ಪೋಸ್ಟ್‌ಗಳು

ಜುಲೈ, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಿನಗಾಗಿ ತಂದಿರುವೆ ಈ ವೈಶಾಖ

ಇಮೇಜ್
ಮೂಲ : ಡಾ. ಎಸ್. (ಕುಟ್ಟಿ) ರೇವತಿ (ತಮಿಳು) ಇಂಗ್ಲಿಷ್ ಅನುವಾದ: ಕಲ್ಯಾಣ್ ರಾಮನ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ನಿನ್ನೆದೆಯ ಹುಲ್ಲುಗಾವಲು ಒಣಗಿಹೋಗಿದೆಯೇ,   ಪತ್ರಗಳೇ ಬರೆದಿಲ್ಲ ಈನಡುವೆ.  ಪ್ರಶಾಂತಸಾಗರದಂತಿರುವ ನಿನ್ನ ಪತ್ರಗಳು, ಅವುಗಳ ಕೆಳಗೆ ಭೋರ್ಗರೆಯುವ ಕಣ್ಣೀರಿನ ಕಡಲು.  ರಕ್ಷಿಸಲು ಧಾವಿಸಬೇಕೆಂಬ ತವಕ   ಉಂಟು ಮಾಡುವ ನಿನ್ನ ಮೃದುವಾದ ಒಡಲು.  ಬೇಸಗೆಯ ಬೀದಿಯಲ್ಲಿ ಬೇರಾರೂ ಕಾಣಿಸುವುದಿಲ್ಲ,  ಹೊರತಾಗಿ ಒಬ್ಬ ಪೋಸ್ಟ್ ಮ್ಯಾನ್,  ಅವನು ತರುತ್ತಿದ್ದಾನೆ ಕತ್ತು ಹಿಸುಕಿದ ಪತ್ರಗಳನ್ನು ಹೊತ್ತು, ಹಾಗೂ ಬಾಲ್ಯದ ರಹಸ್ಯಗಳನ್ನು ಕಳೆದುಕೊಂಡ ಹುಡುಗಿಯನ್ನು ಬಿಟ್ಟು.  ಎಲ್ಲ ತೊರೆಗಳನ್ನೂ ಒಂದೇ ಗುಟುಕಿನಲ್ಲಿ  ಹೀರಿಬಿಡುವ ವೈಶಾಖದ ವಿಚಿತ್ರ ಹಕ್ಕಿ  ಮೆಲ್ಲನೆ ಬಂದಾಗ ಕಲ್ಲುಬಂಡೆಗಳಿಗೂ ಜೀವ ಬರುತ್ತದೆ.  ಮಕ್ಕಳು ಆಡಲು ನಿರಾಕರಿಸುತ್ತಾರೆ  ನಿತ್ಯವೂ ರಕ್ತದಲ್ಲಿ ಮಿಂದೇಳುವ ಸೂರ್ಯನ ಕೆಳಗೆ.   ಒಂದು ಖಾಲೀ ಮನೆಯಲ್ಲಿ ಬಹಳ ಹೊತ್ತಿನಿಂದಲೂ  ಟೆಲಿಫೋನ್ ರಿಂಗಣಿಸುತ್ತಿದೆ.  ಹುಡುಗಿಯರ ಕಣ್ಣುಗಳು ಮಬ್ಬಿನಲ್ಲಿ ತೇಲುತ್ತವೆ.  ಹಿಂದೊಮ್ಮೆ  ಮರಗಳಿಗೆ ನಿಲ್ಲಲೂ ಶಕ್ತಿಯಿಲ್ಲದ ಒಂದು ಬೇಸಗೆಯಲ್ಲಿ  ನನ್ನ ದೇಹವನ್ನು ಜೀವಂತ, ಅಗಾಧವೆಂದು  ಬಣ್ಣಿಸಿದ್ದೆ ನೀನು....

