳಿಲ್ಲದೆಡೆಗೆ
ದಿನವನ್ನು ಅಳಿಸಿ
ಪುಸ್ತಕ-ಕಲೆ-ಪಾಠಗಳನ್ನು ದೂರಗೊಳಿಸಿ
ಹೊರಬಂದು ದೃಷ್ಟಿಸುತ್ತಾ ನಿಲ್ಲು
ಕೇಳಿಸದೋ ಎಲ್ಲಿ ಒಂದೂ ಸೊಲ್ಲು,
ಹರಿಯಬಿಡು ನಿನ್ನಿಷ್ಟದ ವಿಚಾರಧಾರೆಗಳು -
ಇರುಳು, ನಿದ್ರೆ, ಸಾವು, ಮತ್ತು ತಾರೆಗಳು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)