ಸೂಸನ್
ಮೂಲ ಇಂಗ್ಲಿಷ್ ಕವಿತೆ : ವಾಲ್ಟರ್ ಡಿ ಲ ಮೇರ್
ಕನ್ನಡಕ್ಕೆ : ಸಿ. ಪಿ. ರವಿಕುಮಾರ್
ಕವಿತೆಯ ಸ್ವಾರಸ್ಯ: ತನ್ನ ಬಾಲ್ಯದ ನೆನಪಿನಿಂದ ಒಂದು ಚಿತ್ರವನ್ನು ಕವಿ ಇಲ್ಲಿ ಬಿಡಿಸಿದ್ದಾನೆ. ನೀರವ ರಾತ್ರಿಯಲ್ಲಿ ಓದುತ್ತಾ ಕುಳಿತ ವೃದ್ಧೆಯೊಬ್ಬಳ ಚಿತ್ರ. ಕವಿತೆಯಲ್ಲಿ ಬರುವ ಸೂಸನ್ ಅವನ ಮನೆಯಲ್ಲಿ ಅವನ ಸಂಬಂಧಿಕಳಾಗಿರಬಹುದು ಅಥವಾ ಅವನ ಮನೆಯಲ್ಲಿ ಅಡುಗೆ ಮಾಡುವ ಪರಿಚಾರಿಕೆಯಾಗಿರಬಹುದು. ಅವಳು ತಲ್ಲೀನಳಾಗಿ ಓದುತ್ತಿದ್ದುದಾದರೂ ಏನನ್ನು?

ಸೂಸನ್ ದಿನದ ಕೆಲಸಗಳನ್ನೆಲ್ಲಾ ಮುಗಿಸಿ
ಕೂಡುವಳು ಹಚ್ಚಿಟ್ಟುಕೊಂಡು ಮೋಂಬತ್ತಿ
ಕಿಟಕಿಬಾಗಿಲು ದೊಡ್ಡದಾಗಿ ತೆರೆದಿಟ್ಟು
ರಾತ್ರಿಯ ಕುಸುಮಿತ ಗಾಳಿಯನ್ನು ಒಳಬಿಟ್ಟು
ಇಟ್ಟುಕೊಂಡು ತನ್ನದೇ ಹೆಬ್ಬೆಟ್ಟು ಗುರುತಿಗೆ
ಓದುವಾಗ ಗಂಭೀರ ಮುಖದಲ್ಲಿ ನೆರಿಗೆ
ಸೌಮ್ಯ ಕಣ್ಣುಗಳು ಮೆಲ್ಲನೆ ಅತ್ತಿಂದ ಇತ್ತ
ಚಲಿಸಿವುವು ಅಕ್ಷರಗಳನ್ನು ಸವರುತ್ತಾ
ಮೋಂಬತ್ತಿ ಬೆಳಕು ಅಲ್ಲಾಡುವುದು ಒಮ್ಮೆ
ಕಿಟಕಿಯಿಂದ ಬೀಸಿದ ತಂಗಾಳಿಯ ಸುಳಿಗೆ
ಒಮ್ಮೊಮ್ಮೆ ನೀರವದಲ್ಲಿ ಪಿಟಿಪಿಟಿ ಎಂದು
ಗೊಣಗಿಕೊಳ್ಳುವಳು ಅಸ್ಪಷ್ಟ ವಾಕ್ಯವನ್ನೊಂದು
ತಲೆಯಾಡಿಸುತ್ತಾ ಸೂಚಿಸುವಳು ಅಸಮಾಧಾನ ಒಮ್ಮೊಮ್ಮೆ
"ಹೀಗೆ ಮಾಡಬಹುದೇ ನೀನು, ಪೆದ್ದೇ!" ಎಂಬಂತೆ
ಕೇಳಿದ್ದು ನೆನಪಿಲ್ಲ ಇನ್ನಾವುದೇ ಸದ್ದೂ
ಎಲ್ಲೋ ಕೂಗಿದ ಕೋಳಿಯನ್ನು ಹೊರತು
ಅಥವಾ ಸಶಬ್ದವಾಗಿ ಅವಳ ಹೆಬ್ಬೆಟ್ಟು
ತಿರುಗಿಸಿದಾಗ ಪುಸ್ತಕದ ಮತ್ತೊಂದು ಪುಟವನ್ನು
ದೊಡ್ಡ ಕನ್ನಡಕದ ಮೂಲಕ ನನ್ನಕಡೆ ನೋಡಿ
ವಾಸ್ತವಕ್ಕೆ ಒಂದೆರಡು ಕ್ಷಣ ಬಂದು ಒಡಗೂಡಿ
ಬೆಳ್ಳಿಗೂದಲು ತುಂಬಿದ ತನ್ನ ತಲೆಯನ್ನು ಕೊಡವಿ
"ಮಲಗಿದ್ದೀ ಎಂದುಕೊಂಡಿದ್ದೆನಲ್ಲೋ ಖೋಡಿ!"
ಎಂದು ಪುಸ್ತಕವನ್ನು ಮಾಡಿಕೊಂಡು ಓರೆ
ಕಾದಂಬರಿಯಲ್ಲಿ ಅವಳು ಮುಳುಗುವಳು ಮತ್ತೆ.