ವಿಕಾಸ

ಇಮೇಜ್
ಸಿ. ಪಿ. ರವಿಕುಮಾರ್ ಧೃತರಾಷ್ಟ್ರ ಕುರುಡನಾದರೂ ತನ್ನ ಮಕ್ಕಳ ನಿಜವನ್ನು ನೋಡಲಾಗದಷ್ಟೇನಲ್ಲ. ಆದರೂ ನೋಡದಂತೆ ಇದ್ದುಬಿಟ್ಟ. ಹೆಂಡತಿಯಂತೆ ತಾನೂ ಕಣ್ಣಿಗೆ ಕಟ್ಟಿಕೊಂಡ ಕಪ್ಪುವಸ್ತ್ರ. ಸಭೆಯಲ್ಲಿ ದ್ರೌಪದಿಯು ಕೂಗಿದ್ದು ಅವನಿಗೆ ಕೇಳಿಸಲಿಲ್ಲ ಎಂದೇನಲ್ಲ. ಆದರೂ ಕೇಳಿಸದಂತೆ ಇದ್ದುಬಿಟ್ಟ. ನುಡಿಸುತ್ತಾ ವೀಣೆ ಸುಮ್ಮನಿದ್ದುಬಿಟ್ಟ ದುಶ್ಶಲೆಯ ಹಾಡನ್ನು ಕೇಳುತ್ತಾ. ಆದರೂ ಧೃತರಾಷ್ಟ್ರನಲ್ಲಿ ಒಂದು ಗುಣವಿತ್ತು.  ಬೇಕಿದ್ದರೆ ಪಾಂಡುವಿನ ಮಕ್ಕಳ ಮೇಲೆ ಹೊರಿಸಬಹುದಾಗಿತ್ತು ಸುಳ್ಳು ಆರೋಪ. ದ್ರೌಪದಿಯ ಶೀಲವನ್ನು ಕುರಿತು ಮಾತಾಡಬಹುದಾಗಿತ್ತು ನೂರೆಂಟು ಪಾಪ. ದ್ವಾಪರದಿಂದ ಕಲಿಯುಗಕ್ಕೆ ಇದೇ ವಿಕಾಸ. (ಚಿತ್ರಕೃಪೆ - ವಿಕಿಪೀಡಿಯ)

ಸೂಸನ್

ಇಮೇಜ್
ಮೂಲ ಇಂಗ್ಲಿಷ್ ಕವಿತೆ : ವಾಲ್ಟರ್ ಡಿ ಲ ಮೇರ್  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ಕವಿತೆಯ ಸ್ವಾರಸ್ಯ: ತನ್ನ ಬಾಲ್ಯದ ನೆನಪಿನಿಂದ ಒಂದು ಚಿತ್ರವನ್ನು ಕವಿ ಇಲ್ಲಿ ಬಿಡಿಸಿದ್ದಾನೆ.  ನೀರವ ರಾತ್ರಿಯಲ್ಲಿ ಓದುತ್ತಾ ಕುಳಿತ ವೃದ್ಧೆಯೊಬ್ಬಳ ಚಿತ್ರ.   ಕವಿತೆಯಲ್ಲಿ ಬರುವ ಸೂಸನ್ ಅವನ ಮನೆಯಲ್ಲಿ ಅವನ ಸಂಬಂಧಿಕಳಾಗಿರಬಹುದು ಅಥವಾ ಅವನ ಮನೆಯಲ್ಲಿ ಅಡುಗೆ ಮಾಡುವ ಪರಿಚಾರಿಕೆಯಾಗಿರಬಹುದು.  ಅವಳು ತಲ್ಲೀನಳಾಗಿ ಓದುತ್ತಿದ್ದುದಾದರೂ ಏನನ್ನು? ಸೂಸನ್ ದಿನದ ಕೆಲಸಗಳನ್ನೆಲ್ಲಾ ಮುಗಿಸಿ ಕೂಡುವಳು ಹಚ್ಚಿಟ್ಟುಕೊಂಡು ಮೋಂಬತ್ತಿ ಕಿಟಕಿಬಾಗಿಲು ದೊಡ್ಡದಾಗಿ ತೆರೆದಿಟ್ಟು ರಾತ್ರಿಯ ಕುಸುಮಿತ ಗಾಳಿಯನ್ನು ಒಳಬಿಟ್ಟು  ಇಟ್ಟುಕೊಂಡು ತನ್ನದೇ ಹೆಬ್ಬೆಟ್ಟು ಗುರುತಿಗೆ ಓದುವಾಗ ಗಂಭೀರ ಮುಖದಲ್ಲಿ ನೆರಿಗೆ ಸೌಮ್ಯ ಕಣ್ಣುಗಳು ಮೆಲ್ಲನೆ ಅತ್ತಿಂದ ಇತ್ತ  ಚಲಿಸಿವುವು ಅಕ್ಷರಗಳನ್ನು  ಸವರುತ್ತಾ  ಮೋಂಬತ್ತಿ ಬೆಳಕು ಅಲ್ಲಾಡುವುದು ಒಮ್ಮೆ  ಕಿಟಕಿಯಿಂದ ಬೀಸಿದ ತಂಗಾಳಿಯ ಸುಳಿಗೆ ಒಮ್ಮೊಮ್ಮೆ ನೀರವದಲ್ಲಿ ಪಿಟಿಪಿಟಿ ಎಂದು  ಗೊಣಗಿಕೊಳ್ಳುವಳು ಅಸ್ಪಷ್ಟ ವಾಕ್ಯವನ್ನೊಂದು  ತಲೆಯಾಡಿಸುತ್ತಾ  ಸೂಚಿಸುವಳು ಅಸಮಾಧಾನ ಒಮ್ಮೊಮ್ಮೆ  "ಹೀಗೆ ಮಾಡಬಹುದೇ ನೀನು, ಪೆದ್ದೇ!" ಎಂಬಂತೆ  ಕೇಳಿದ್ದು ನೆನಪಿಲ್ಲ ಇನ್ನಾವುದೇ ಸದ್ದೂ  ಎಲ್ಲೋ ಕೂಗಿದ ಕೋಳಿಯ...

