ವಿಕಾಸ
ಸಿ. ಪಿ. ರವಿಕುಮಾರ್
ಧೃತರಾಷ್ಟ್ರ ಕುರುಡನಾದರೂ
ತನ್ನ ಮಕ್ಕಳ ನಿಜವನ್ನು ನೋಡಲಾಗದಷ್ಟೇನಲ್ಲ.
ಆದರೂ ನೋಡದಂತೆ ಇದ್ದುಬಿಟ್ಟ.
ಹೆಂಡತಿಯಂತೆ ತಾನೂ
ಕಣ್ಣಿಗೆ ಕಟ್ಟಿಕೊಂಡ ಕಪ್ಪುವಸ್ತ್ರ.
ಸಭೆಯಲ್ಲಿ ದ್ರೌಪದಿಯು ಕೂಗಿದ್ದು
ಅವನಿಗೆ ಕೇಳಿಸಲಿಲ್ಲ ಎಂದೇನಲ್ಲ.
ಆದರೂ ಕೇಳಿಸದಂತೆ ಇದ್ದುಬಿಟ್ಟ.
ನುಡಿಸುತ್ತಾ ವೀಣೆ ಸುಮ್ಮನಿದ್ದುಬಿಟ್ಟ
ದುಶ್ಶಲೆಯ ಹಾಡನ್ನು ಕೇಳುತ್ತಾ.
ಆದರೂ ಧೃತರಾಷ್ಟ್ರನಲ್ಲಿ ಒಂದು ಗುಣವಿತ್ತು.
ಬೇಕಿದ್ದರೆ ಪಾಂಡುವಿನ ಮಕ್ಕಳ ಮೇಲೆ
ಹೊರಿಸಬಹುದಾಗಿತ್ತು ಸುಳ್ಳು ಆರೋಪ.
ದ್ರೌಪದಿಯ ಶೀಲವನ್ನು ಕುರಿತು
ಮಾತಾಡಬಹುದಾಗಿತ್ತು ನೂರೆಂಟು ಪಾಪ.
ದ್ವಾಪರದಿಂದ ಕಲಿಯುಗಕ್ಕೆ ಇದೇ ವಿಕಾಸ.
ಹೊರಿಸಬಹುದಾಗಿತ್ತು ಸುಳ್ಳು ಆರೋಪ.
ದ್ರೌಪದಿಯ ಶೀಲವನ್ನು ಕುರಿತು
ಮಾತಾಡಬಹುದಾಗಿತ್ತು ನೂರೆಂಟು ಪಾಪ.
ದ್ವಾಪರದಿಂದ ಕಲಿಯುಗಕ್ಕೆ ಇದೇ ವಿಕಾಸ.
(ಚಿತ್ರಕೃಪೆ - ವಿಕಿಪೀಡಿಯ)
ಅದ್ಭುತ ಕಾವ್ಯರಚನೆ ಸರ್
ಪ್ರತ್ಯುತ್ತರಅಳಿಸಿನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ಅಳಿಸಿ