ಏನು ಹಾಡುತ್ತಿವೆ ಹಕ್ಕಿ?
ಸಂತ ಕಬೀರನ ಈ ಭಜನೆಯನ್ನು ಅನೇಕ ಗಾಯಕರು ಹಾಡಿದ್ದಾರೆ. ವೀಣಾ ಸಹಸ್ರಬುದ್ಧೆ ಎಂಬ ಗಾಯಕಿಯ ದನಿಯಲ್ಲಿ ನೀವು ಇಲ್ಲಿ ಕೇಳಬಹುದು. ಈ ಕವಿತೆಯಲ್ಲಿ ಭಗವಂತನು ಎಲ್ಲೆಡೆ ಕಾಣುವುದನ್ನು ಕವಿ ವಿವರಿಸುತ್ತಾನೆ. "ತಾನೇ ಮಾಲಿ, ಉಪವನವೂ ತಾನೇ, ತಾನೇ ಬಿಡಿಸುವನು ಹೂವು" ಎಂಬ ಸಾಲುಗಳಲ್ಲಿ ಸೃಷ್ಟಿ, ಸ್ಥಿತಿ ಮತ್ತು ಸಾವು ಈ ಮೂರರಲ್ಲೂ ಭಗವಂತನ ಸಾಕ್ಷಾತ್ಕಾರವನ್ನು ಕವಿ ನಮಗೆ ತೋರಿಸುತ್ತಾನೆ.
ಮೂಲ : ಮಹಾತ್ಮಾ ಕಬೀರ್
ಕನ್ನಡಕ್ಕೆ: ಸಿ. ಪಿ. ರವಿಕುಮಾರ್
ಏನು ಹಾಡುತ್ತಿವೆ ಹಕ್ಕಿ
ಮೂಲ : ಮಹಾತ್ಮಾ ಕಬೀರ್
ಕನ್ನಡಕ್ಕೆ: ಸಿ. ಪಿ. ರವಿಕುಮಾರ್
ಏನು ಹಾಡುತ್ತಿವೆ ಹಕ್ಕಿ
ಪ್ರತಿಯೊಂದು ಕಾಯದಲ್ಲಿ
ಕೇಳಿಸಿಕೋ ಎರಡು ಕ್ಷಣ ಮೌನವಾಗಿ
ತಾನೇ ಕೋಲಾಗಿ ತಾನೇ ತಕ್ಕಡಿಯಾಗಿ
ತಾನೇ ಕುಳಿತು ತೂಗುತ್ತಿಹನು ನೋಡಲ್ಲಿ
ತಾನೇ ಮಾಲಿ, ಉಪವನವೂ ತಾನೇ
ತಾನೇ ಬಿಡಿಸುವನು ಹೂವು ನೋಡಲ್ಲಿ
ವನದಲ್ಲಿ ಎಲ್ಲೆಡೆಗೂ ತಾನೇ ತಾನಾಗಿ
ಮೆರೆಯುವನು ಜಡದಲ್ಲಿ ಚೈತನ್ಯದಲ್ಲಿ
ಸಾಧುಗಳೇ ಕೇಳಿ, ಹೇಳುವನು ಕಬೀರ
ಮನಸ್ಸಿನ ಗಂಟು ಬಿಡಿಸುವ ಈ ವಾಣಿ
ಕೇಳಿಸಿಕೋ ಎರಡು ಕ್ಷಣ ಮೌನವಾಗಿ
ತಾನೇ ಕೋಲಾಗಿ ತಾನೇ ತಕ್ಕಡಿಯಾಗಿ
ತಾನೇ ಕುಳಿತು ತೂಗುತ್ತಿಹನು ನೋಡಲ್ಲಿ
ತಾನೇ ಮಾಲಿ, ಉಪವನವೂ ತಾನೇ
ತಾನೇ ಬಿಡಿಸುವನು ಹೂವು ನೋಡಲ್ಲಿ
ವನದಲ್ಲಿ ಎಲ್ಲೆಡೆಗೂ ತಾನೇ ತಾನಾಗಿ
ಮೆರೆಯುವನು ಜಡದಲ್ಲಿ ಚೈತನ್ಯದಲ್ಲಿ
ಸಾಧುಗಳೇ ಕೇಳಿ, ಹೇಳುವನು ಕಬೀರ
ಮನಸ್ಸಿನ ಗಂಟು ಬಿಡಿಸುವ ಈ ವಾಣಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