ಲೋಣಾವಲಾ ನಸುಕು

ಇಮೇಜ್
ಮೂಲ ಕವಿತೆ : ಶೇನ್ ಹಾವ್ಬೋ (ಚೈನಾ)  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ಹಕ್ಕಿಹಾಡು ಕಿವಿಯಲ್ಲಿ ತೊಟ್ಟಿಕ್ಕುತ್ತದೆ  ಎಣ್ಣೆಯ ಹನಿಗಳಂತೆ.  ನಾನು ಮೇಲೆದ್ದು ಬಟ್ಟೆ ಧರಿಸಿ ಹೊರಗೆ ಬರುತ್ತೇನೆ.  ದೂರದಲ್ಲಿ ಮಂಜಿನ ಪರದೆಯ ಮೂಲಕ ನನಗೆ ಕಾಣಿಸುತ್ತಾನೆ  ನದೀತೀರದಲ್ಲಿ ಕುಕ್ಕರುಗಾಲಲ್ಲಿ ಬಹಿರ್ದೆಸೆಗೆ ಕುಳಿತ   ಬಿಳಿಬಟ್ಟೆ ತೊಟ್ಟ ಒಬ್ಬ ಇಂಡಿಯನ್.  ಈ ದೃಶ್ಯವನ್ನು ನಾನು ಓದಿದ್ದೇನಲ್ಲ  ಬಹಳ ಹಿಂದೆ ಇಂಡಿಯಾ ಕುರಿತು ನೈಪಾಲ್ ಅವರ ಕಹಿಬರಹಗಳಲ್ಲಿ - ಆತ ವರ್ಣಿಸುತ್ತಾನೆ ನದೀತೀರದಲ್ಲಿ ಸಾಲಾಗಿ ಬಹಿರ್ದೆಸೆಗೆ ಕುಕ್ಕರಿಸಿ  ಹರಟೆ ಹೊಡೆಯುವ ಇಂಡಿಯನ್ನರ ಸಾಲು.  ನಾನು ಕಣ್ಣು ಅಗಲಿಸಿ ಕತ್ತೆತ್ತಿ ನೋಡುತ್ತೇನೆ,  ಬಹಿರ್ದೆಸೆಗೆ ಕುಳಿತ ಇನ್ನಷ್ಟು ಜನರನ್ನು ನೋಡುವ ಸೆಳೆತದಿಂದ.  ನನಗೆ ನನ್ನ ತಪ್ಪಿನ ಅರಿವಾಗುತ್ತದೆ, ನದಿಯ ತೀರದಲ್ಲಿ  ಯಾವ ಇಂಡಿಯನ್ನರೂ ಕುಕ್ಕರಿಸಿಲ್ಲ.  ಅಲ್ಲಿ ಒಂಟಿಯಾಗಿ ಅಲ್ಲಾಡದೆ ನಿಂತಿರುವುದು  ಒಂದು ಬಿಳಿ ಕೊಕ್ಕರೆ.   