ಕನ್ನಡಕ್ಕೆ : ಸಿ. ಪಿ. ರವಿಕುಮಾರ್
ಕವಿತೆಯ ಸ್ವಾರಸ್ಯ: ತನ್ನ ಬಾಲ್ಯದ ನೆನಪಿನಿಂದ ಒಂದು ಚಿತ್ರವನ್ನು ಕವಿ ಇಲ್ಲಿ ಬಿಡಿಸಿದ್ದಾನೆ. ನೀರವ ರಾತ್ರಿಯಲ್ಲಿ ಓದುತ್ತಾ ಕುಳಿತ ವೃದ್ಧೆಯೊಬ್ಬಳ ಚಿತ್ರ. ಕವಿತೆಯಲ್ಲಿ ಬರುವ ಸೂಸನ್ ಅವನ ಮನೆಯಲ್ಲಿ ಅವನ ಸಂಬಂಧಿಕಳಾಗಿರಬಹುದು ಅಥವಾ ಅವನ ಮನೆಯಲ್ಲಿ ಅಡುಗೆ ಮಾಡುವ ಪರಿಚಾರಿಕೆಯಾಗಿರಬಹುದು. ಅವಳು ತಲ್ಲೀನಳಾಗಿ ಓದುತ್ತಿದ್ದುದಾದರೂ ಏನನ್ನು?

ಸೂಸನ್ ದಿನದ ಕೆಲಸಗಳನ್ನೆಲ್ಲಾ ಮುಗಿಸಿ
ಕೂಡುವಳು ಹಚ್ಚಿಟ್ಟುಕೊಂಡು ಮೋಂಬತ್ತಿ
ಕಿಟಕಿಬಾಗಿಲು ದೊಡ್ಡದಾಗಿ ತೆರೆದಿಟ್ಟು
ರಾತ್ರಿಯ ಕುಸುಮಿತ ಗಾಳಿಯನ್ನು ಒಳಬಿಟ್ಟು
ಇಟ್ಟುಕೊಂಡು ತನ್ನದೇ ಹೆಬ್ಬೆಟ್ಟು ಗುರುತಿಗೆ
ಓದುವಾಗ ಗಂಭೀರ ಮುಖದಲ್ಲಿ ನೆರಿಗೆ
ಸೌಮ್ಯ ಕಣ್ಣುಗಳು ಮೆಲ್ಲನೆ ಅತ್ತಿಂದ ಇತ್ತ
ಚಲಿಸಿವುವು ಅಕ್ಷರಗಳನ್ನು ಸವರುತ್ತಾ
ಮೋಂಬತ್ತಿ ಬೆಳಕು ಅಲ್ಲಾಡುವುದು ಒಮ್ಮೆ
ಕಿಟಕಿಯಿಂದ ಬೀಸಿದ ತಂಗಾಳಿಯ ಸುಳಿಗೆ
ಒಮ್ಮೊಮ್ಮೆ ನೀರವದಲ್ಲಿ ಪಿಟಿಪಿಟಿ ಎಂದು
ಗೊಣಗಿಕೊಳ್ಳುವಳು ಅಸ್ಪಷ್ಟ ವಾಕ್ಯವನ್ನೊಂದು
ತಲೆಯಾಡಿಸುತ್ತಾ ಸೂಚಿಸುವಳು ಅಸಮಾಧಾನ ಒಮ್ಮೊಮ್ಮೆ
"ಹೀಗೆ ಮಾಡಬಹುದೇ ನೀನು, ಪೆದ್ದೇ!" ಎಂಬಂತೆ
ಕೇಳಿದ್ದು ನೆನಪಿಲ್ಲ ಇನ್ನಾವುದೇ ಸದ್ದೂ
ಎಲ್ಲೋ ಕೂಗಿದ ಕೋಳಿಯನ್ನು ಹೊರತು
ಅಥವಾ ಸಶಬ್ದವಾಗಿ ಅವಳ ಹೆಬ್ಬೆಟ್ಟು
ತಿರುಗಿಸಿದಾಗ ಪುಸ್ತಕದ ಮತ್ತೊಂದು ಪುಟವನ್ನು
ದೊಡ್ಡ ಕನ್ನಡಕದ ಮೂಲಕ ನನ್ನಕಡೆ ನೋಡಿ
ವಾಸ್ತವಕ್ಕೆ ಒಂದೆರಡು ಕ್ಷಣ ಬಂದು ಒಡಗೂಡಿ
ಬೆಳ್ಳಿಗೂದಲು ತುಂಬಿದ ತನ್ನ ತಲೆಯನ್ನು ಕೊಡವಿ
"ಮಲಗಿದ್ದೀ ಎಂದುಕೊಂಡಿದ್ದೆನಲ್ಲೋ ಖೋಡಿ!"
ಎಂದು ಪುಸ್ತಕವನ್ನು ಮಾಡಿಕೊಂಡು ಓರೆ
ಕಾದಂಬರಿಯಲ್ಲಿ ಅವಳು ಮುಳುಗುವಳು ಮತ್ತೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