ಬೂದುಹಕ್ಕಿ

ಇಮೇಜ್
ಮೂಲ: ಕುಟ್ಟಿ ರೇವತಿ (ತಮಿಳುನಾಡು)  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಮರದ ನೆರಳು  ಮೌನವಾಗಿ ಕುಳಿತಿದೆ ಎಲೆಗಳ ಛಾವಣಿಯ ಕೆಳಗೆ  ಬೂದುಹಕ್ಕಿಯ ಹಾಗೆ  ಬೀದಿಯುದ್ದಕ್ಕೂ ಚಾಚಿಕೊಂಡಿರುವ ಬಿಮ್ಮನೆಯ ಮೌನವನ್ನೂ  ಕಸಿದುಕೊಂಡು ಹಾರಿಹೋಗುವುದೋ ಎಂಬಂತೆ.  ಒಬ್ಬಳು ಹುಡುಗಿ ಗುಡಿಸುತ್ತಾ ಬಂದಳು.  ಇಲ್ಲೇ ಅವನು ನನಗೆ ಕಾಯಲು ಹೇಳಿದ್ದು.  ಇಲ್ಲೇ ನನ್ನ ಪ್ರೇಮವನ್ನು ಬೇಡಿದ್ದು.  ತಿರುಗಿ ತಿರುಗಿ ನೋಡುತ್ತಾ ನನ್ನ ಕಡೆ ಮೌನವನ್ನು ಗುಡಿಸಿಕೊಂಡು   ಕಸದ ಹುಡುಗಿ  ತೆರಳಿ ಎಷ್ಟೋ ಹೊತ್ತಾಯಿತು.  ಕತ್ತಲು ಕೆಳಗೆ ಸುರಿಯುತ್ತಿದೆ ಈಗ ಕಣ್ಣೀರಿನ ಧಾರೆಯಂತೆ.  ಕೊನೆಗೂ ತನ್ನ ಋತುಮಾನ ಪರ್ವಕ್ಕೆ  ತಾನೇ ಬರಲು ಸಿದ್ಧವಾದ ದೇಹದಂತೆ ಮೋಡಿಗೊಳಗಾಗಿ, ಭೀತಿಯುಕ್ತಳಾಗಿ ನಾನು ಕಾಯುತ್ತೇನೆ.  ಇಗೋ ... ಅವನು ದೂರದಲ್ಲಿ ನಡೆದು ಬರುತ್ತಿದ್ದಾನೆ. ಮಳೆಯನ್ನು ಕಾರಿ  ಹಗುರಾಗಲು ಸಿದ್ಧವಾದ  ಮೋಡದಂತೆ.   ಸಂತೋಷ ತಾಳಲಾರದೇ ನನ್ನ ಮೈಯಲ್ಲಿ ಕೆಂಪು ತಾರೆಗಳು  ಬಿರಿಯುತ್ತಿವೆ.  ಮರವು ಮಾತ್ರ  ಸ್ತಬ್ಧವಾಗಿದೆ, ಕಿಂಚಿತ್ತೂ ಅಲುಗಾಡದೆ, ಬೂದುಹಕ್ಕಿಯ ಹಾಗೆ.

ಕುದುರೆಯಲ್ಲ

ಇಮೇಜ್
ಮೂಲ - ನ್ಯಾಟಲೀ ಶಪೇರೋ (ಅಮೆರಿಕಾ ಸಂಸ್ಥಾನ) ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ನನಗೆ ಇಷ್ಟವಾಗುವುದು  ಸರಾಸರಿ  ಇಪ್ಪತ್ತೈದು ವರ್ಷಗಳ ಕಾಲ  ಬಾಳಿ ಬದುಕುವ ಸಾಕಿದ ಕುದುರೆಯಲ್ಲ; ನನಗಿಷ್ಟವಾಗುವುದು  ಒಂದೇ ದಿನ ಬದುಕುವ ಹುಳು. ಅದರಲ್ಲೂ ಒಂದು ದುರ್ದಿನದಲ್ಲಿ  ಬದುಕುವ ಹುಳು. ಎಲ್ಲೋ ರೈಲೊಂದು ಹಳಿ ತಪ್ಪಿದ ದಿವಸ, ಕೆರೆನೀರು ರಾಸಾಯನಿಕಗಳಿಂದ ಕಲುಷಿತವಾದ ದಿವಸ,   ಅಪರಾಧ ಮುಚ್ಚಿಟ್ಟದ್ದನ್ನು ನ್ಯಾಯಪಾಲಕ ಒಪ್ಪಿಕೊಂಡ ದಿವಸ,  ಬೇರೇನೂ ಕುರಿತು ಜನರಿಗೆ ಯೋಚಿಸಲೇ ಆಗದಂಥ ದಿವಸ, ಆ ಯಃಕಶ್ಚಿತ್ ಹುಳುವನ್ನು ಯಾರೂ ಕ್ಯಾರೇ ಎನ್ನದ ದಿವಸ.  ಹುಳುವಿನ ಮನೋವ್ಯಾಪಾರ ನನಗೆ ಗೊತ್ತಿಲ್ಲವೇ  ಕೊಳೆತು ನಾರುವ ಕಾಲದಲ್ಲಿ, ಪಾಪದಲ್ಲಿ ಸಂಭವಿಸಿದ ನನಗೆ? ಎಲ್ಲರೂ ಎಷ್ಟು ವ್ಯಸ್ತರೆಂದರೆ ನನ್ನನ್ನು ಕೊಲ್ಲಲೂ ಯಾರಿಗೂ ಪುರುಸೊತ್ತಿಲ್ಲ.  ವಸ್ತುಸ್ಥಿತಿ ಹೀಗಿದ್ದರೂ ಹೆಚ್ಚದು ನನ್ನ ಆಯಸ್ಸು.  ನಾನು ಬದುಕುವುದು ಕುದುರೆಗಳೊಂದಿಗೆ ಅಲ್ಲ, ನನ್ನ ವಾಸ ನಾಯಿಯೊಂದಿಗೆ, ಮುಸ್ಸಂಜೆ ಕಣ್ಣುಕಾಣದ ನಾಯಿ, ಕಾಲಿಗೆ ದೆಬ್ಬೆ ಕಟ್ಟಿಕೊಂಡು ಕುಂಟುವ ನಾಯಿ,  ಯಾವುದೇ ಪ್ರತಿಮೆ ಕಂಡಾಗ ಕಾಲೆತ್ತುವ ನಾಯಿ.  ಹುಳುವಿಗೆ ಒಮ್ಮೆ ಅರ್ಥವಾಗುವಂತಿದ್ದರೆ ನನ್ನ ಭಾಷೆ  ಅವಳಿಗೆ ನಾನು ತಿಳಿಸಿ ಹೇಳಬಹುದಾಗಿತ್ತು ಭಯ ಪಡದಿರ...

ನಿದರ್ಶನ

ಇಮೇಜ್
ಮೂಲ : ನ್ಯಾಟಲೀ ಶಪೆರೋ (ಅಮೆರಿಕಾ ಸಂಸ್ಥಾನ)  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ಸತ್ತವರಿಗೆ ತಮ್ಮ ಒಂದಿಷ್ಟನ್ನಾದರೂ  ಬಚ್ಚಿಡಲು ಬೇರೆಲ್ಲಿದೆ ಸ್ಥಾನ  ಉಳಿದವರನ್ನು ಹೊರತು? ಹೀಗಾಗಿ ನನಗೆ ಮಗಳು ಹುಟ್ಟಿದಾಗ  ಅವಳಿಗೆ ನಿನ್ನ ಹೆಸರು ಕೊಟ್ಟೆ.  ಅವಳು ಅದನ್ನು ಬಳಸುವುದಿಲ್ಲ.  ಯಾವತ್ತೋ ಒಮ್ಮೆ ತಮಾಷೆಗೆ ಕರೆದ ಹೆಸರನ್ನೇ  ಮತ್ತೆ ಮತ್ತೆ ಕೂಗಿ ಕರೆದು  ಈಗ ಅದೇ  ಕಾಯಂ ಆಗಿಹೋಗಿದೆ.  ಅದಾದರೂ ಹೋಗಲಿ ಎಂದರೆ   ತನ್ನ ಹೆಸರನ್ನು ಅವಳು  ಕೊಟ್ಟು ಬಿಟ್ಟಿದ್ದಾಳೆ  ತನ್ನ ಗಾಜಿನ ಕಣ್ಣಿನ ಗೊಂಬೆಗಳಿಗೆ. ನಿನ್ನನ್ನೇ ಕೂಗಿ ಕರೆದಂತೆ  ಭಾಸವಾಗುತ್ತದೆ ನನಗೆ  ಅವಳು ಕಿರುಚಿ ಕರೆದಾಗ  ರೈತನ ಗೊಂಬೆತಲೆಯನ್ನು, ಉಣ್ಣೆಯಲ್ಲಿ ಹೆಣೆದ ಆಡನ್ನು,  ಚಿಂದಿಬಟ್ಟೆಗಳಿಂದ ಮಾಡಿದ  ಪೋಲೀಸ್ ಪೇದೆಯನ್ನು.  ಕಂದು ಬಣ್ಣದ ಟೊಣಪ ನಾಯಿಗೆ  ಕೆಂಪುದಾರ ಕಟ್ಟಿ ಎಳೆಯುತ್ತಾ ಹೋಗುವಾಗ  ಅದು ವಾಲಿಕೊಂಡಾಗ  ನಿನ್ನ ಹೆಸರನ್ನೇ ಕೂಗಿ ಗದರಿಸುತ್ತಾಳೆ.  ಆ ನಾಯಿಗೋ   ಯಾವಾಗಲೂ ಬೀದಿಯಲ್ಲಿ ದರದರ  ಎಳೆಸಿಕೊಂಡು ಮೆರವಣಿಗೆ ಹೋಗುವುದೇ ರೂಢಿಯಾಗಿದೆ,  ಹೋಗಿ ಗುಂಡಿಕ್ಕಿ ಕೊಲ್ಲುವರೋ  ಉಳಿದವರಿಗೆ ನಿದರ್ಶನದ...

ಹೇರಿಕೆ

ಸಿ. ಪಿ. ರವಿಕುಮಾರ್  ಹೇರುತ್ತಿರುವರು ಯಾರು ನಮ್ಮ ತಟ್ಟೆಯ ಮೇಲೆ ಆಲೂಗೋಬಿ, ರಾಜ್ಮಾ ಮತ್ತು ಛೋಲೆ ಯಾರದು ನಮ್ಮ ರಾಗಿಮುದ್ದೆ ಸಾರು ಮೆನುವಿನಿಂದ ಅಳಿಸಿ ತಂದಿದ್ದು ಕಡಾಯಿ ಪನೀರು? ನಿಂಬೆಹಣ್ಣಿನ ಚಿತ್ರಾನ್ನ, ಮೊಸರನ್ನ, ಸಾರು ಲೆಮನ್ ರೈಸ್ ಕರ್ಡ್ ರೈಸ್ ರಸಂ ಮಾಡಿದವರಾರು? ಬಾಳೆಲೆ ಮುತ್ತುಗದ ಎಲೆ ಮೇಲೆ ಊಟ ಬಿಟ್ಟು ಕೈಗೆ ಕೊಟ್ಟವರಾರು ಪ್ಲಾಸ್ಟಿಕ್ ತಟ್ಟೆ ಲೋಟ? ಕಚ್ಚೆ ಪಂಚೆ ಮತ್ತು ಮೈಸೂರು ರುಮಾಲು ಕಸಿದುಕೊಂಡವರು ನಮ್ಮಿಂದ ಯಾರು? ಸೀರೆಗೆ ಎತ್ನಿಕ್ ಡ್ರೆಸ್ ಎಂಬ ಹೆಗ್ಗಳಿಕೆ ಕೊಟ್ಟು ಹೇರಿದವರು ಯಾರು ಚೂಡಿದಾರು? ಹಳಗನ್ನಡವನ್ನು ನಮ್ಮಿಂದ ಕಿತ್ತು ಹಳಸಲು ಕಾವ್ಯವನ್ನು ನಮ್ಮ ಕೈಲಿಟ್ಟು ಓದಲೇ ಬೇಕೆಂದು 'ಪಥ್ಯ' ಪುಸ್ತಕದಲ್ಲಿ ಹಾಕಿದವರು ಯಾರು ಮಕ್ಕಳಿಗೆ ಕರಾರು? ಹೇರುತ್ತಿರುವವರು ಯಾರು ನಮ್ಮ ತಟ್ಟೆಯ ಮೇಲೆ ಆಲೂಗೋಬಿ, ರಾಜ್ಮಾ ಮತ್ತು ಛೋಲೇ ನೀನು ಹೇಳು ಬ್ರದರ್, ಸಿಸ್ಟರ್ ನೀನು ಹೇಳೇ